Asianet Suvarna News Asianet Suvarna News

ಮಕರ ಸಂಕ್ರಾಂತಿ ವೇಳೆಗೆ ಅಯೋಧ್ಯೆ ರಾಮಮಂದಿರ ಪೂರ್ಣ

ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಪ್ರತಿಷ್ಠಾಪನಾ ಮಹೋತ್ಸವ 2024ರ ಮಕರ ಸಂಕ್ರಾಂತಿ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ರಾಮ ಜನ್ಮಭೂಮಿ ಟ್ರಸ್ವ್‌ನ ಟ್ರಸ್ಟಿಗಳಾದ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಶ್ರೀಗಳು ಸೋಮವಾರ ಹೇಳಿದರು.

Ayodhye Rama Temple Will Complete  Before Sanktarnthi snr
Author
First Published Dec 6, 2022, 6:12 AM IST

  ಮದ್ದೂರು (ಡಿ.06):  ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಪ್ರತಿಷ್ಠಾಪನಾ ಮಹೋತ್ಸವ 2024ರ ಮಕರ ಸಂಕ್ರಾಂತಿ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ರಾಮ ಜನ್ಮಭೂಮಿ ಟ್ರಸ್ವ್‌ನ ಟ್ರಸ್ಟಿಗಳಾದ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಶ್ರೀಗಳು ಸೋಮವಾರ ಹೇಳಿದರು.

ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಹೊಳೆ ಆಂಜನೇಯ  ದೇಗುಲದಲ್ಲಿ (Anjaneya Temple)  ನಡೆದ ಹನುಮ ಜಯಂತಿಯಲ್ಲಿ (Hanuma Jayanthi)  ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಅಯೋಧ್ಯೆಯ ರಾಮ ಮಂದಿರ ಪ್ರತಿಷ್ಠಾಪನಾ ಮಹೋತ್ಸವದ ಮುನ್ನ ನಿಧಿ ಸಂಗ್ರಹಣದ ಅವಶ್ಯಕತೆ ಇದೆ. ಹೀಗಾಗಿ ನಿಧಿ ಸಂಗ್ರಹಣಕ್ಕಾಗಿ ದೇಶಾದ್ಯಂತ ರಥಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದರು.

ರಥಯಾತ್ರೆ ವೇಳೆ ಭಗವತ್‌ ಭಕ್ತರನ್ನು ಪ್ರತಿಷ್ಟಾಪನ ಮಹೋತ್ಸವಕ್ಕೆ ಆಹ್ವಾನಿಸಲಾಗುವುದು. ಎಲ್ಲ ಭಕ್ತರು ಮಹೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ನೀಡುವ ಉದ್ದೇಶದಿಂದ ಒಂದು ತಿಂಗಳ ಕಾಲ ಕಾರ್ಯಕ್ರಮ ನಡೆಸುವ ಆಲೋಚನೆ ಇದೆ ಎಂದರು.

ಶೀಘ್ರ ಗರ್ಭಗುಡಿ ಪೂರ್ಣ

ಲಖ​ನೌ: ಅಯೋಧ್ಯೆ (Ayodhya) ರಾಮಮಂದಿ​ರ (Ram Mandir) ನಿರ್ಮಾಣ ಕಾಮ​ಗಾರಿ ಭರ​ದಿಂದ ಸಾಗಿ​ರುವ ನಡು​ವೆಯೇ ದೇಗು​ಲದ (Temple) ಅತಿ​ಮುಖ್ಯ ಭಾಗ​ವಾದ ಗರ್ಭ​ಗುಡಿಯ (Sanctum Sanctorum) ವಿನ್ಯಾ​ಸವನ್ನು ಅಂತಿ​ಮ​ಗೊ​ಳಿ​ಸ​ಲಾ​ಗಿದೆ. ರಾಮ​ನ​ವಮಿ (Ram Navami) ದಿನ ಸೂರ್ಯ ಕಿರ​ಣ​ಗಳು ರಾಮ​ಲಲ್ಲಾ (ಬಾ​ಲ​ರಾ​ಮ​) ಮೂರ್ತಿಯ (Ram Lalla Idol) ಮೇಲೆ ಬೀಳು​ವಂತೆ ಗರ್ಭ​ಗು​ಡಿಯನ್ನು ವಿನ್ಯಾ​ಸ​ಗೊ​ಳಿ​ಸಲು (Design) ತಜ್ಞರ ತಂಡ ನಿರ್ಧ​ರಿ​ಸಿ​ದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಈ ಹಿಂದೆ ದೇಗು​ಲದ ಗರ್ಭ​ಗು​ಡಿ​ಯನ್ನು ಒಡಿ​ಶಾದ (Odisha) ಜಗತ್‌ ಪ್ರಸಿದ್ಧ ಕೊನಾರ್ಕ್ ಸೂರ್ಯ ದೇವಾ​ಲ​ಯದ (Konark Sun Temple) ಶೈಲಿ​ಯಲ್ಲಿ ವಿನ್ಯಾ​ಸ​ಗೊ​ಳಿ​ಸ​ಬೇಕು ಎಂದು ಸಲಹೆ ನೀಡಿದ್ದರು. ಕೊನಾರ್ಕ್ ಸೂರ್ಯ ದೇವಾ​ಲ​ಯದ ಗರ್ಭ​ಗು​ಡಿ​ಯನ್ನು ಸೂರ್ಯ​ರ​ಶ್ಮಿಯು ಸೂರ್ಯ​ದೇ​ವನ ಮೇಲೆ ಬೀಳು​ವಂತೆ ವಿನ್ಯಾ​ಸ​ಗೊ​ಳಿ​ಸ​ಲಾ​ಗಿದೆ. ಹೀಗಾಗಿ ಈ ಮಾದ​ರಿ​ಯನ್ನು ರಾಮ​ಮಂದಿ​ರ ಗರ್ಭ​ಗು​ಡಿಗೂ ಅಳ​ವ​ಡಿ​ಸ​ಬ​ಹು​ದು ಎಂಬುದು ಮೋದಿ ಸಲಹೆ ಆಗಿ​ತ್ತು.

‘ಈಗ ವಾಸ್ತು​ಶಿ​ಲ್ಪಿ​ಗ​ಳನ್ನು ಒಳ​ಗೊಂಡ ತಜ್ಞರ ಸಮಿತಿ ಗರ್ಭ​ಗುಡಿ ವಿನ್ಯಾಸ ಅಂತಿ​ಮ​ಗೊಳಿಸಿದೆ. ಪ್ರತಿ​ವ​ರ್ಷ ರಾಮ​ನ​ವಮಿ ದಿನ ಸೂರ್ಯ​ರ​ಶ್ಮಿಯು ರಾಮನ ವಿಗ್ರ​ಹದ ಮೇಲೆ ಬೀಳುವಂತೆ ಗರ್ಭ​ಗುಡಿ ವಿನ್ಯಾ​ಸ​ಗೊ​ಳಿ​ಸ​ಲಾ​ಗು​ತ್ತ​ದೆ’ ಎಂದು ರಾಮ​ಮಂದಿರ ಟ್ರಸ್ಟ್‌ ಪ್ರಧಾನ ಕಾರ್ಯ​ದರ್ಶಿ ಚಂಪತ್‌ ರಾಯ್‌ ತಿಳಿ​ಸಿ​ದ್ದಾ​ರೆ. 2023ರ ಡಿಸೆಂಬ​ರ್‌ಗೆ ಗರ್ಭ​ಗುಡಿ ನಿರ್ಮಾಣ ಮುಗಿಸಿ, 2024ರ ಸಂಕ್ರಾತಿಗೆ ಭಕ್ತ​ರಿಗೆ ದೇಗುಲ ತೆರೆಯುವ ಉದ್ದೇ​ಶ​ವಿ​ದೆ.

ಇದನ್ನು ಓದಿ: 21 ಅಡಿ ಎತ್ತರಕ್ಕೆ ಎದ್ದುನಿಂತ ರಾಮಮಂದಿರ: 2024ರ ಸಂಕ್ರಾಂತಿಗೆ ಭಕ್ತರಿಗೆ ದರ್ಶನ ಭಾಗ್ಯ

‘ಈಗಾ​ಗಲೇ ಮಂದಿ​ರದ ಇತರ ಭಾಗ​ಗಳ ನಿರ್ಮಾಣ ಪ್ರಗ​ತಿ​ಯ​ಲ್ಲಿದೆ. ರಾಜ​ಸ್ಥಾ​ನದ ಬನ್ಸಿ ಪಹಾಡ್‌​ಪುರ ಜಿಲ್ಲೆ​ಯಿಂದ ಮರ​ಳು​ಗ​ಲ್ಲು​ಗ​ಳನ್ನು ತರಿ​ಸಿ​ಕೊಂಡು ಕೆತ್ತನೆ ಮಾಡ​ಲಾ​ಗು​ತ್ತಿ​ದೆ. ಮಂದಿರದ ಮೇಲು​ಕ​ಟ್ಟಡ ನಿರ್ಮಾ​ಣಕ್ಕೆ 4.75 ಲಕ್ಷ ಕ್ಯೂಬಿಕ್‌ ಅಡಿ ಮರ​ಳು​ಗಲ್ಲು ಬಳ​ಸ​ಲಾ​ಗು​ತ್ತ​ದೆ’ ಎಂದು ರಾಯ್‌ ಹೇಳಿ​ದ್ದಾ​ರೆ.

ಮಂದಿ​ರಕ್ಕೆ ಆಶಿಷ್‌ ಸೋಂಪುರ ಅವರು ವಾಸ್ತು​ಶಿ​ಲ್ಪಿ​ಯಾ​ಗಿ​ದ್ದಾರೆ. ನಿರ್ಮಾಣ ಸಮಿ​ತಿಗೆ ಮಾಜಿ ಅಧಿ​ಕಾರಿ ನೃಪೇಂದ್ರ ಮಿಶ್ರಾ ಅಧ್ಯ​ಕ್ಷ​ರಾ​ಗಿದ್ದು, ವಾಸ್ತು​ಶಿಲ್ಪ ತಜ್ಞ​ರಾದ ಪ್ರದೀಪ್‌ ಕುಮಾರ್‌ ಹಾಗೂ ಪ್ರೊ. ಗೋಪಾಲ ಕೃಷ್ಣನ್‌ ಹಾಗೂ ಇತ​ರರು ಸಮಿತಿ ಸದ​ಸ್ಯ​ರಾ​ಗಿ​ದ್ದಾ​ರೆ.

ಇದನ್ನೂ ಓದಿ: ಪ್ರಧಾನಿ ಆದ ನಂತರ 2ನೇ ಸಲ ಇಂದು Modi ಅಯೋಧ್ಯೆಗೆ ಭೇಟಿ: ದೀಪೋತ್ಸವಕ್ಕೆ ಚಾಲನೆ

ರಾಜಸ್ಥಾನದ ಬನ್ಸಿ ಪಹಾಡ್‌ಪುರದಿಂದ ಕಲ್ಲುಗಳನ್ನು ತರಿಸಿಕೊಳ್ಳಲಾಗುತ್ತಿದ್ದು, ದೇವಾಲಯದ ಗರ್ಭಗುಡಿಯ ಸ್ತಂಭದ ಕಲ್ಲುಗಳು ಈಗಾಗಲೇ ಸಿದ್ಧವಾಗಿವೆ. ಗರ್ಭಗುಡಿಯ ಮೊದಲ ಮಹಡಿಯ ನಿರ್ಮಾಣವೂ ಬಹುತೇಕ ಪೂರ್ಣವಾಗಿದೆ ಎಂದು ತಿಳಿದುಬಂದಿದೆ. 

ಅಯೋಧ್ಯೆಯ ಮಂದಿರ ನಿರ್ಮಾಣಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಿ ಎಂದು ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ. ಸರ್ಕಾರದ ಬೊಕ್ಕಸದಿಂದ ಮಂದಿರ ನಿರ್ಮಾಣವಾಗಬಾರದು. ಭಕ್ತರ ದೇಣಿಗೆಯಿಂದ ನಿರ್ಮಾಣವಾಗಬೇಕು ಎಂದು 3 ಸಾವಿರ ಕೋಟಿ ನಿಧಿ ಸಂಗ್ರಹಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ. ಭಕ್ತರ ಮನೆಯಿಂದ ಕನಿಷ್ಠ 100 ರು. ದೇಣಿಗೆ ಸಂಗ್ರಹಿಸುವುದು ನಮ್ಮ ಆಶಯವಾಗಿದೆ ಎಂದರು.

ರಾಮ ಮಂದಿರ ನಿರ್ಮಾಣ ಕೇವಲ ನಮ್ಮ ಕನಸಲ್ಲ ಇಡೀ ದೇಶದ ರಾಮ ಭಕ್ತರ ಕನಸಾಗ ಬೇಕು. ಗೋ ಸಾಗಾಣಿಕೆ ಸಹಿತ ವಿವಿಧ ಸಾಮಾಜಿಕ ಕಾರ್ಯಗಳನ್ನು ರಾಮ ಮಂದಿರ ನಿರ್ಮಾಣದ ಬಳಿಕ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯ ವ್ಯಾಪಾರ ಮಾಡುವುದನ್ನು ನಿಷೇಧ ಮಾಡಲಾಗಿದೆ. ಇದೇ ರೀತಿ ಉಡುಪಿಯಲ್ಲೂ ಇಂತಹ ವ್ಯವಸ್ಥೆ ಜಾರಿಗೊಳಿಸುತ್ತಿರ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಶ್ವ ಪ್ರಸನ್ನ ತೀರ್ಥರು ಈ ವಿಚಾರ ಪ್ರಸ್ತಾಪವಾದಾಗ ಕಾನೂನು ಪರಿಣಿತರಿಂದ ಸಲಹೆ ಪಡೆದು ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಈ ವೇಳೆ ದೇಗುಲದ ಪ್ರಧಾನ ಅರ್ಚಕ ಪ್ರದೀಪಾಚಾರ್ಯ, ಸಹಾಯಕ ಸುರೇಶ್‌ ಆಚಾರ್ಯ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್‌, ಮನ್ಮುಲ… ನಿರ್ದೇಶಕಿ ರೂಪಾ ಇದ್ದರು.

5ಕೆಎಂಎನ್‌ ಡಿ29

ಮದ್ದೂರು ಪುರಾಣ ಪ್ರಸಿದ್ಧ ಶ್ರೀಹೊಳೆ ಆಂಜನೇಯ ದೇಗುಲದಲ್ಲಿ ನಡೆದ ಹನುಮ ಜಯಂತಿಯಲ್ಲಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಶ್ರೀಗಳು ಪಾಲ್ಗೊಂಡು ಪೂಜೆ ಸಲ್ಲಿಸಿದರು.

Follow Us:
Download App:
  • android
  • ios