ಹುಬ್ಬಳ್ಳಿ(ಜೂ.05): ಆಧ್ಯಾತ್ಮ ಕಲಿಕೆಗೆಂದು ಬಂದು ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಸಿಲುಕಿದ್ದ ಆಸ್ಟ್ರೇಲಿಯಾ ಮೂಲದ ಮಹಿಳೆ ಮೈಶಿಯಾನ್‌ ನಿಯಾಂಗ ಎಂಬುವವರನ್ನು ಬುಧವಾರ ಬೆಳಗ್ಗೆ ಹುಬ್ಬಳ್ಳಿಯಿಂದ ಚೆನ್ನೈ ಮೂಲಕ ಕಳಿಸಿಕೊಡಲಾಗಿದೆ. ಇಂದು(ಶುಕ್ರವಾರ) ಸಂಜೆ ಈಕೆ ಅಲ್ಲಿಂದ ಆಸ್ಟೇಲಿಯಾಕ್ಕೆ ತೆರಳಲಿದ್ದಾರೆ.

ಹುಬ್ಬಳ್ಳಿಗೆ ಬಂದ ವೇಳೆ ಲಾಕ್‌ಡೌನ್‌ ಘೋಷಣೆಯಾದ ಹಿನ್ನೆಲೆಯಲ್ಲಿ ಈಕೆ ಇಲ್ಲಿಯೆ ಇರುವಂತಾಗಿತ್ತು. ಹೀಗಾಗಿ ಮೂರು ತಿಂಗಳಲ್ಲಿ ಹಣವೆಲ್ಲ ಸಂಪೂರ್ಣ ಖರ್ಚಾಗಿತ್ತು. ವಾಪಸ್‌ ಆಸ್ಪ್ರೇಲಿಯಾಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ.
ಈ ಕುರಿತಂತೆ ಜಿಲ್ಲಾಧಿಕಾರಿ ದೀಪಾ ಚೋಳನ್‌ ಅವರನ್ನು ಮೈಶಿಯಾನ್‌ ಸಂಪರ್ಕಿಸಿದ್ದಳು. ಅವರು ಮಹಾನಗರ ಪೊಲೀಸ್‌ ಕಮಿಷನರೆಟ್‌ಗೆ ಸೂಚಿಸಿದ್ದರು. ಅಲ್ಲದೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್‌ ಕೂಡ ಈ ಕುರಿತಂತೆ ಹೆಚ್ಚಿನ ಆಸಕ್ತಿ ತೆಗೆದುಕೊಂಡು ಸಹಾಯ ಮಾಡಿದ್ದರು. ಈಕೆಗೆ ಕೊರೋನಾ ತಪಾಸಣೆ ಮಾಡಿಸಿ ನೆಗೆಟಿವ್‌ ವರದಿ ಬಳಿಕ ಆಸ್ಪ್ರೇಲಿಯಾಕ್ಕೆ ಕಳಿಸಿಕೊಡಲು ವ್ಯವಸ್ಥೆ ಕಲ್ಪಿಸಲಾಯಿತು. 

ಹುಬ್ಬಳ್ಳಿ: ಆಸ್ಟ್ರೇಲಿಯಾ ಮಹಿಳೆ ಪರದಾಟ, ಸ್ವದೇಶಕ್ಕೆ ಕಳುಹಿಸಿ ಮಾನವೀಯತೆ ಮೆರೆದ SP ಕಟಿಯಾರ್

ಆಸ್ಟ್ರೇಲಿಯಾದಲ್ಲಿರುವ ವಿನಾಯಕ ಹಬೀಬ ಎಂಬುವವರನ್ನು ಸಂಪರ್ಕಿಸಿ ಅವರ ಡೆಬಿಟ್‌ ಕಾರ್ಡ್‌ ಬಳಸಿ ಚೆನ್ನೈದಿಂದ ಸಿಡ್ನಿಗೆ ತಲುಪಲು ಕಿಆಫೆಖಿಅಖ ಸಂಸ್ಥೆಯ ವಿಮಾನದ ಟಿಕೆಟ್‌ ನೋಂದಣಿ ಮಾಡಿಸಲಾಗಿದೆ. ಇಲ್ಲಿಂದ ಚೆನ್ನೈಗೆ ತೆರಳಲು ಜಿಲ್ಲಾಡಳಿತ ಇ-ಪಾಸ್‌ ವ್ಯವಸ್ಥೆ ಮಾಡಿದೆ.