ಕಲಬುರಗಿ [ಡಿ.30]: ಇನ್ನೇನು 2019 ಕಳೆದು 2020ಕ್ಕೆ ಕಾಲಿಡುತ್ತಿದ್ದೇವೆ. ಇದೇ ವೇಳೆ 2020 ಆಗುಹೋಗುಗಳ ಬಗ್ಗೆ ಖ್ಯಾತ ಜ್ಯೋತಿಷಿಯೋರ್ವರು ಕೆಲ ಭವಿಷ್ಯಗಳನ್ನು ನುಡಿದಿದ್ದಾರೆ. ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಹಾಗೂ ಡಿ.ಕೆ. ಶಿವಕುಮಾರ್ ಬಗ್ಗೆ ಹೇಳಿದ್ದಾರೆ. 

"

ಕಲಬುರಗಿಯಲ್ಲಿ ಮಾತನಾಡಿದ ಜ್ಯೋತಿಷಿ ದ್ವಾರನಾಥ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಲವೊಂದು ಗಂಡಾಂತರಗಳಿವೆ. ಅವುಗಳಿಂದ ತಪ್ಪಿಸಿಕೊಂಡಲ್ಲಿ ಅವರು ಮತ್ತೆ ಪ್ರಧಾನಿ ಆಗುವ ಅವಕಾಶ  ಇದೆ ಎಂದು ಹೇಳಿದ್ದಾರೆ. 

"

ಇನ್ನು ದೇಶದಲ್ಲಿ ಪೌರತ್ವ ಕಾಯ್ದೆ ಸೇರಿದಂತೆ ವಿವಿಧ ವಿಚಾರಗಳಿಗೆ ಕೇಂದ್ರ ಸರ್ಕಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದ್ದು, ಇದರಿಂದ ಶಾಂತಿ ನೆಲೆಸಲು ಪ್ರಧಾನಿ ಅವರು ಶಾರದಾ ಪೀಠ ಹಾಗೂ ದತ್ತಾತ್ರೇಯ ದರ್ಶನ ಮಾಡಬೇಕು ಎಂದು ದ್ವಾರಕನಾಥ್ ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಬಿ ಎಸ್ ಯಡಿಯೂರಪ್ಪ ರಾಜಕೀಯದ ಬಗ್ಗೆಯೂ ಭವಿಷ್ಯ ಹೇಳಿದ ದ್ವಾರಕನಾಥ್ ಅವರು ತಮ್ಮ ಐದು ವರ್ಷದ ಆಡಳಿತ ಅವಧಿಯನ್ನು ಪೂರ್ಣಗೊಳಿಸುತ್ತಾರೆ. ಆದರೆ ಕೆಲ ಎಡರು ತೊಡರುಗಳನ್ನು ಎದುರಿಸುವುದು ಪಕ್ಕಾ. ಅವರ ಸರ್ಕಾರಕ್ಕೆ 2020ರಲ್ಲಿ ಯಾವುದೇ ಸಮಸ್ಯೆ ಎದುರಾಗದು ಎಂದಿದ್ದಾರೆ. 

ಹೊಸ ವರ್ಷದ ಬೆಸ್ಟ್‌ ರೆಸಲ್ಯೂಶನ್‌ಗಳು ಏನ್‌ ಗೊತ್ತಾ...

ಇನ್ನು ತಮ್ಮ ಶಿಷ್ಯ ಎನ್ನುವ ಕಾಂಗ್ರೆಸ್ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಬಗ್ಗೆ ಮಾತನಾಡಿದ ದ್ವಾರಕನಾಥ್ ಅವರು ಎದೆಯುಬ್ಬಿಸಿ ಮಾತನಾಡುವುದನ್ನು ನಿಲ್ಲಿಸಲಿ. ಎಲ್ಲಿದ್ದವರು ಎಲ್ಲಿಗೋ ಹೋಗಿ ನಿಲ್ಲುವಂತಾಯಿತು.  ಎದೆ ಸೆಟೆಸಿ ಮಾತನಾಡುವುದು ನಿಲ್ಲಿಸಿದಲ್ಲಿ ಅವರಿಗೂ ಹಿತ ಎಂದು ದ್ವಾರಕನಾಥ್ ಹೇಳಿದರು.