ಬೆಂಗಳೂರು[ಸೆ. 10] ಇಡಿ ಡಿಕೆ ಶಿವಕುಮಾರ್ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಒಕ್ಕಲಿಗ ಒಕ್ಕೂಟ ಭಾರೀ ಪ್ರತಿಭಟನೆಗೆ ಮುಂದಾಗಿದೆ. ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಕರವೇ ಮುಖಂಡ ನಾರಾಯಣ ಗೌಡ, ಹಾಗೂ ಕೆಲ ಒಕ್ಕಲಿಗ ಸಮುದಾಯದ ಪ್ರಭಾವಿ ಮಠಾಧೀಶರು ಜಾಥಾದಲ್ಲಿ ಭಾಗವಹಿಸಲಿದ್ದಾರೆ.. ಇನ್ನು, ಡಿಕೆಶಿ ಪರ ನಿಂತ ಒಕ್ಕಲಿಗ ನಾಯಕರಿಗೆ ಸಚಿವ ಸಿ.ಟಿ. ರವಿ ಮತ್ತು  ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಅಪ್ಪಾಜಿ ಗೌಡ ಟಾಂಗ್ ಕೊಟ್ಟಿದ್ದಾರೆ.. 

ವಾಹನ‌ ಸವಾರರೇ ನಾಳೆ ರಸ್ತೆಗಿಳಿಯುವ ಮುನ್ನ ಹುಷಾರ್..!  ಬೆಳಗ್ಗೆ 10 ಗಂಟೆಗೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಪ್ರತಿಭಟನಾ ನಿರತರು  ಸೇರಲಿದ್ದಾರೆ. ಬಳಿಕ ಫ್ರೀಡಂ ಪಾರ್ಕ್ ವರೆಗೆ ಜಾಥಾ ನಡೆಯಲಿದೆ. ಹಾಗಾಗಿ ಟ್ರಾಫಿಕ್ ಬಿಸಿ ಖಂಡಿತ

ಮೆರವಣಿಗೆ ಹೇಗೆ ಸಂಚರಿಸಲಿದೆ..? ಬೆಳಗ್ಗೆ 10 ಗಂಟೆಗೆ ಬಸವನಗುಡಿ ನ್ಯಾಷನಲ್ ಕಾಲೇಜು ಆವರಣದಲ್ಲಿ ಸಭೆ ನಡೆಲಿದೆ. ಬಳಿಕ ನ್ಯಾಷನಲ್ ಕಾಲೇಜು ಗ್ರೌಂಡ್ ನಿಂದ ಬಸವನಗುಡಿ ರಸ್ತೆ ಮೂಲಕ, ಜೆ.ಸಿ.ರೋಡ್ ಜಂಕ್ಷನ್ ನಿಂದ ಜೆ.ಸಿ. ರೋಡ್ , ಟೌನ್ ಹಾಲ್ ಮೆರವಣಿಗೆ ಸಾಗುತ್ತದೆ.. ಹಡ್ಸನ್ ರಸ್ತೆ ಮೂಲಕ ಕಾರ್ಪೋರೇಷನ್, ಮೈಸೂರು ಬ್ಯಾಂಕ್ ಸರ್ಕಲ್, ಪ್ರೀಡಂ ಪಾರ್ಕ್ ಬಂದು ಅಲ್ಲಿ ಸಭೆ ನಡೆಯುತ್ತೆ.. ಸಭೆ ಬಳಿಕ  ಕೆ.ಆರ್. ಸರ್ಕಲ್ , ವಿಧಾನ ಸೌಧ ರಸ್ತೆ ಮೂಲಕ ರಾಜಭವನ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ಮುಂದಾಗಿದ್ದಾರೆ.

ನಗರದಲ್ಲಿ ಖಾಕಿ ಕಟ್ಟೆಚ್ಚರ ವಹಿಸಿದ್ದು, 12 ಡಿಸಿಪಿ, 40 ಎಸಿಪಿ, 106 ಇನ್ಸ್ಪೆಕ್ಟರ್, 50 ಕೆಎಸ್ ಆರ್ ಪಿ, 40 ಸಿಎಆರ್ ತುಕಡಿಗಳನ್ನ ನಿಯೋಜಿಸಲಾಗಿದೆ.. 13 ರಸ್ತೆಗಳಲ್ಲಿ ಮಾರ್ಗ ಬದಲಾವಣೆ, 19 ಪಾಯಿಂಟ್ ನಲ್ಲಿ ಸಂಚಾರಿ ಸಿಬ್ಬಂದಿ ನಿಯೋಜಿಸಿದ್ದು, 9 ಕಡೆ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. 25 ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್ ನಿಷೇಧಿಸಿಲಾಗಿದೆ.

ಇನ್ನು, ಪ್ರತಿಭಟನಾ ರ್ಯಾಲಿ ಆಯೋಜಕರಿಗೆ 15 ಕಂಡಿಷನ್ ಹಾಕಿ ಅನುಮತಿ ನೀಡಲಾಗಿದೆ. ಕೆಲ ಪ್ರಮುಖ ಷರತ್ತುಗಳು ಹೀಗಿವೆ
ಷರತ್ತು - 1 : ನಿಗದಿತ ರಸ್ತೆಯಲ್ಲಿ ಮಾತ್ರ ಮೆರವಣಿಗೆ
ಷರತ್ತು - 2 : ಸಾರ್ವಜನಿಕರಿಗೆ ಅಡಚಣೆ ಅಗದಂತೆ ನೋಡಬೇಕು
ಷರತ್ತು - 3 : ಯಾವುದೇ ಪ್ರಚೋದನಕಾರಿ ಹೇಳಿಕೆ ನೀಡುವಂತಿಲ್ಲ 
ಷರತ್ತು - 4 : ದೊಡ್ಡ ಮಟ್ಟದ ದ್ವನಿ ವರ್ಧಕಗಳನ್ನು  ಬಳಸುವಂತಿಲ್ಲ
ಷರತ್ತು - 5 : ಅಹಿತಕರ ಘಟನೆಗಳು ನಡೆದ್ರೆ ಆಯೋಜಕರೆ ಸಂಪೂರ್ಣ ಹೊಣೆ
ಷರತ್ತು - 6 : ಅನುಮತಿ ನೀಡಿರುವ ಸ್ಥಳ ಬಿಟ್ಟು ಬೇರೆ ರಸ್ತೆ ಬಂದ್ ಮಾಡುವಂತಿಲ್ಲ
ಷರತ್ತು - 7 : ಪಟಾಕಿ ಮತ್ತು ಬೆಂಕಿ ಹಚ್ಚುವಂತಿಲ್ಲ
ಷರತ್ತು - 8 : ಸಾರ್ವಜನಿಕ ಆಸ್ತಿಪಾಸ್ತಿ, ಜೀವಹಾನಿ ಮಾಡಿದವರ ಮೇಲೆ ಕಾನೂನು ಕ್ರಮ
ಷರತ್ತು - 9 : ಮೆರವಣಿಗೆ ಸಮಯದಲ್ಲಿ ಯಾವುದೇ  ಆಯುಧ ತರುವಂತಿಲ್ಲ
ಷರತ್ತು - 10 : ಯಾವುದೇ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುವಂತಿಲ್ಲ