Asianet Suvarna News Asianet Suvarna News

ಬಿ. ಸೋಮಶೇಖರ್ ಗೆ ಚಾಮರಾಜನಗರ ಲೋಕಸಭಾ ಟಿಕೆಟ್ ನೀಡಲು ಒತ್ತಾಯ

ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ಬಿ. ಸೋಮಶೇಖರ್ ಅವರಿಗೆ ಕಾಂಗ್ರೆಸ್ ಅವಕಾಶ ಕಲ್ಪಿಸಿಕೊಡಬೇಕೆಂದು ದಲಿತ ಪ್ರಗತಿ ಪರ ಸಂಘಟನೆಯ ತಾಲೂಕು ಒಕ್ಕೂಟದ ಸಂಚಾಲಕ ಎಸ್.ಆರ್. ಶಶಿಕಾಂತ್ ಒತ್ತಾಯಿಸಿದರು.

B. Compulsion to give Chamarajanagar Lok Sabha ticket to Somashekhar snr
Author
First Published Jan 31, 2024, 12:58 PM IST

 ಟಿ. ನರಸೀಪುರ :  ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ಬಿ. ಸೋಮಶೇಖರ್ ಅವರಿಗೆ ಕಾಂಗ್ರೆಸ್ ಅವಕಾಶ ಕಲ್ಪಿಸಿಕೊಡಬೇಕೆಂದು ದಲಿತ ಪ್ರಗತಿ ಪರ ಸಂಘಟನೆಯ ತಾಲೂಕು ಒಕ್ಕೂಟದ ಸಂಚಾಲಕ ಎಸ್.ಆರ್. ಶಶಿಕಾಂತ್ ಒತ್ತಾಯಿಸಿದರು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಸೋಲಿಸಲು ಉತ್ತಮ ಅಭ್ಯರ್ಥಿಗೆ ಪಕ್ಷದ ಹೈಕಮಾಂಡ್ ಟಿಕೆಟ್ ನೀಡಬೇಕು, ಜೆ.ಎಚ್. ಪಟೇಲ್ ಹಾಗೂ ಎಚ್.ಡಿ. ದೇವೇಗೌಡರ ಸರ್ಕಾರದಲ್ಲಿ ಸಚಿವರಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಕ್ಕೆ ತಂದು ಸ್ವಾಭಿಮಾನಿ ಎಂದೇ ಹೆಸರಾದ ಮುತ್ಸದ್ದಿ ರಾಜಕಾರಣಿ ಬಿ. ಸೋಮಶೇಖರ್ ಅವರಿಗೆ ಅವಕಾಶ ನೀಡಬೇಕಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಕಳೆದ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಸೋಲಿಸಬೇಕೆಂಬ ಏಕೈಕ ಕಾರಣಕ್ಕಾಗಿ ನಾವು ಕಾಂಗ್ರೆಸ್ ನಿಂದ ಯಾವುದೇ ಅಭ್ಯರ್ಥಿಯಾದರೂ ಅವರಿಗೆ ಮತ ನೀಡುತ್ತಿದ್ದೆವು. ಆದರೀಗ ಪರಿಸ್ಥಿತಿ ಬದಲಾಗಿದೆ, ಬದಲಾದ ಪರಿಸ್ಥಿತಿಯಲ್ಲಿ ಉತ್ತಮ ಅಭ್ಯರ್ಥಿ ಆಯ್ಕೆ ಅನಿವಾರ್ಯವಾಗಿದೆ. ಹಾಗಾಗಿ ಹಿರಿಯರು, ಅನುಭವಿಗಳೂ ಆದ ಬಿ. ಸೋಮಶೇಖರ್ ಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು. ಅವರಿಗೆ ಟಿಕೆಟ್ ನೀಡಿದ್ದೇ ಆದಲ್ಲಿ ಪ್ರಗತಿ ಪರ ಸಂಘಟನೆಯ ಎಲ್ಲರೂ ಒಗ್ಗೂಡಿ ಅವರನ್ನು ಗೆಲ್ಲಿಸಿ, ಬಿಜೆಪಿ ಸೋಲಿಸಲು ಕಟೀಬದ್ಧರಾಗಿ ಕೆಲಸ ಮಾಡುತ್ತೇವೆ ಎಂದರು.

ಶೇಷಣ್ಣ, ನಿಂಗರಾಜು, ಎಸ್. ನಂಜುಂಡಯ್ಯ, ನಾಗರಾಜು, ಮಂಜುನಾಥ್, ಕಾಂತರಾಜು, ಜಯರಾಮ್, ರಾಜಪ್ಪ, ಕೆ. ಬಸವರಾಜು ಇದ್ದರು.

Follow Us:
Download App:
  • android
  • ios