ಬೆಂಗಳೂರು [ಮಾ.11]: ಈಗಾಗಲೇ ವಿಶ್ವದಲ್ಲಿ ಕೊರೋನಾ ಎಂಬ ಮಹಾಮಾರಿ ಮರಣ ಮೃದಂಗ ಬಾರಿಸುತ್ತಿದ್ದು, ಸಾವಿರಾರು ಜನರನ್ನು ಬಲಿ ಪಡೆದಿದೆ. ಇದರ ಬೆನ್ನಲ್ಲೇ ಮತ್ತೊಂದು ಆತಂಕದ ಸಂಗತಿ ಬೆಳಕಿಗೆ ಬಂದಿದೆ. 

2020 ಏಪ್ರಿಲ್ ತಿಂಗಳಲ್ಲಿ ಭಾರೀ ಪ್ರಕೃತಿ ವಿಕೋಪ ಸಂಭವಿಸಿ ಜಗತ್ತಿನ ಮೂರನೇ ಒಂದು ಭಾಗ ಜೀವ ಸಂತತಿ ಸಂಪೂರ್ಣ ನಾಶವಾಗಲಿದೆ ಎಂದು ಜ್ಯೋತಿಷಿಯೋರ್ವರು ಭವಿಷ್ಯ ನುಡಿದಿದ್ದಾರೆ. 

ಬೆಂಗಳೂರಿನ ದಿವ್ಯಶ್ರೀ ಕಾಲೇಜ್ ಆಫ್ ಆಸ್ಟ್ರೋಲಜಿಯ ಖಜಾಂಚಿ ಶಿವಣ್ಣ ಎನ್ನುವವರು ಭವಿಷ್ಯ ನುಡಿದಿದ್ದು, ಶನಿ, ಗುರು, ಕುಜ ಗ್ರಹಗಳ ಮಕರ ರಾಶಿ ಪ್ರವೇಶಿಲಿದ್ದು, ಭಾರೀ ವಿಕೋಪವಾಗಲಿದೆ ಎಂದರು. 

ಭಾರತದಲ್ಲಿ ಕೊರೋನಾಗೆ ಮೊದಲ ಬಲಿ? ಕರ್ನಾಟಕದ ವ್ಯಕ್ತಿ ಸಾವು!...

ಮೂರನೇ ಒಂದು ಭಾಗ ಜೀವ ಸಂತತಿ ನಾಶವಾಗಲಿದ್ದು, ಭೂಕಂಪ ಸುನಾಮಿ ಜ್ವಾಲಾಮುಖಿ ಆಗಲಿದ್ದು, ಇದರ ಮುನ್ಸೂಚನೆಯಾಗಿ ರೋಗ ರುಜಿನಗಳು ಹರಡುತ್ತಿವೆ ಎಂದಿದ್ದಾರೆ. 

ಭಯಾನಕ ಕೊರೋನಾ ವೈರಸ್ ಹರಡುತ್ತಿದ್ದು, ಇದು ಹೆಚ್ಚು ಜೀವರಾಶಿ ಬಲಿ ಪಡೆಯುತ್ತಿದೆ. ಕಳೆದ ಕೆಲ ತಿಂಗಳ ಹಿಂದೆ ಸಂಭವಿಸಿದ್ದ ಆಸ್ಟ್ರೇಲಿಯಾ ಕಾಡ್ಗಿಚ್ಚು ಕೂಡ ಒಂದು ಮುನ್ಸೂಚನೆ ಎಂದಿದ್ದಾರೆ.