ಬೆಂಗಳೂರು, (ಸೆ.08) ಕೊರೋನಾ ಭೀತಿ ಮಧ್ಯೆ ರಾಜ್ಯದ ಪ್ರಾಥಮಿಕ, ಮಾಧ್ಯಮಿಕ, ಫೆಡರಲ್ ಸಹಕಾರ ಸಂಘಗಳ ಚುನಾವಣೆಗೆ  ಮುಹೂರ್ತ ಫಿಕ್ಸ್ ಆಗಿದೆ.

ದಿನಾಂಕ 15-11-2020ರೊಳಗಾಗಿ ಚುನಾವಣೆಗಳನ್ನು ಕಡ್ಡಾಯವಾಗಿ ಪೂರ್ಣಗೊಳಿಸುವಂತೆ ಸಹಕಾರ ಚುನಾವಣಾ ಪ್ರಾಧಿಕಾರದ ಆಯುಕ್ತರು ರಾಜ್ಯದ ಎಲ್ಲಾ ಪ್ರಾಥಮಿಕ, ಮಾಧ್ಯಮಕಿ ಹಾಗೂ ಫೆಡರಲ್ ಸಹಕಾರ ಸಂಘಗಳ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರಾಜ್ಯಾದ್ಯಂತ ಮತ್ತೊಂದು ಚುನಾವಣೆ: ಮೀಸಲಾತಿ ಪ್ರಕಟ

ಈಗಾಗಲೇ ಸಹಕಾರ ಸಂಘಗಳ ಪದಾವಧಿ ಮುಗಿದಿದ್ದಲ್ಲಿ ಮತ್ತು ಚುನಾವಣಾ ಪ್ರಕ್ರಿಯೆಗಳು ಆರಂಭವಾಗಿರುವಂತಹ ಸಹಕಾರ ಸಂಘಗಳ ಚುನಾವಣಾ ಪ್ರಕ್ರಿಯೆಗಳನ್ನು ದಿನಾಂಕ 13-07-2020ರಂದು ಯಾವ ಹಂತದಲ್ಲಿದ್ದವೋ ಆ ಹಂತದಿಂದ ಚುನಾವಣಾ ಪ್ರಕ್ರಿಯೆಗಳ್ನು ಮುಂದುವರೆಸಿ, ದಿನಾಂಕ 15-11-2020ರೊಳಗಾಗಿ ಚುನಾವಣೆಗಳನ್ನು ಕಡ್ಡಾಯವಾಗಿ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ.

ಇದರೊಂದಿಗೆ ರಾಜ್ಯದ ಎಲ್ಲಾ ಪ್ರಾಥಮಿಕ, ಮಾಧ್ಯಮಿಕ ಹಾಗೂ ಫೆಡರಲ್ ಸಹಕಾರ ಸಂಘಗಳ ಆಡಳಿತ ಮಂಡಳಿ ಪದಾವದಿ ಮುಕ್ತಾಯಗೊಳ್ಳುವ ಸಂದರ್ಭಕ್ಕನುಗುಣವಾಗಿ ಪದಾವಧಿ ಮುಗಿಯುವ 15 ದಿನಕ್ಕೆ ಮುಂಚಿತವಾಗಿ ಚುನಾವಣೆಗಳನ್ನು ಪೂರ್ಣಗೊಳ್ಳಲಿದೆ.