Asianet Suvarna News Asianet Suvarna News

ಉಡುಪಿಯಲ್ಲಿ ಅರವಿಂದ್ ಪುಸ್ತಕ ಹಬ್ಬಕ್ಕೆ ಚಾಲನೆ, ಜ.23 ವರೆಗೆ ನಡೆಯಲಿರುವ ಹಬ್ಬ

ಪ್ರವಾಸಿ ತಾಣಗಳ ತವರೂರು ಉಡುಪಿ ನಗರದಲ್ಲಿ ‘ಅರವಿಂದ್ ಪುಸ್ತಕ ಹಬ್ಬ’ದ ಸಂಭ್ರಮ. ಖ್ಯಾತ ನೇತ್ರತಜ್ಞ ಡಾ. ಕೃಷ್ಣಪ್ರಸಾದ್ ಹಾಗೂ ವಂ. ಚಾರ್ಲ್ಸ್ ವಿನೇಜಸ್ ಅವರು ಮದರ್ ಆಫ್ ಸಾರೋಸ್ ಚರ್ಚ್'ನ ಸಭಾಂಗಣದಲ್ಲಿ ಪುಸ್ತಕ ಹಬ್ಬಕ್ಕೆ ಚಾಲನೆ ನೀಡಿದರು.

Arvind book festival starts in Udupi gow
Author
First Published Jan 19, 2023, 7:04 PM IST

ಉಡುಪಿ (ಜ.19): ಪ್ರವಾಸಿ ತಾಣಗಳ ತವರೂರು ಉಡುಪಿ ನಗರದಲ್ಲಿ ‘ಅರವಿಂದ್ ಪುಸ್ತಕ ಹಬ್ಬ’ದ ಸಂಭ್ರಮ. ಖ್ಯಾತ ನೇತ್ರತಜ್ಞ ಡಾ. ಕೃಷ್ಣಪ್ರಸಾದ್ ಹಾಗೂ ವಂ. ಚಾರ್ಲ್ಸ್ ವಿನೇಜಸ್ ಅವರು ಮದರ್ ಆಫ್ ಸಾರೋಸ್ ಚರ್ಚ್'ನ ಸಭಾಂಗಣದಲ್ಲಿ ಪುಸ್ತಕ ಹಬ್ಬಕ್ಕೆ ಚಾಲನೆ ನೀಡಿದರು. ಮೊಬೈಲ್ ಮತ್ತು ಟಿ.ವಿ.ಯ ಅತಿಯಾದ ಗೀಳಿನಿಂದಾಗಿ ಓದುವ ಪ್ರವೃತ್ತಿ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ‘ಓದು ನಿರಂತರವಾಗಿರಲಿ ಅಭಿಯಾನ’ದಡಿ ಪುಸ್ತಕ ಹಬ್ಬದ ಮೂಲಕ ಜನರಲ್ಲಿ ಪುಸ್ತಕ ಓದುವ ಪ್ರವೃತ್ತಿ ಹೆಚ್ಚಿಸಲು 'ಅರವಿಂದ್ ಇಂಡಿಯಾ' ಸಂಸ್ಥೆ ಪ್ರಾಮಾಣಿಕ ಪ್ರಯತ್ನ ನಡೆಸಿರುವುದು ನಿಜಕ್ಕೂ ಖುಷಿ ಕೊಡುವ ಸಂಗತಿಯೆಂದು ಉದ್ಘಾಟನೆಯ ಸಂದರ್ಭದಲ್ಲಿ ಮದರ್ ಆಫ್ ಸಾರೋಸ್ ಚರ್ಚ್ ನ ವಂ. ಚಾರ್ಲ್ಸ್ ವಿನೇಜಸ್ ಅಭಿಪ್ರಾಯಪಟ್ಟರು.

ಜೋಶಿಮಠ, ಬದರಿನಾಥದ ಬಗ್ಗೆ ಧಾರ್ಮಿಕ ಗ್ರಂಥಗಳಲ್ಲಿ ಹೇಳಿರುವುದು ಕೇಳಿದ್ರೆ ಅಚ್ಚರಿ ಪಡ್ತೀರಿ!

ಉಡುಪಿ ನಗರದ ಮದರ್ ಆಫ್ ಸಾರೋಸ್ ಚರ್ಚ್ ನ ‘ಆವೆ ಮರಿಯ’ ಸಭಾಂಗಣದಲ್ಲಿ ಆರಂಭವಾಗಿರುವ ಅರವಿಂದ್ ಪುಸ್ತಕ ಹಬ್ಬ ಸೋಮವಾರ(ಜ.23)ದವರೆಗೆ ನಡೆಯಲಿದೆ.

Jaipur Literary Festival: 'ಕೈಲಿ ಪುಸ್ತಕ ಇರಬೇಕು, ತಲೇಲಿ ಐಡಿಯಾ ಇರಬೇಕು..'

ಪುಸ್ತಕ ಹಬ್ಬದಲ್ಲಿ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರದ ಪುಸ್ತಕಗಳು, ಶಿಶು ಸಾಹಿತ್ಯ, ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳು, ಆಂಗ್ಲ ಪುಸ್ತಕಗಳನ್ನು ಒಂದೇ ಸೂರಿನಡಿ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥಿತವಾಗಿ ಇಡಲಾಗಿದೆ. ಇದರ ಸದುಪಯೋಗವನ್ನು ಉಡುಪಿಯ ಎಲ್ಲಾ ಪುಸ್ತಕಾಭಿಮಾನಿಗಳು ಪಡೆದುಕೊಳ್ಳಬೇಕೆಂದು ಅರವಿಂದ್ ಸಂಸ್ಥೆಯ ನಿರ್ದೇಶಕರಾದ ಪ್ರವೀಣ್ ಎ.ಕೆ. ಅವರು ವಿನಂತಿಸಿದರು. ಈ ಕಾರ್ಯಕ್ರಮದಲ್ಲಿ ಅರವಿಂದ್ ಇಂಡಿಯಾದ ಶಿವರಾಜ್, ವಿಜಯ್‌ಕುಮಾರ್, ಬಸವಲಿಂಗಪ್ಪ ಮತ್ತು ಮಹೇಶ್ ಮುಂತಾದವರು ಉಪಸ್ಥಿತರಿದ್ದರು.

Follow Us:
Download App:
  • android
  • ios