ಆಟೋ ಚಾಲಕನ ಪತ್ನಿಯ ಕನಸು ಒಂದು ಹಂತದಲ್ಲಿ ಸೀಮಿತ. ಆದರೆ ಇದೆಲ್ಲವನ್ನೂ ಮೀರಿ ಆಟೋ ಚಾಲಕನ ಪತ್ನಿ ಲತಾ ಗಣೇಶ್‌ ಮತ್ತು ಉಪ ಮೇಯರ್‌ ಆಗಿ ಎಸ್‌.ಎನ್‌.ಚನ್ನಬಸಪ್ಪ ಆಯ್ಕೆಯಾಗಿದ್ದಾರೆ.

 ಶಿವಮೊಗ್ಗ[ನ.29]: ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್‌ ಆಗಿ ಆಟೋ ಚಾಲಕನ ಪತ್ನಿ ಲತಾ ಗಣೇಶ್‌ ಮತ್ತು ಉಪ ಮೇಯರ್‌ ಆಗಿ ಎಸ್‌.ಎನ್‌.ಚನ್ನಬಸಪ್ಪ ಆಯ್ಕೆಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬುಧವಾರ ಬೆಳಗ್ಗೆ ನಡೆದ ಚುನಾವಣೆಯಲ್ಲಿ ಅವರು ಕ್ರಮವಾಗಿ ಕಾಂಗ್ರೆಸ್‌ನ ಮಂಜುಳಾ ತಿಪ್ಪೇಶ್‌ ಹಾಗೂ ಎಚ್‌.ಸಿ.ಯೋಗೀಶ್‌ ಅವರನ್ನು ಭಾರೀ ಅಂತರದಿಂದ ಸೋಲಿಸಿದರು. ಮೇಯರ್‌ ಸ್ಥಾನವು ಪರಿಶಿಷ್ಟಜಾತಿ ಮಹಿಳೆಗೆ ಮೀಸಲಾಗಿದ್ದು, ಬಿಜೆಪಿಯಲ್ಲಿ ಪರಿಶಿಷ್ಟಜಾತಿಯ ಒಬ್ಬಳೇ ಮಹಿಳೆ ಇದ್ದ ಕಾರಣ ಮೇಯರ್‌ ಸ್ಥಾನ ಅನಾಯಾಸವಾಗಿ ಲತಾ ಗಣೇಶ್‌ ಅವರಿಗೆ ಒಲಿದು ಬಂತು. ಚುನಾವಣೆ ನಡೆದು ಮೀಸಲು ಪ್ರಕಟಿಸುತ್ತಿದ್ದಂತೆಯೇ ಲತಾ ಗಣೇಶ್‌ ಮೇಯರ್‌ ಆಗುತ್ತಾರೆಂದು ವರದಿ ಪ್ರಕಟಿಸಿತ್ತು.

ಬಿಜೆಪಿ ಅಭ್ಯರ್ಥಿಗಳ ಪರವಾಗಿ 26 ಮತಗಳು ಬಿದ್ದರೆ, ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ 12 ಮತಗಳು ಲಭಿಸಿದವು. ಮೂರು ಮಂದಿ ಪಕ್ಷೇತರರು ಬಿಜೆಪಿಯನ್ನು ಬೆಂಬಲಿಸಿದರೆ, ಒಬ್ಬ ಎಸ್‌ಡಿಪಿಐ, ಒಬ್ಬ ಪಕ್ಷೇತರ ಮತ್ತು ಇಬ್ಬರು ಜೆಡಿಎಸ್‌ ಸದಸ್ಯರು ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಬೆಂಬಲಿಸಿದರು. ಪಕ್ಷೇತರ ಸದಸ್ಯ ಕೇಬಲ್‌ ನಾಗರಾಜ್‌ ತಟಸ್ಥರಾಗಿದ್ದರು.