ಬೆಳಗಾವಿ (ಫೆ.07):  ಕೋವಿಡ್‌ ಲಸಿಕೆ ಪಡೆದಿದ್ದ ಚಿಕ್ಕೋಡಿ ತಾಲೂಕಿನ ಆಶಾ ಕಾರ್ಯಕರ್ತೆಯೊಬ್ಬರು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

"

 ಆದರೆ, ಅವರ ಸಾವಿಗೆ ಕೋವಿಡ್‌ ಲಸಿಕೆ ಕಾರಣವಲ್ಲ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ವಿ.ಎಸ್‌.ಮುನ್ಯಾಳ ಸ್ಪಷ್ಟನೆ ನೀಡಿದ್ದಾರೆ. 33 ವರ್ಷದ ಆಶಾ ಕಾರ್ಯಕರ್ತೆ ಜ.22ರಂದು ಕೋವಿಶೀಲ್ಡ್‌ ಲಸಿಕೆ ಪಡೆದಿದ್ದರು. ಆದರೆ, ಲಸಿಕೆ ಪಡೆದ ಕೆಲ ದಿನಗಳ ನಂತರ ಪದೇ ಪದೆ ವಾಂತಿಯಾಗಿ, ತೀವ್ರವಾದ ತಲೆನೋವು ಕಾಣಿಸಿಕೊಂಡಿತ್ತು.

 ಚಿಕಿತ್ಸೆಗೆ ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮರುದಿನವೇ ಅವರಿಗೆ ಪಾರ್ಶ್ವವಾಯು ಆಗಿತ್ತು. ಹಾಗಾಗಿ, ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಅವರು ಫೆ.3ರಂದು ಮೃತಪಟ್ಟಿದ್ದರು.

ಫೈಝರ್‌ ಲಸಿಕೆ ತುರ್ತು ಬಳಕೆಗೆ ಭಾರತದಲ್ಲಿ ಅನುಮತಿಯಿಲ್ಲ! .

ಈ ಕುರಿತು ಸ್ಪಷ್ಟನೆ ನೀಡಿರುವ ಡಾ.ಮುನ್ಯಾಳ, ಆಶಾ ಕಾರ್ಯಕರ್ತೆ ಸಾವು ಕೋವಿಡ್‌ ಲಸಿಕೆಯಿಂದ ಆಗಿಲ್ಲ. ಮಿದುಳಲ್ಲಿ ರಕ್ತಸ್ರಾವ ಉಂಟಾಗಿ, ಪಾಶ್ರ್ವವಾಯುವು ಆಗಿತ್ತು. ಇದೇ ಆಶಾ ಕಾರ್ಯಕರ್ತೆ ಸಾವಿಗೆ ಕಾರಣ ಎಂದು ತಿಳಿಸಿದ್ದಾರೆ. ಈ ಕುರಿತು ಆರೋಗ್ಯ ಇಲಾಖೆಯ ಕೇಂದ್ರ ಕಚೇರಿಗೆ ವರದಿ ಸಲ್ಲಿಸಲಾಗಿದೆ ಎಂದಿದ್ದಾರೆ.