ಬೆಂಗಳೂರು[ಜು.18]: ಪ್ರಯಾಣಿಕರ ಹಣವನ್ನು ವಾಪಸ್ ನೀಡಿ ಮಾನವೀಯತೆ ಮೆರೆದ  ಆಟೋ ಚಾಲಕರಿಗೆ  ಡಿಸಿಪಿ ರವಿ ಡಿ ಚೆನ್ನಣ್ಣನವರ್ ನಗದು ಬಹುಮಾನ ನೀಡಿ ಸನ್ಮಾನಿಸಿದ್ದಾರೆ.

ಉದ್ಯಮಿ ಶ್ಯಾಮ್ ಸುಂದರ್ ಎಂಬುವವರು ಗಾಂಧಿನಗರದ ಬಿ.ವಿ.ಕೆ ಅಯ್ಯಂಗಾರ್ ರಸ್ತೆಯಲ್ಲಿ ನವೀನ್ ಎಂಬುವವರ ಆಟೊದಲ್ಲಿ ಹಣ ಬಿಟ್ಟು ಹೋಗಿದ್ದರು. ಬ್ಯಾಗ್ ನಲ್ಲಿ ಬ್ಯಾಂಕ್ ಪಾಸ್ಬುಕ್, 1.92 ಲಕ್ಷ ಹಣ ಮತ್ತು ಒಂದು ಕೋಟಿ ಸೆಲ್ಫ್ ಚೆಕ್ ಇತ್ತು. 

ಕೂಡಲೇ ಸ್ನೇಹಿತರಿಗೆ ಈ ವಿಷಯ ತಿಳಿಸಿ, ಬ್ಯಾಗ್ ಸಮೇತ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ತಂದ ನವೀನ್ ಮತ್ತು ವೆಂಕಟೇಶ್ ಅವರಿಗೆ ರವಿ ಡಿ ಚೆನ್ನಣ್ಣನವರ್ ಇಪ್ಪತ್ತು ಸಾವಿರ ನಗದು ಬಹುಮಾನ ನೀಡಿ ಸನ್ಮಾನಿಸಿದ್ದಾರೆ.