ನಾಗಸಾಧು ಭೇಟಿಯಾದ ಶ್ರೀರಾಮುಲು, ಇಲ್ಲಿ ಆಶೀರ್ವಾದ ಪಡೆದ್ರೆ ಸೋಲೋ ಮಾತೇ ಇಲ್ವಂತೆ!
ವಿಧಾನ ಸಭೆ ಸೋಲಿನಿಂದ ಕಂಗೆಟ್ಟಿರೋ ಶ್ರೀರಾಮುಲು. ಲೋಕಸಭೆ ಚುನಾವಣೆ ತಯಾರಿ ಹೊತ್ತಿನಲ್ಲಿ ನಾಗಸಾಧು ಆಶೀರ್ವಾದ ಪಡೆದಿದ್ದಾರೆ.
ವರದಿ; ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್
ಬಳ್ಳಾರಿ (ಜ.8): ರಾಜ್ಯ ಬಿಜೆಪಿಯಲ್ಲಿ ಪ್ರಭಾವಿ ನಾಯಕರ ಪೈಕಿ ಶ್ರೀರಾಮುಲು ಕೂಡ ಒಬ್ಬರು. ಕೇವಲ ಬಿಜೆಪಿ ಮಾತ್ರವಲ್ಲದೆ ಎಸ್ಟಿ ಸಮುದಾಯದ ನಾಯಕರಲ್ಲಿಯೂ ಶ್ರೀರಾಮುಲು ಮೊದಲಿಗರಾಗಿದ್ದಾರೆ. ಆದರೆ ಕಳೆದ ವರ್ಷ ನಡೆದ ವಿಧಾನ ಸಭೆ ಚುನಾವಣೆ ಸೋಲು ಶ್ರೀರಾಮುಲು ರಾಜಕೀಯ ಜೀವನ ದಲ್ಲಿ ದೊಡ್ಡ ಹಿನ್ನೆಡೆಯಾಗಿತ್ತು.
ಸೋಲಿನಿಂದ ಕಂಗೆಟ್ಟಿರೋ ಶ್ರೀರಾಮುಲು ಇದೀಗ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಈ ಮಧ್ಯೆ
ನಾಗಸಾಧುಗಳ ಆಶೀರ್ವಾದಕ್ಕೆ ಮುಂದಾಗುವ ಮೂಲಕ ಗೆಲುವಿನ ಹಳಿಗೆ ಮರಳಲು ಯತ್ನಿಸುತ್ತಿದ್ದಾರೆ.
ಲೋಕಸಭೆ ಸ್ಪರ್ಧೆ ಬಹುತೇಕ ಖಚಿತ2004ರಿಂದಲೂ ಸ್ಪರ್ಧೆ ಮಾಡಿದ ಎಲ್ಲಾ ಚುನಾವಣೆ ಗೆದ್ದಿರೋ ಶ್ರೀರಾಮುಲು 2023ರ ವಿಧಾನಸಭೆ ಚುನಾವಣೆ ಸೋತ ಬಳಿಕ ಸ್ವಲ್ಪ ಸೈಲೆಂಟ್ ಆಗಿದ್ರು. ಆದರೆ ಇದೀಗ ಮತ್ತೊಮ್ಮೆ ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ. ಈಗಾಗಲೇ ದೇವಸ್ಥಾನಗಳ ದರ್ಶನ ಮಾಡೋದ್ರ ಜೊತೆಗೆ, ಸ್ವಾಮೀಜಿಗಳ ಭೇಟಿಯಾಗಿ ಆಶೀರ್ವಾದ ಪಡೆದಿದ್ರು. ಇದರ ಜೊತೆಗೆ ಶ್ರೀರಾಮುಲು ಇದೀಗ
ದೇವರಕೊಳ್ಳದ ನಾಗಸಾಧು ಶ್ರೀ ದಿಗಂಬರ ರಾಜ ಭಾರತಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿರೋದು ಸಾಕಷ್ಟು ಕುತೂಹಲ ಮೂಡಿಸಿದೆ.
ದತ್ತಪೀಠದಲ್ಲಿ ಗೋರಿ ದ್ವಂಸ ಹಾಗೂ ಭಗವಾಧ್ವಜ ನೆಟ್ಟ ಪ್ರಕರಣ, 7 ವರ್ಷದ ನಂತ್ರ ಮೊದಲ ವಿಚಾರಣೆ!
ಯಾಕೆಂದರೆ ಇಲ್ಲಿಗೆ ಬಂದು ಆಶೀರ್ವಾದ ಪಡೆದವರು ಯಾರು ಸೋತಿಲ್ಲ ಎನ್ನುವ ಪ್ರತೀತಿ ಇದೆ. ಇನ್ನೂ ಸಂಡೂರು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ದೇವರ ಕೊಳ್ಳದ ನಾಗಸಾಧು ಭಾರಿ ಪ್ರಭಾವಿಯಾಗಿದ್ದಾರೆ. ಗುಡ್ಡದ ಮೇಲಿರೋ ಮರದವೊಂದರ ಮೇಲೆ ವಾಸ ಮಾಡ್ತಿರೋ ನಾಗಸಾಧು. ಆರು ತಿಂಗಳು ಮಾತನಾಡ್ತಾರೆ ಇನ್ನಾರು ತಿಂಗಳು ಮೌನವೃತದಲ್ಲಿರುತ್ತಾರೆ. ಭಕ್ತರು ತಮಗೆ ಅರ್ಪಿಸಿದ ಹಣದಿಂದ ಹೊಸಪೇಟೆಯಲ್ಲಿ ಶಾಲೆಯೊಂದನ್ನು ಇವರು ನಡೆಸುತ್ತಾರೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಸಾಮಾನ್ಯರಂತೆ ಇರುವ ನಾಗಸಾಧು ಆಶೀರ್ವಾದ ಪಡೆಯಲು ರಾಜಕೀಯ ಮುಖಂಡರು ಹೆಚ್ಚು ಹೆಚ್ಚು ಬರುತ್ತಾರೆ
ಶ್ರೀರಾಮುಲು ರಾಜಕೀಯ ಹಿನ್ನಲೆ
ರಾಜಕೀಯ ಆರಂಭದ ಮೊದಲ ವಿಧಾನಸಭೆ ಚುನಾವಣೆ 1999ರಲ್ಲಿ ಸೋತಿದ್ದು ಬಿಟ್ರೇ ನಂತರ ನಿರಂತರವಾಗಿ ಗೆದ್ದ ಶ್ರೀರಾಮುಲು 2023ರಲ್ಲಿ ಮತ್ತೊಮ್ಮೆ ಸೋತರು. 2004ರಿಂದ ಗೆಲುವಿನ ಅಭಿಯಾನದ ಆರಂಭವಾಯಿತು. 2008, 2011ರ ಉಪ ಚುನಾವಣೆ 2013, 2018 ಸಾರ್ವತ್ರಿಕ ಚುನಾವಣೆ ಸೇರಿದಂತೆ 2014ರಲ್ಲಿ ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿಯೂ ಗೆದ್ದಿದ್ರು.
ಮೆಚ್ಯೂರಿಟಿ ಹಣದ ಬಿಲ್ ಮಾಡಿಕೊಡಲು ಲಂಚಕ್ಕೆ ಬೇಡಿಕೆ, ಬಿಇಓ ಕಛೇರಿಯ ಗುಮಾಸ್ತ ಲೋಕಾ ಬಲೆಗೆ
ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ 2023ರ ಚುನಾವಣೆ ಯಲ್ಲಿ ತವರು ಕ್ಷೇತ್ರ ಬಳ್ಳಾರಿ ಗ್ರಾಮಾಂತರದಿಂದ ಭಾರಿ ಅಂತರದ ಸೋಲಾಯ್ತು. ಹೀಗಾಗಿ ಮತ್ತೊಮ್ಮೆ ರಾಜಕೀಯ ಅದೃಷ್ಟದ ಪ್ರಯತ್ನದಲ್ಲಿರುವ ಶ್ರೀರಾಮುಲು ಲೋಕಸಭೆ ಚುನಾವಣೆ ತಯಾರಿ ನಡೆಸುತ್ತಿದ್ದಾರೆ.
ನಾಗಸಾಧು ಭೇಟಿ ಮಾಡಿದ ಸಾಲು ಸಾಲು ನಾಯಕರು
ಈ ಹಿಂದೆ ಡಿ.ಕೆ.ಶಿವಕುಮಾರ್, ಉಗ್ರಪ್ಪ, ತುಕಾರಾಂ, ಎಂ.ಪಿ. ಪ್ರಕಾಶ್, ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ, ಆನಂದ ಸಿಂಗ್, ಸಂತೋಷ ಲಾಡ್, ಅನಿಲ್ ಲಾಡ್ ಸೇರಿದಂತೆ ಹತ್ತು ಹಲವು ನಾಯಕರು ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.