Asianet Suvarna News Asianet Suvarna News

ಕೊರೋನಾ ಭೀತಿ: HIV ಪೀಡಿತರ ಮನೆ ಮನೆಗೆ ಮಾತ್ರೆ

ಲಾಕ್‌​ಡೌನ್‌ ಹಿನ್ನೆ​ಲೆ​ ಮಾತ್ರೆ ತಲು​ಪಿ​ಸಿದ ಎಆರ್‌ಟಿ ಕೇಂದ್ರದ ತಂಡ| ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾಸ್ಪತ್ರೆ, ಚೈತನ್ಯ ಮಹಿಳಾ ಸಂಘ, ಡ್ಯಾ​ಪ್ಕೋ ಹಾಗೂ ಪೊಲೀಸ್‌ ಇಲಾಖೆ ಸಹಕಾರದೊಂದಿಗೆ ಜಿಲ್ಲಾಸ್ಪತ್ರೆಯ ಎಆರ್‌ಟಿ ಪ್ಲಸ್‌ ಕೇಂದ್ರದ ಸಿಬ್ಬಂದಿ ಸುಮಾರು 800 ಜನ ಎಚ್‌.ಐ.ವಿ ಪೀಡಿತರಿಗೆ ಎ.ಆರ್‌.ಟಿ ಮಾತ್ರೆಗಳನ್ನು ಬೈಕ್‌ ಹಾಗೂ ಇತರೆ ವಾಹನಗಳ ಮೂಲಕ ಮನೆ ಮನೆಗೆ ತಲುಪಿಸುವ ಕಾರ್ಯ|

ART Center team distribute Tablet to HIV Patients Home in Bagalkot District
Author
Bengaluru, First Published Apr 26, 2020, 11:17 AM IST

ಬಾಗಲಕೋಟೆ(ಏ.26): ಮಹಾಮಾರಿ ಕೊರೋನಾ ಭೀತಿಯಿಂದಾಗಿ ಲಾಕ್‌ಡೌನ್‌ ಘೋಷಿಸಿದ ಹಿನ್ನಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ಎ.ಆರ್‌.ಟಿ ಕೇಂದ್ರದ ತಂಡ ಜಿಲ್ಲೆಯ ಎಚ್‌.ಐ.ವಿ ಪೀಡಿತರ ಮನೆ ಮನೆಗೆ ತೆರಳಿ ಎ.ಆರ್‌.ಟಿ ಮಾತ್ರೆಗಳನ್ನು ವಿತರಿಸುವ ಕಾರ್ಯ ಮಾಡಿದೆ.

ಲಾಕ್‌ಡೌನ್‌ ಹಿನ್ನಲೆಯಲ್ಲಿ ಎಚ್‌.ಐ.ವಿ ಸೋಂಕಿತರು ಎ.ಆರ್‌.ಟಿ ಕೇಂದ್ರಗಳಿಗೆ ಬರಲು ವಾಹನಗಳ ಸೌಲಭ್ಯ ಇಲ್ಲದ ಕಾರಣ ಹಾಗೂ ಮಾತ್ರೆಗಳನ್ನು ದಿನಂಪ್ರತಿ ಸಕಾಲದಲ್ಲಿ ತೆಗೆದುಕೊಳ್ಳದೆ ಹೋದಲ್ಲಿ ಎಚ್‌.ಐ.ವಿ ಸೋಂಕಿತರಲ್ಲಿ ರೋಗ ನಿರೊಧಕ ಶಕ್ತಿ ಕ್ಷೀಣಿಸುತ್ತಾ ಇನ್ನಿತರ ಅವಕಾಶವಾದಿ ಕಾಯಿಲೆಗಳಿಗೆ ಎಡೆಮಾಡಕೊಟ್ಟಂತಾಗುತ್ತದೆ. ಈ ಕಾರಣದಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾಸ್ಪತ್ರೆ, ಚೈತನ್ಯ ಮಹಿಳಾ ಸಂಘ, ಡ್ಯಾ​ಪ್ಕೋ ಹಾಗೂ ಪೊಲೀಸ್‌ ಇಲಾಖೆ ಸಹಕಾರದೊಂದಿಗೆ ಜಿಲ್ಲಾಸ್ಪತ್ರೆಯ ಎಆರ್‌ಟಿ ಪ್ಲಸ್‌ ಕೇಂದ್ರದ ಸಿಬ್ಬಂದಿ ಸುಮಾರು 800 ಜನ ಎಚ್‌.ಐ.ವಿ ಪೀಡಿತರಿಗೆ ಎ.ಆರ್‌.ಟಿ ಮಾತ್ರೆಗಳನ್ನು ಬೈಕ್‌ ಹಾಗೂ ಇತರೆ ವಾಹನಗಳ ಮೂಲಕ ಮನೆ ಮನೆಗೆ ತಲುಪಿಸುವ ಕಾರ್ಯ ಮಾಡಲಾಯಿತು.

ಬಾಗಲಕೋಟೆ: ಮಹಾಮಾರಿ ಕೊರೋನಾ ವಿರುದ್ಧ ಹೋರಾಡಿದ ನಾಲ್ವರು ಡಿಸ್ಚಾರ್ಜ್‌

ಮಾತ್ರೆಗಳನ್ನು ವಿತರಿಸಲು ಜಿಲ್ಲಾ ಎ.ಆರ್‌.ಟಿ ಪ್ಲಸ್‌ ಕೇಂದ್ರದ ಎಲ್ಲ ಸಿಬ್ಬಂದಿ ಹಾಗೂ ಸಿ.ಎಸ್‌.ಸಿ ಯೋಜನೆಯ ಸಿಬ್ಬಂದಿಗಳು ಬೆಳಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಹಾಗೂ ಕ್ಷೇತ್ರ​ಗ​ಳಿಗೆ ಭೇಟಿ ನೀಡಿ ತಲುಪಿಸುವ ಕಾರ್ಯ ಮಾಡುತ್ತಿದೆ. ಇನ್ನು ಮಾತ್ರೆ ತಲುಪದಿದ್ದವರು ಎ.ಆರ್‌.ಟಿ ಕೇಂದ್ರಗಳಿಗೆ ಬಂದು ತೆಗೆದುಕೊಂಡು ಹೋಗಲು ಆಗದಿದ್ದಲ್ಲಿ ಹಿರಿಯ ಆಪ್ತ ಸಮಾಲೋಚಕ ಎಚ್‌.ಆರ್‌.ಮರ್ದಿ (ಮೊ.9448210159) ಇವರ ಮೊಬೈಲ್‌ ನಂಬರಿಗೆ ಕರೆ ಮಾಡಿದಲ್ಲಿ ತಮ್ಮ ಹತ್ತಿರದ ಎ.ಆರ್‌.ಟಿ ಕೇಂದ್ರಗಳಲ್ಲಿ ಮತ್ತು ಎ.ಆರ್‌.ಟಿ ಪ್ಲಸ್‌ ಕೇಂದ್ರದ ಸಿಬ್ಬಂದಿಗಳ ಮೂಲಕ ಎ.ಆರ್‌.ಟಿ ಮಾತ್ರೆಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗುತ್ತದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ​ಧಿಕಾರಿ ಡಾ.ಎ.ಎನ್‌.ದೇಸಾಯಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ, ನೋಡಲ್‌ ಅಧಿ​ಕಾರಿ ಡಾ.ಚಂದ್ರಕಾಂತ ಜವಳಿ, ಡ್ಯಾಪ್ಕೋ ಕಾರ್ಯಕ್ರಮಾಧಿ​ಕಾರಿ ಡಾ.ಎ.ಬಿ.ಪಟ್ಟಣಶೆಟ್ಟಿ, ಹಿರಿಯ ವೈದ್ಯಾ​ಧಿ​ಕಾರಿ ಡಾ.ಅನೀಲ ಮಳಗಿ ನೇ​ತೃ​ತ್ವ​ದಲ್ಲಿ ಎ.ಆರ್‌.ಟಿ ಮಾತ್ರೆಗಳನ್ನು ತಲುಪಿಸುವ ಕಾರ್ಯ ಮಾಡುತ್ತಿದ್ದು, ಎಚ್‌.ಐ.ವಿ ಪೀಡಿತರು ಇದರ ಸದುಪಯೋಗ ಪಡೆದು ತಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ಹಿರಿಯ ಆಪ್ತ ಸಮಾಲೋಚಕ ಎಚ್‌.ಆರ್‌.ಮರ್ದಿ ಪ್ರಕಟಣೆಯಲ್ಲಿ ಕೋರಿದ್ದಾರೆ.
 

Follow Us:
Download App:
  • android
  • ios