Asianet Suvarna News Asianet Suvarna News

Hassan Slave ಅರಸೀಕೆರೆಯಲ್ಲಿ ಕೂಲಿ ಅರಸಿ ಬಂದ 53 ಮಂದಿಯನ್ನು ಕೂಡಿ ಹಾಕಿ ಚಿತ್ರಹಿಂಸೆ!

  • ಹಾಸನದ ಅರಸೀಕೆರೆಯಲ್ಲಿ ಜೀತಪದ್ದತಿ ಇನ್ನೂ ಜೀವಂತ
  • 53 ಜೀತದಾಳುಗಳ ರಕ್ಷಿಸಿದ ಅರಸೀಕೆರೆ ಗ್ರಾಮಾಂತರ  ಪೊಲೀಸರು
  • 43 ಪುರುಷರು, 10 ಮಹಿಳೆಯರ ಬಂಧಮುಕ್ತ
Arsikere Police Rescues 53 People from slavery gow
Author
Bengaluru, First Published Apr 5, 2022, 8:32 PM IST

ವರದಿ:ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್ 

ಹಾಸನ(ಎ.5): ಕೆಲಸ ಕೊಡಿಸ್ತೇವೆಂದು ಕರೆದುಕೊಂಡು ಬಂದು, 53 ಮಂದಿಯನ್ನು ಜೀತಕ್ಕಿಟ್ಟು ಅಮಾನವೀಯವಾಗಿ ನಡೆಸಿಕೊಂಡಿರೋ ಪ್ರಕರಣ ಹಾಸನದಲ್ಲಿ ಬೆಳಕಿಗೆ ಬಂದಿದೆ. ಕೂಲಿಯನ್ನ ಅರಸಿ ಬಂದ ಕಾರ್ಮಿಕರನ್ನ ಶೆಡ್ ನಲ್ಲಿ ಕೂಡಿ ಹಾಕಿ, ಊಟ ತಿಂಡಿ, ವಾಸ್ತವ್ಯಕ್ಕೆ ಸರಿಯಾದ ವ್ಯವಸ್ಥೆ ಮಾಡದೇ ಮನುಕುಲವೇ ತಲೆತಗ್ಗಿಸೋ ಹಾಗೆ ನಡೆದುಕೊಂಡಿದ್ದಾರೆ. ಪೊಲೀಸರು ದಾಳಿ ಮಾಡಿ, ಜೀತಮುಕ್ತ ಮಾಡಿದ್ದಾರೆ.

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಅಣ್ಣೇನಹಳ್ಳಿ ಗ್ರಾಮದ ಸಮೀಪ ಇಂತಹದ್ದೊಂದು‌‌ ಅಮಾನವೀಯ ಘಟನೆ ನಡೆದಿದ್ದು, ಬಂಧಿಯಾಗಿದ್ದ 55 ಕ್ಕೂ ಹೆಚ್ಚು ಕೂಲಿ ಕಾರ್ಮಿಕರನ್ನ ಪೊಲೀಸರು ಬಂಧನದಿಂದ ವಿಮುಕ್ತಗೊಳಿಸಿದ್ದಾರೆ. ಇದೇ ಗ್ರಾಮದ ಮುನೇಶ್ ಎಂಬ ವ್ಯಕ್ತಿ ಗ್ರಾಮದ ಹೊರವಲಯದಲ್ಲಿ ಜಮೀನನ್ನು ಗುತ್ತಿದೆ ಪಡೆದು ಶೆಡ್ ನಿರ್ಮಾಣ ಮಾಡಿ, ಕಾರ್ಮಿಕರನ್ನು ಬೇರೆಯವರ ಜಮೀನುಗಳಿಗೆ ಶುಂಠಿ ಕೆಲಸಕ್ಕೆ ಕರೆದುಕೊಂಡು ಹೋಗ್ತಿದ್ದ. ಮಾಹಿತಿ ತಿಳಿದು ಅರಸೀಕೆರೆ ಡಿವೈಎಸ್ಪಿ ಅಶೋಕ್ ಹಾಗೂ ಸರ್ಕಲ್ ಇನ್ಸ್ ಪೆಕ್ಟರ್ ವಸಂತ್ ನೇತೃತ್ವದಲ್ಲಿ ಬೆಳಗ್ಗೆ 5 ಗಂಟೆಗೆ ದಾಳಿ ಮಾಡಿ, ಕಾರ್ಮಿಕರನ್ನ ರಕ್ಷಣೆ ಮಾಡಿದ್ದಾರೆ.

KOLARA MANGO MARKET : ಹಲಾಲ್ - ಝಟ್ಕಾ ಕಟ್ ಆಯ್ತು ಇದೀಗ ಮಾವು ಕಟ್!

ಜೀತ ವಿಮುಕ್ತರಾಗಿರೋರಲ್ಲಿ 55 ಮಂದಿ ಚಿಕ್ಕಮಗಳೂರು, ತುಮಕೂರು, ಮಂಡ್ಯ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಯವರಾಗಿದ್ದು, ಸ್ಥಳಕ್ಕೆ ಎಎಸ್ಪಿ ನಂದಿನಿ ಭೇಟಿ ನೀಡಿ ಸಂತ್ರಸ್ಥರಿಂದ ಮಾಹಿತಿ ಪಡೆದುಕೊಂಡ್ರು. ಶುಂಠಿಕೆಲಸಕ್ಕೆಂದು ಕರೆತಂದು, ಬಂಧನದಲ್ಲಿಟ್ಟು ದುಡಿಸಿಕೊಂಡಿದ್ದಾರೆ. ಮುನೇಶ್ ಎಂಬ ವ್ಯಕ್ತಿಯಿಂದ ಕತ್ಯ ಎಸಗಿದ್ದು, ಈತನಿಗೆ ಸಹಕರಿಸಿದ ಕುಮಾರ, ಲಕ್ಷ್ಮಿ ಹಾಗೂ ಮನು ಎಂಬುವವರ ಮೇಲೂ ಎಫ್ ಐ ಆರ್ ದಾಖಲಾಗಿದೆ ಎಂದ ಎಎಸ್ಪಿ ನಂದಿನಿ ಭೇಟಿ ನೀಡಿ ಮಾಹಿತಿ ನೀಡಿದ್ರು.

ರೈಲು ನಿಲ್ದಾಣ ಅಥವಾ ಬಸ್ ನಿಲ್ದಾಣಗಳಲ್ಲಿ ಬರುತ್ತಿದ್ದ ನಿರ್ಗತಿಕರನ್ನ ಟಾರ್ಗೆಟ್ ಮಾಡಿ, ಕೂಲಿ ಹಾಗೂ ಹಣದ ಆಸೆ ತೋರಿಸಿ ಕರೆದುಕೊಂಡು ಬಂದು ಕೂಡಿ ಹಾಕ್ತಿದ್ದ.  ನಿಜಕ್ಕೂ ಬಂಧಿಯಾಗಿದ್ದ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ, ಬೆಳಗ್ಗೆ 5  ಗಂಟೆಗೆ ಎಲ್ಲರನ್ನೂ ಎಬ್ಬಿಸಿ, ಸೂರ್ಯ ಉದಯವಾಗೋದ್ರೊಳಗೆ ಮಿನಿ ಲಾರಿಯಲ್ಲಿ ಕುರಿ ತುಂಬಿದ ಹಾಗೆ ತುಂಬಿಕೊಂಡು ಶುಂಠಿ ಕೆಲಸಕ್ಕೆ ಕರೆದುಕೊಂಡು ಹೋಗ್ತಿದ್ದ‌. ವಾಪಸ್ಸು ಕರೆದುಕೊಂಡು ಬರ್ತಿದ್ದೆ ಸೂರ್ಯ ಮುಳಿಗಿದ ಬಳಿಕ ಅಂದ್ರೆ ರಾತ್ರಿ 9 ಗಂಟೆಗೆ.

ಪೊಲೀಸ್ ಮೇಲಾಧಿಕಾರಿಗಳ ಮನೆ ಸೇವೆ ಮಾಡುವ ಆರ್ಡರ್ಲಿ ಪದ್ಧತಿ ಬೇಡ, ಉಡುಪಿಯಿಂದ ಅಭಿಯಾನ

ಬೆಳಗ್ಗೆ ಅನ್ನಸಾಂಬಾರ್ ಮಾಡಿದ್ರೆ ಮೂರು ಹೊತ್ತು ಅದನ್ನೇ ಊಟ ಮಾಡಬೇಕಿತ್ತು, ಇಪ್ಪತ್ತು ದಿನ ಮೂರ್ನಾಲ್ಕು ಮಂದಿ ಸೇರಿ ಒಂದೇ ಸೋಪು ಬಳಸಬೇಕಿತ್ತು, ಶೆಡ್ ನಂತಿರೋ ಒಂದೇ ಶೌಚಾಲಯವನ್ನ ಎಲ್ಲರೂ ಬಳಸಬೇಕಿತ್ತು, ಹೆಚ್ಚು ನಾವು ಊರಿಗೆ ಹೋಗ್ತವೆ ಅಂದ್ರೆ ಮನಸ್ಸೋ ಇಚ್ಚೆ ಥಳಿಸುತ್ತಿದ್ದ, ನೀರನ್ನೂ ಹೆಚ್ಚು ಬಳಸುವಂತಿರಲಿಲ್ಲ. ಹೀಗೆ ಬಂಧಿಯಾಗಿದ್ದ ಕಾರ್ಮಿಕರು ನರಕಯಾತನೆಯನ್ನು ಅನುಭವಿಸ್ತಾ ಇದ್ರು. ಅವರೆಲ್ಲಾ ಸ್ನಾನ ಮಾಡಿಯೇ ಎರಡು ತಿಂಗಳ ಮೇಲಾಗಿದೆ. ಜೀತವಿಮುಕ್ತರು ಅಲ್ಲಿ ನಡೆಯುತ್ತಿದ್ದ ಅಮಾನವೀಯ ಘಟನೆಯನ್ನ ಕಣ್ಣೀರಿಡ್ತಾ ಹೇಳಿಕೊಂಡರು.

 ಕಳೆದ ಎರಡು ವರ್ಷದ ಹಿಂದೆಯಷ್ಟೇ ಇದೇ ವ್ಯಕ್ತಿ, ದುದ್ದ ಸಮೀಪದ ಗ್ರಾಮವೊಂದರಲ್ಲಿ 53 ಮಂದಿಯನ್ನು ಕೂಡಿ ಹಾಕಿ ಇದೇ ಕೃತ್ಯವನ್ನ ಎಸಗಿದ್ದ.. ಅಲ್ಲಿಯೂ ಕೂಡಾ ಪೊಲೀಸರು ದಾಳಿ ಮಾಡಿ, ಜೀತವಿಮುಕ್ತರನ್ನಾಗಿ ಮಾಡಿದ್ರು. ಆ ಪ್ರಕರಣದಲ್ಲಿ ಬಂಧಿಯಾಗಿದ್ದ ಆರೋಪಿ ಮುನೇಶ್, ಜಾಮೀನು ಪಡೆದು ಹೊರಗೆ ಬಂದು ಮತ್ತೆ ಇಂತಹದ್ದೇ ಕೆಲಸ ಮಾಡಿರೋದು ಮಾತ್ರ ದುರಂತ.. ಪೊಲೀಸರು ಕಠಿಣವಾದ ಕಾನೂನು ಕ್ರಮ ಕೈಗೊಂಡು ಮತ್ತೆ ಇಂತಹ ಕೆಲಸ ಮಾಡದಂತ ಉಗ್ರ ಶಿಕ್ಷೆಯನ್ನು ನೀಡಬೇಕೆಂದು ಸಾರ್ವಜನಿಕರು ಒತ್ತಾಯ ಮಾಡ್ತಿದ್ದಾರೆ

Follow Us:
Download App:
  • android
  • ios