ಬೆಂಗಳೂರು [ಮಾ.15]:  ವಿದ್ಯುತ್ ಗುತ್ತಿಗೆದಾರನಿಗೆ ಬೆದರಿಸಿ ಐಷಾರಾಮಿ ಬೆಂಜ್ ಕಾರು ಕದ್ದೊಯ್ದಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗುತ್ತಿಗೆದಾರ ಬಾಣಸವಾಡಿ ನಿವಾಸಿ ಎಲ್. ಎಲ್.ರಾಮ್ (55) ಎಂಬುವರ ಕಾರನ್ನು ಆರೋಪಿಗಳು ಅಡ್ಡಗಟ್ಟಿ ಕದ್ದೊಯ್ದಿದ್ದಾರೆ. 

ಈ ಸಂಬಂಧ  ರಾಜಾಜಿನಗರ ನಿವಾಸಿ ಗಿರೀಶ್ ಕುಮಾರ್ ಹಾಗೂ ಆತನ ಸಚಹರರ ವಿರುದ್ಧ ದೂರು ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

ತನ್ನ ತೀಟೆ ತೀರಿಸಿಕೊಳ್ಳಲು ಪ್ರಿಯಕರನ ಜತೆ ಮಗಳ ಮದ್ವೆ ಮಾಡಿದ ಮಹಾತಾಯಿ: ಬಳಿಕ ಆಗಿದ್ದು ದುರಂತ...

ರಾಮ್ ಅವರಿಗೆ ಗಿರೀಶ್ ಪರಿಚಯಸ್ಥನಾಗಿದ್ದಾನೆ. ರಾಮ್ ಅವರು ಎಎಸ್‌ಎಸ್‌ಎ ರಸ್ತೆಯಲ್ಲಿ ಹೆಬ್ಬಾಳ ಮಾರ್ಗವಾಗಿ ಹೋಗುತ್ತಿದ್ದ ವೇಳೆ ಗಿರೀಶ್ ಕುಮಾರ್ ಮತ್ತು ಆತನ ಸಹಚರರು ರಾಮ್ ಕಾರನ್ನು ತಡೆಗಟ್ಟಿದ್ದರು. 

ಆರೋಪಿಗಳು ಚಾಕು ತೋರಿಸಿ ಬೆದರಿಸಿ ಕಾರಿನೊಳಗೆ ಕುಳಿತುಕೊಂಡರು. ಬಳಿಕ 25 ಲಕ್ಷ ರು. ಮೌಲ್ಯದ ಬೆಂಜ್ ಕಾರು ಕಿತ್ತುಕೊಂಡು ಮಾರ್ಗ ನನ್ನನ್ನು ಕಾರಿನಿಂದ ಕೆಳಗೆ ಇಳಿಸಿ ಆರೋಪಿಗಳು ಪರಾರಿಯಾದರು.