ಮೈಸೂರು(ಮಾ.15): ಅಯ್ಯಪ್ಪ ಮಾಲಾಧಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಲಕಾಡಿನಲ್ಲಿ ನಡೆದಿದೆ.  ನೀರಿನಲ್ಲಿ ಮುಳಗಿ ಅಯ್ಯಪ್ಪ ಮಾಲಾಧಾರಿ ಮುಳುಗಿ ಸಾವನ್ನಪ್ಪಿದ್ದಾರೆ.

ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ತಲಕಾಡು ನಿಸರ್ಗಧಾಮದಲ್ಲಿ ಘಟನೆ ನಡೆದಿದ್ದು ನಟೇಶ್ (39) ಸಾವನ್ನಪಿದ ಮೃತ ದುರ್ದೈವಿ. ನಟೇಶ್ ಹಾಸನದ ಜಿಲ್ಲೆಯ ಸಂಕೇನಹಳ್ಳಿ ಗ್ರಾಮದ ನಿವಾಸಿ.

ಮಾಲಿಕನಿಗೆ ಬೆದರಿಸಿ ಬೆಂಜ್ ಕಾರು ಕದ್ದೊಯ್ದರು

48 ಜನರು ಶಬರಿಮಲೆಗೆಂದು ಪ್ರಯಾಣ ಹೊರಟಿದ್ದರು. ಸಾರ್ವಜನಿಕರಿಗೆ ಶಬರಿಮಲೆಗೆ ಅನುಮತಿ ನಿರಾಕರಣೆ ಕಾರಣ ಹಿನ್ನಲೆ ಅಯ್ಯಪ್ಪ ಸ್ವಾಮಿ ಭಕ್ತರು ತಲಕಾಡಿಗೆ ಪ್ರವಾಸ ಬಂದಿದ್ದರು. ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.