Asianet Suvarna News Asianet Suvarna News

ರಾಜಕೀಯದ ನಿಖರ ಭವಿಷ್ಯದ ಮೂಲಕ ಖ್ಯಾತಿಗಳಿಸಿದ್ದ ಪಂ.ಶ್ರೀಪಾಲ್‌ ಇನ್ನಿಲ್ಲ

ರಾಜಕೀಯದ ನಿಖರ ಭವಿಷ್ಯ ನುಡಿಯುತ್ತಿದ್ದ ಪಂಡಿತ್ ಶ್ರೀ ಪಾಲ್ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಕೊಲೆಯುಸಿರೆಳೆದಿದ್ದಾರೆ.

Astrologer Pandith Sri pal Passes Away
Author
Bengaluru, First Published Sep 9, 2020, 7:36 AM IST
  • Facebook
  • Twitter
  • Whatsapp

ಅಥಣಿ (ಸೆ.09) : ರಾಜಕೀಯ ಭವಿಷ್ಯ ನುಡಿಯುವ ಮೂಲಕ ಖ್ಯಾತಿಗಳಿಸಿದ್ದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕೋನಟ್ಟಿಯ ಪಂಡಿತ ಶ್ರೀಪಾಲ್‌ ಉಪಾಧ್ಯೆ (78) ಮಂಗಳವಾರ ಬೆಳಗ್ಗೆ ನಿಧನರಾದರು. ನ್ಯುಮೋನಿಯಾದಿಂದ ಬಳಲುತ್ತಿದ್ದ ಉಪಾಧ್ಯೆ ಅವರು ಬೆಳಗಿನ ಜಾವ 6.30ಕ್ಕೆ ನಿಧನರಾದರು.1985ರಲ್ಲಿ ಚುನಾವಣೆಗೆ ಸ್ಪರ್ಧಿಸದ ಆ ಧೀಮಂತ ವ್ಯಕ್ತಿ ಮುಖ್ಯಮಂತ್ರಿ ಆಗ್ತಾರೆ ಎಂದು ಕವಡೆ ಭವಿಷ್ಯ ನುಡಿದಿದ್ದರು. ಅದರಂತೆ ಅಂದು ಚುನಾವಣೆಗೆ ಸ್ಪರ್ಧಿಸದ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದರು.

2018ರ ವಿಧಾನಸಭೆ ಚುನಾವಣೆ ವೇಳೆ ಎಚ್‌.ಡಿ.ಕುಮಾರಸ್ವಾಮಿಯೇ ಮುಖ್ಯಮಂತ್ರಿ ಆಗುತ್ತಾರೆ ಎಂದು ತಿಳಿಸಿದ್ದರು. 2019ರ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್‌ ಗೆಲ್ಲುತ್ತಾರೆ ಎಂದಿದ್ದರು. ಮಾತ್ರವಲ್ಲದೆ, ಉಪ ಚುನಾವಣೆಯಲ್ಲಿ ಅನರ್ಹಗೊಂಡ 12 ಮಂದಿ ಶಾಸಕರಾಗಿ ಆಯ್ಕೆಯಾಗುತ್ತಾರೆ ಎಂದು ಭವಿಷ್ಯ ಹೇಳಿದ್ದರು.

ಕೊರೋನಾ ಭೀತಿ ನಡುವೆಯೂ ಕರ್ನಾಟಕದಲ್ಲಿ ಚುನಾವಣೆಗೆ ಮುಹೂರ್ತ ಫಿಕ್ಸ್ ..

ಸನ್ಮಾನ ಮಾಡಿ ಕಳಿಸಿದ್ದ ಬಿಎಸ್‌ವೈ: ಕಳೆದ ಉಪ ಚುನಾವಣೆ ಸಂದರ್ಭದಲ್ಲಿ ಶ್ರೀಪಾಲ್‌ ಉಪಾಧ್ಯೆಯವರು ನುಡಿದಂತೆ ಬಿಜೆಪಿ ಸರ್ಕಾರವೇ ಅಸ್ತಿತ್ವಕ್ಕೆ ಬಂದಿತ್ತು. ಈ ಹಿನ್ನೆಲೆ ಸ್ವತಃ ಸಿಎಂ ಬಿಎಸ್‌ವೈ ಅವರು ಪಂಡಿತ್‌ ಶ್ರೀಪಾಲ್‌ ಉಪಾಧ್ಯೆ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಗೌರವಿಸಿದ್ದರು.

Follow Us:
Download App:
  • android
  • ios