Asianet Suvarna News Asianet Suvarna News

ಹೊಸಕೋಟೆ: ತರಬಹಳ್ಳಿಯಲ್ಲಿ ಸವರ್ಣೀಯರ ಮೇಲೆ ದಲಿತರ ಮೇಲೆ ಹಲ್ಲೆ

ನಂದಗುಡಿ ಪೊಲೀಸ್‌ ಠಾಣೆ ವ್ಯಾಪ್ತಿಗೆ ಸೇರಿದ ತರಬಹಳ್ಳಿ ಗ್ರಾಮದಲ್ಲಿ ಆ. 22ರಂದು ದಲಿತ ಸಮುದಾಯದ ಬಾಲಕೃಷ್ಣ ಹಾಗೂ ಸುಬ್ರಮಣ್ಯ ಎನ್ನುವವರ ಮೇಲೆ ಸವರ್ಣೀಯರಾದ ವೇಣು, ಪಿಳ್ಳೇಗೌಡ, ನಂದಕುಮಾರ್‌ ಎಂಬುವವರು ಮನೆಯ ಬಳಿಗೆ ತೆರಳಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ವಿಚಾರವಾಗಿ ನಂದಗುಡಿ ಪೊಲೀಸ್‌ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ರಸ್ತೆ ತಡೆ ನಡೆಸಿ ಠಾಣೆ ಎದುರು ಪ್ರತಿಭಟನೆ ನಡೆಸಲಾಯಿತು.

Assault on Dalits on Upper Castes at Hosakote in Bengaluru Rural grg
Author
First Published Aug 26, 2023, 10:42 PM IST

ಹೊಸಕೋಟೆ(ಆ.26): ತಾಲೂಕಿನ ನಂದಗುಡಿ ಹೋಬಳಿ ನೆಲವಾಗಿಲು ಗ್ರಾಪಂ ವ್ಯಾಪ್ತಿಯ ತರಬಹಳ್ಳಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸವರ್ಣೀಯರು ದಲಿತ ಸಮುದಾಯದವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದು, ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ದಲಿತ ಪರ ಸಂಘಟನೆಗಳ ವತಿಯಿಂದ ಪೊಲೀಸ್‌ ಠಾಣೆ ಮುಂದೆ ಪ್ರತಿಭಟನೆ ನಡೆಸಲಾಯಿತು.

ನಂದಗುಡಿ ಪೊಲೀಸ್‌ ಠಾಣೆ ವ್ಯಾಪ್ತಿಗೆ ಸೇರಿದ ತರಬಹಳ್ಳಿ ಗ್ರಾಮದಲ್ಲಿ ಆ. 22ರಂದು ದಲಿತ ಸಮುದಾಯದ ಬಾಲಕೃಷ್ಣ ಹಾಗೂ ಸುಬ್ರಮಣ್ಯ ಎನ್ನುವವರ ಮೇಲೆ ಸವರ್ಣೀಯರಾದ ವೇಣು, ಪಿಳ್ಳೇಗೌಡ, ನಂದಕುಮಾರ್‌ ಎಂಬುವವರು ಮನೆಯ ಬಳಿಗೆ ತೆರಳಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ವಿಚಾರವಾಗಿ ನಂದಗುಡಿ ಪೊಲೀಸ್‌ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ರಸ್ತೆ ತಡೆ ನಡೆಸಿ ಠಾಣೆ ಎದುರು ಪ್ರತಿಭಟನೆ ನಡೆಸಲಾಯಿತು.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ದರೋಡೆಯಿಂದ ತಪ್ಪಿಸಿಕೊಳ್ಳಬೇಕೇ? ಈ ನಿಯಮ ಪಾಲಿಸಿ: ಸಂಸದ ಪ್ರತಾಪ್‌ಸಿಂಹ

ಈ ಸಂದರ್ಭದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ದೊಡ್ಡಹರಳಗೆರೆ ನಾಗೇಶ್‌ ಮಾತನಾಡಿ, ದಲಿತರೆಂದರೆ ಪ್ರಾಣಿಗಳಲ್ಲ ಅವರು ಕೂಡ ಮನುಷ್ಯರೆ. ಅವರಿಗೂ ಕೂಡ ಬದುಕುವ ಹಕ್ಕು ಸಂವಿಧಾನದಲ್ಲಿದೆ. ಆದರೆ ದಲಿತರ ಮನೆಗೆ ನುಗ್ಗಿ ಬೂಟ್‌ ಕಾಲಿನಿಂದ ಒದ್ದು ಹಲ್ಲೆ ಮಾಡಿರುವ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವ ಈ ವಿಚಾರ. ಆದರೆ ಪೊಲೀಸರು ಅವರನ್ನು ಬಂಧಿ​ಸದೆ ಮೀನಮೇಷ ಎಣಿಸುತ್ತಿರುವುದು ದಲಿತರಿಗೆ ಅನ್ಯಾಯ ಮಾಡಿದಂತಾಗಿದೆ. ಆದ್ದರಿಂದ ತ್ವರಿತವಾಗಿ ಆರೋಪಿಗಳನ್ನು ಬಂ​ಸಿ ಕಾನೂನು ಕ್ರಮ ಜರುಗಿಸಬೇಕು ಎಂದರು.

ಹಲ್ಲೆಗೊಳಗಾದ ತರಬಹಳ್ಳಿ ಬಾಲಕೃಷ್ಣ ಮಾತನಾಡಿ, ದೂರು ನೀಡಲು ಠಾಣೆಗೆ ಬಂದಾಗ ಆರೋಪಿಗಳು ಪೊಲೀಸರ ಎದುರೇ ನಮ್ಮ ಮೇಲೆ ದೌರ್ಜನ್ಯ ಮಾಡಲು ಯತ್ನಿಸಿದರು. ದಲಿತ ಸಂಘಟನೆಗಳು ನಿನ್ನ ಬೆಂಬಲಕ್ಕೆ ಬಂದು ಏನು ಮಾಡುತ್ತಾರೋ ನೋಡೋಣ ಎಂದು ದಬ್ಬಾಳಿಕೆ ನಡೆಸುವ ಕೆಲಸ ಮಾಡಿದರು. ಗ್ರಾಮದಲ್ಲಿ ಸವರ್ಣೀಯರಿಂದ ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ನಾವು ಜೀವಿಸಲು ಸದಾ ಕಾಲ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಆದ್ದರಿಂದ ನಮಗೆ ಸೂಕ್ತ ರಕ್ಷಣೆ ಬೇಕು. ನಮಗೆ ರಕ್ಷಣೆ ಕೊಡಲಾಗದಿದ್ದರೆ ನಾವೇ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಅಳಲನ್ನು ತೋಡಿಕೊಂಡರು.

ದಲಿತ ಸಂಘಟನೆಗಳ ಮುಖಂಡರಾದ ಕಿರಣ್‌ ಕುಮಾರ್‌, ಅಪ್ಪಸಂದ್ರ ನಾಗೇಶ್‌, ಅಂಬರೀಶ್‌, ಶ್ರೀಕಾಂತ್‌ ರಾವನ್‌, ಅಮರ್‌ ನಾಥ್‌, ಸಜ್ಜನ್‌ ಉಪಸ್ಥಿತರಿದ್ದರು.

ಬಿಜೆಪಿ 'ದಂಡ'ನಾಯಕರು, ಚಕ್ರವರ್ತಿಗಳು, ಸಾಮ್ರಾಟರೆಲ್ಲಾ ಬೀದಿ ಪಾಲು: ಕುಟುಕಿದ ಕಾಂಗ್ರೆಸ್‌

ಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ಎಚ್ಚರಿಕೆ

ಎರಡು ದಿನಗಳಲ್ಲಿ ತರಬಹಳ್ಳಿ ಗ್ರಾಮದಲ್ಲಿ ದಲಿತರ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂ​ಧಿಸದಿದ್ದರೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ಕಚೇರಿ ಮುಂದೆ ಸಾವಿರಾರು ದಲಿತ ಪರ ಸಂಘಟನೆಗಳ ಸದಸ್ಯರ ಜೊತೆ ತೆರಳಿ ಪ್ರತಿಭಟನೆ ಮಾಡುತ್ತೇವೆ. ಆದ್ದರಿಂದ ಪೊಲೀಸರು ಪ್ರತಿಭಟನೆಗೆ ಆಸ್ಪದ ನೀಡದೆ. ಆರೋಪಿಗಳನ್ನು ಬಂಧಿ​ಸುವ ಕೆಲಸ ಆಗಬೇಕು ಎಚಿದು ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ದೊಡ್ಡಹರಳಗೆರೆ ನಾಗೇಶ್‌ ಎಚ್ಚರಿಕೆ ನೀಡಿದರು.

ಅರೆಬೆತ್ತಲೆ ಮೆರವಣಿಗೆ ಮಾಡ್ತೇವೆ

ದಲಿತರ ರಕ್ಷಣೆಗೆ ಹಲವಾರು ಕಾನೂನು ಇದ್ದರೂ ಕೂಡ ತಾಲೂಕಿನಲ್ಲಿ ಕಳೆದ ಎರಡು ತಿಂಗಳಿಂದ ದಲಿತರ ಮೇಲೆ ಹಲ್ಲೆ ಮಾಡಿರುವ ಪ್ರಕರಣಗಳು ನಡೆದಿವೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಬೆತ್ತಲೆ ಮೆರವಣಿಗೆ ಮೂಲಕ ಭೀಮಾ ಕೋರೆಗಾಂವ್‌ ಯುದ್ಧ ಮಾಡಬೇಕಾಗುತ್ತದೆ. ಪ್ರತಿ ದಲಿತರ ಮನೆಯಿಚಿದ ಶಸ್ತ್ರ ಸಮೇತ ಹೋರಾಟಕ್ಕೆ ಧುಮುಕುತ್ತೇವೆ. ಎಂದು ಭೀಮ್‌ ಸೇವಾ ಸಮಿತಿ ರಾಜ್ಯಾಧ್ಯಕ್ಷ ಶ್ರೀಕಾಂತ್‌ ರಾವಣ್‌ ತಿಳಿಸಿದರು.

Follow Us:
Download App:
  • android
  • ios