ನಮಗೆ ರಾಜ್ಯದ 30 ಜಿಲ್ಲೆಗಳು ಸಮ. ಯಾವುದೇ ತಾರತಮ್ಯ ಮಾಡಿಲ್ಲ. ಉತ್ತರ ಕರ್ನಾಟಕದಲ್ಲಿ 24 ಸಾವಿರ ಕೋಟಿ ರುಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಕೊಡಗಿಗೆ ನೂರು ಕೋಟಿ ಅನುದಾನ ಬಿಡುಗಡೆಯಾಗಿದೆ. ಅಭಿವೃದ್ದಿ ವಿಚಾರದಲ್ಲಿ ರಾಜಕೀಯ ಮಾಡಬೇಡಿ. ದಯವಿಟ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಲು ಅವಕಾಶ ಮಾಡಿಕೊಡಿ ಎಂದು ವಿಪಕ್ಷಗಳಿಗೆ ಮನವಿ ಮಾಡಿದ್ದಾರೆ.

ಹಾಸನ[ಆ.10]: ಬಿಜೆಪಿಯ 30 ಶಾಸಕರು ಜೆಡಿಎಸ್’ಗೆ ಬರಲು ಸಿದ್ದರಿದ್ದಾರೆ. ಆದರೆ ಯಡಿಯೂರಪ್ಪ ಅವರಿಗೆ ನೋವಾಗುವ ಕೆಲಸ ಮಾಡಬಾರದು ಎಂದು ಅವರೆಲ್ಲರಿಗೂ ಜೆಡಿಎಸ್’ಗೆ ಬರೋದು ಬೇಡ ಅಂತ ಹೇಳಿದ್ದೇವೆ. ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಅವರಿಗೆ ಒಳ್ಳೆಯ ಗಿಫ್ಟ್ ಕೊಡುತ್ತೇವೆ ಕಾಯಿರಿ ಎಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.

ನಮಗೆ ರಾಜ್ಯದ 30 ಜಿಲ್ಲೆಗಳು ಸಮ. ಯಾವುದೇ ತಾರತಮ್ಯ ಮಾಡಿಲ್ಲ. ಉತ್ತರ ಕರ್ನಾಟಕದಲ್ಲಿ 24 ಸಾವಿರ ಕೋಟಿ ರುಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಕೊಡಗಿಗೆ ನೂರು ಕೋಟಿ ಅನುದಾನ ಬಿಡುಗಡೆಯಾಗಿದೆ. ಅಭಿವೃದ್ದಿ ವಿಚಾರದಲ್ಲಿ ರಾಜಕೀಯ ಮಾಡಬೇಡಿ. ದಯವಿಟ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಲು ಅವಕಾಶ ಮಾಡಿಕೊಡಿ ಎಂದು ವಿಪಕ್ಷಗಳಿಗೆ ಮನವಿ ಮಾಡಿದ್ದಾರೆ.
ಬಿಜೆಪಿಯವರಿಗೆ ಕೆಲಸವಿಲ್ಲದಿದ್ದಾಗ ಟ್ವೀಟ್ ಮಾಡುತ್ತಾರೆ. ಬಿಜೆಪಿ ಹಾಗೂ ಯಡಿಯೂರಪ್ಪ ಅವರ ಟ್ವೀಟ್’ಗಳಿಗೆ ಉತ್ತರ ನೀಡುತ್ತಾ ಹೋದರೆ ನಾವೂ ಪೊಳ್ಳಾಗುತ್ತೇವೆ. ಅಧಿಕಾರ ದಾಹದಿಂದ ಟ್ವೀಟ್ ಮಾಡುತ್ತಿರುವ ಬಿಜೆಪಿ ಅವರಿಗೆ ನಾಚಿಕೆಯಾಗಬೇಕು ಎಂದು ರೇವಣ್ಣ ಕಿಡಿಕಾರಿದ್ದಾರೆ.

ಇದೇ ವೇಳೆ ಕಾಂಗ್ರೆಸ್’ನವರು ಎ,ಟೀಮ್ ಮತ್ತು ಬಿ ಟೀಮ್ ಎನ್ನದಿದ್ದರೆ ಬಿಜೆಪಿ ಇನ್ನೂ 30 ಸೀಟ್ ಕಡಿಮೆ ಬರುತ್ತಿತ್ತು ಎಂದು ರೇವಣ್ಣ ಅಸಮಾದಾನ ಹೊರಹಾಕಿದ್ದಾರೆ.