ಬೆಂಗಳೂರು (ಆ. 12): ಪ್ರತಿ ವರ್ಷ ಕರ್ನಾಟಕದ ರಾಜ್ಯೋತ್ಸವದ ಸಂದರ್ಭದಲ್ಲಿ, ಕನ್ನಡತಿಯರ ಪಾತ್ರವನ್ನು ಮರೆಯದೇ ಸ್ಮರಿಸಲು 'ಅವಳ ಹೆಜ್ಜೆ' ಸಂಸ್ಥೆ 2017ರಲ್ಲಿ ಪ್ರಾರಂಭಿಸಿದ ವಿನೂತನ ವಾರ್ಷಿಕ ಹಬ್ಬ 'ಕನ್ನಡತಿ ಉತ್ಸವ' ಮತ್ತೆ ಬಂದಿದೆ. 

“ಅವಳ ಹೆಜ್ಜೆ” ಸಂಸ್ಥೆಯು  ತನ್ನ 3ನೇ ವರ್ಷದ 'ಕನ್ನಡತಿ ಉತ್ಸವ'ದ ಅಂಗವಾಗಿ ರಾಜ್ಯಮಟ್ಟದ ಅಂತರ್‌ಕಾಲೇಜು ಕಿರುನಾಟಕ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಅವಳಹೆಜ್ಜೆ ಸ್ಥಾಪಕಿ ಮತ್ತು ಮುಖ್ಯಸ್ಥೆ ಶಾಂತಲಾ ದಾಮ್ಲೆ ತಿಳಿಸಿದ್ದಾರೆ.

ಇಂದು (ಸೋಮವಾರ) ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ವರ್ಷದ ಕನ್ನಡತಿ ಉತ್ಸವ ಬಗ್ಗೆ ಮಾಹಿತಿ ನೀಡಿದರು.

2019ರ ಕನ್ನಡತಿ  ಉತ್ಸವದಲ್ಲಿ "ಸ್ತ್ರೀ ನೋಟ" ಎಂಬ ವಿಷಯದ ಮೇಲೆ ಕಿರುನಾಟಕ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.  ಕರ್ನಾಟಕದಾದ್ಯಂತ ಆಸಕ್ತ ಕಾಲೇಜುಗಳು  https://avalahejje.in/kn/kannadati-utsava-kn.html ವೆಬ್‌ಸೈಟ್‌ ಮೂಲಕ ಇದೇ ಆಗಸ್ಟ್ 31, 2019ರೊಳಗೆ ಅರ್ಜಿ ಸಲ್ಲಿಸಲು  ಶಾಂತಲಾ ದಾಮ್ಲೆ ಕೋರಿದರು.

ನೋಂದಣಿ ಸಮಯದಲ್ಲಿ ಸಲ್ಲಿಸಬೇಕಾದ ವಿವರ
 1. ನಿರ್ದೇಶಕರ ನುಡಿ
 2. ಕಿರುನಾಟಕದ ಸಾರಾಂಶ
 3. ತಂಡದ ಎಲ್ಲಾ ಸ್ಪರ್ಧಿಗಳ ವಿವರ ಸಲ್ಲಿಸಬೇಕು.

ಅರ್ಹತೆ:
ತಂತ್ರಜ್ಞರನ್ನೂ ಒಳಗೊಂಡಂತೆ ಗರಿಷ್ಠ 8 ಜನರ ತಂಡವಾಗಿರಬೇಕು.
ತಂಡದಲ್ಲಿ ಕನಿಷ್ಠ 4 ಮಹಿಳೆಯರು ಇರಬೇಕು.
ಕಥೆ/ ನಿರ್ದೇಶನ ವಿದ್ಯಾರ್ಥಿಯನಿಯರೇ ಆಗಿರಬೇಕು.
ನಾಟಕದ ಗರಿಷ್ಠ ಕಾಲಾವಧಿ 20 ನಿಮಿಷ.
ಕನ್ನಡದ ನಾಟಕಗಳಿಗೆ ಪ್ರಾಧಾನ್ಯತೆ.

ಈ ಸ್ಪರ್ಧೆಯ ಆಡಿಷನ್ ಸೆಪ್ಟಂಬರ್ ತಿಂಗಳಲ್ಲಿ ಜರುಗಲಿದ್ದು, ಆಯ್ಕೆಯಾದ ತಂಡಗಳು ಈ ವರ್ಷದ ಕನ್ನಡತಿ ಉತ್ಸವದಲ್ಲಿ ಪ್ರದರ್ಶನಕ್ಕೆ ಅರ್ಹತೆ ಪಡೆಯುತ್ತವೆ.  ಹೆಚ್ಚಿನ ವಿವರಗಳಿಗೆ  2avalahejje@gmail.com ಅಥವಾ 9844264157 / 9742607082 ಮೂಲಕ ಸಂಪರ್ಕಿಸಬಹುದು ಎಂದು ಶಾಂತಲಾ ದಾಮ್ಲೆ ಹೇಳಿದರು. 

ಕರ್ನಾಟಕದ ರಾಜ್ಯೋತ್ಸವ ಆಚರಿಸುವ ಸಂದರ್ಭದಲ್ಲಿ, ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಕೊಡುಗೆಯನ್ನು ಮರೆಯದೇ ಸ್ಮರಿಸುವ ಮತ್ತು ಮಹಿಳೆಯರ ಸ್ಪೂರ್ತಿದಾಯಕ ಕಥೆಗಳನ್ನು, ಕಲೆ ಮತ್ತು ಸಾಂಸ್ಕೃತಿಕ ವೇದಿಕೆಯ ಮೂಲಕ ಸಮಾಜಕ್ಕೆ ತಲುಪಿಸುವ ಆಶಯದಿಂದ "ಅವಳ ಹೆಜ್ಜೆ" 2017 ರಲ್ಲಿ "ಕನ್ನಡತಿ ಉತ್ಸವ" ವನ್ನು ಪ್ರಾರಂಭಿಸಿತು. 

ಕಳೆದ ವರ್ಷದ ಕನ್ನಡತಿ ಉತ್ಸವದಲ್ಲಿ ಮೈಸೂರಿನ ಇನ್ಫೋಸಿಸ್, ಶಿವಮೊಗ್ಗದ ಸಹ್ಯಾದ್ರಿ ಕಾಲೇಜುಗಳನ್ನೂ ಸೇರಿದಂತೆ ರಾಜ್ಯದ ಹಲವೆಡೆ ಮಹಿಳೆಯರೇ ನಿರ್ದೇಶಿಸಿ ನಿರ್ಮಾಣ ಮಾಡಿದ ಕಿರುಚಿತ್ರಗಳ ಪ್ರದರ್ಶನ ಏರ್ಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಅವಳ ಹೆಜ್ಜೆಯ ವೆಬ್‌ಸೈಟ್‌ಗೆ ಹೆಜ್ಜೆ ಇಡಲು ಇಲ್ಲಿ ಕ್ಲಿಕ್ ಮಾಡಿ