* ಭಟ್ಕಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿದ ಎಟಿಎಸ್‌ ತಂಡ * ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಭಟ್ಕಳ ಪಟ್ಟಣ* ಪ್ರಕರಣದ ಪ್ರಮುಖ ಆರೋಪಿಗಳಾದ ರಿಯಾಜ್‌ ಭಟ್ಕಳ್‌ -ಯಾಸೀನ್‌ ಭಟ್ಕಳ್‌ 

ಭಟ್ಕಳ(ಜು.09): 2010ರಲ್ಲಿ ನಡೆದ ಪುಣೆಯ ಜರ್ಮನ್‌ ಬೇಕರಿ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ಎಟಿಎಸ್‌ ತಂಡ ಭಟ್ಕಳಕ್ಕೆ ಆಗಮಿಸಿ ವಿವಿಧ ಕಡೆಯಲ್ಲಿ ತನಿಖೆ ಕೈಗೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಪುಣೆಯ ಜರ್ಮನ್‌ ಬೇಕರಿ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿಗಳಾಗಿ ರಿಯಾಜ್‌ ಭಟ್ಕಳ್‌ ಹಾಗೂ ಯಾಸೀನ್‌ ಭಟ್ಕಳ್‌ ಹೆಸರಿದ್ದು, ಇವರ ಕುರಿತು ಎಟಿಎಸ್‌ ಪುಣೆಯ ಇನ್‌ಸ್ಪೆಕ್ಟರ್‌ ದತ್ತಾತ್ರೇಯ ಮತ್ತು ಸಿಬ್ಬಂದಿ ಭಟ್ಕಳಕ್ಕಾಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.

ತಿಹಾರ್‌ ಜೈಲಿನ ಪ್ರತಿಭಟನೆಗೆ ಉಗ್ರ ಭಟ್ಕಳ್‌ ನಾಯಕತ್ವ!

ರಿಯಾಜ್‌ ಭಟ್ಕಳ ಮುಂಬೈನಲ್ಲಿ ಹುಟ್ಟಿ ಬೆಳೆದಿದ್ದರೂ ಅವರ ತಾಯಿ ಭಟ್ಕಳದವರು. ಸಂಬಂಧಿಕರು ಭಟ್ಕಳದಲ್ಲಿಯೇ ನೆಲೆಸಿರುವುದರಿಂದ ಆ ಕುರಿತು ವಿಚಾರಣೆಗೆ ಎಟಿಎಸ್‌ ಅಧಿಕಾರಿಗಳು ಆಗಮಿಸಿದ್ದಾರೆ ಎನ್ನಲಾಗಿದೆ. ವಿದೇಶಕ್ಕೆ ಹೋಗುವಾಗ ಬಳಸಿದ್ದ ಪಾಸ್‌ಪೋರ್ಟ್‌ ಎಲ್ಲಿ ಪಡೆದಿದ್ದಾರೆ ಎನ್ನುವ ಕುರಿತು ಮಾಹಿತಿಗಾಗಿ ಎಟಿಎಸ್‌ ತಂಡ ತನಿಖೆ ನಡೆಸುತ್ತಿದೆ ಎನ್ನಲಾಗಿದೆ.