Asianet Suvarna News Asianet Suvarna News

Bagalkot: ಮದುವೆಯಾಗಿ ದೇಗುಲಕ್ಕೆ ಬಂದವನ ಬಂಧನ

*  ಮದು​ವೆ​ಯಾಗಿ ದೇವಿ ದರ್ಶ​ನಕ್ಕೆ ಬಂದಿದ್ದ ಮದು​ಮಗ ಸಿಐಡಿ ಬಲೆಗೆ 
*  ಪಿಎ​ಸ್‌ಐ ಅಕ್ರ​ಮ ಪ್ರಕ​ರ​ಣ: ಕೋಚಿಂಗ್‌ ಸೆಂಟ​ರ್‌ನ ಮುಖ್ಯಸ್ಥ ಶ್ರೀಕಾಂತನ ಬಂಧಿ​ಸಿ​ದ ಸಿಐಡಿ
*  ಮೇ.14ರಂದು ಅದ್ಧೂರಿಯಾಗಿ ವಿವಾಹ ಮಾಡಿಕೊಂಡಿದ್ದ ಶ್ರೀಕಾಂತ ಚೌರಿ
 

Arrest of the Man Who Came to the Temple after Marriage in Bagalkot grg
Author
Bengaluru, First Published May 19, 2022, 5:25 AM IST

ರಬಕವಿ-ಬನಹಟ್ಟಿ(ಮೇ.19): ಪಿಎ​ಸ್‌ಐ ಅಕ್ರಮ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಮದು​ವೆ​ಯಾಗಿ ಐದು ದಿನ​ಗಳ ನಂತ​ರ ಮೊದಲ ರಾತ್ರಿಯ ಪೂರ್ವ​ದ​ಲ್ಲಿ ದೇವಿಯ ದರ್ಶ​ನ​ಕ್ಕೆಂದು ದೇ​ವಾ​ಲ​ಯಕ್ಕೆ ಬಂದಿ​ದ್ದ ​ಮ​ದು​ಮ​ಗ​ನನ್ನು ಸಿಐಡಿ ಪೊಲೀ​ಸ​ರು ಅಲ್ಲಿಯೇ ಬಂಧಿ​ಸಿ​ ಬೆಂಗ​ಳೂ​ರಿಗೆ ಕರೆ​ದು​ಕೊಂಡು ಹೋಗಿರುವ ಘಟನೆ ಬಾಗ​ಲ​ಕೋಟೆ ಜಿಲ್ಲೆಯ ರಬ​ಕ​ವಿ-ಬನ​ಹಟ್ಟಿತಾಲೂ​ಕಿನ ಯರ​ಗಟ್ಟಿಗ್ರಾಮ​ದಲ್ಲಿ ಮಂಗ​ಳ​ವಾರ ನಡೆ​ದಿ​ದೆ. ಈ ಮೂಲಕ ಪಿಎ​ಸ್‌ಐ ಹುದ್ದೆ ಅಕ್ರ​ಮದ ಘಾಟು ಈಗ ಬಾಗ​ಲ​ಕೋಟೆ ಜಿಲ್ಲೆಗೂ ವ್ಯಾಪಿ​ಸಿದಂತಾ​ಗಿ​ದೆ.

ಬಾಗ​ಲ​ಕೋಟೆ ಜಿಲ್ಲೆಯ ಜಮ​ಖಂಡಿ ತಾಲೂ​ಕಿನ ತೊದ​ಲ​ಬಾ​ಗಿಯ ಕೋಚಿಂಗ್‌ ಸೆಂಟ​ರ್‌​ವೊಂದರ ಮುಖ್ಯಸ್ಥ ಶ್ರೀಕಾಂತ ದುಂಡಪ್ಪ ಚೌರಿ ಬಂಧಿತ ವ್ಯಕ್ತಿ. ಈತ ರಬ​ಕ​ವಿ-ಬನ​ಹ​ಟ್ಟಿ ತಾಲೂ​ಕಿನ ಯರ​ಗಟ್ಟಿಗ್ರಾಮದ ದೇವ​ಸ್ಥಾ​ನಕ್ಕೆ ದೇವರ ದರ್ಶ​ನ​ಕ್ಕೆಂದು ಬಂದಾಗ ಸಿಐಡಿ ಪೊಲೀ​ಸರು ಅ​ಲ್ಲಿಯೇ ಬಂಧಿ​ಸಿದ್ದಾರೆ. ನಂತರ ಆತ​ನನ್ನು ಬನ​ಹಟ್ಟಿಠಾಣೆಗೆ ಕರೆ​ತಂದು ವಿಚಾ​ರಣೆ ನಡೆ​ಸಿ​ದ್ದಾ​ರೆ.

Bagalkot: ಇಲಕಲ್ ಸೀರೆಯಲ್ಲಿ ಅರಳಿದ ಅಯೋಧ್ಯೆಯ ರಾಮ ಮಂದಿರ..!

ಪಿಎಸ್‌ಐ ಹುದ್ದೆ ಅಕ್ರಮದಲ್ಲಿ ​ಶ್ರೀ​ಕಾಂತ್‌ ವಿರುದ್ಧ ಬಲವಾದ ಸಾಕ್ಷ್ಯಗಳನ್ನು ಹೊಂದಿದ್ದ ಅನಾಮಧೇಯ ಅರ್ಜಿಯ ಆಧಾರದಡಿ ಸಿಐಡಿ ಪೊಲೀಸರು ಬಾಗಲಕೋಟೆ ಜಿಲ್ಲೆಗೆ ಬಂದಿದ್ದರು. ನಂತ​ರ ಜಮಖಂಡಿ ತಾಲೂಕಿನ ಕೋಚಿಂಗ್‌ ಸೆಂಟರ್‌ವೊಂದ​ರ ಮುಖ್ಯಸ್ಥ ಶ್ರೀಕಾಂತ ದುಂಡಪ್ಪ ಚೌರಿ ಕುರಿತು ಮಾಹಿತಿ ಕಲೆ​ಹಾಕಿ ನಂತರ ಬಂಧಿ​ಸಿ​ದ್ದಾ​ರೆ.

14ರಂದು ಮದು​ವೆ​ಯಾ​ಗಿ​ದ್ದ:

ಮೇ 14ರಂದು ಜಮಖಂಡಿಯಲ್ಲಿ ಅದ್ಧೂರಿಯಾಗಿ ವಿವಾಹ ಮಾಡಿಕೊಂಡಿದ್ದ ಶ್ರೀಕಾಂತ ಚೌರಿ, ಕೇವಲ ಐದು ದಿನಗಳ ಅಂತರದಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ. ಧಾರವಾಡದಲ್ಲಿನ ಇನ್ಸ್‌​ಫೈ​ರ್‌ ಇಂಡಿಯಾ ಐಎಎಸ್‌ ಮತ್ತು ಕೆಎಎಸ್‌ ಕೋಚಿಂಗ್‌ ಕೇಂದ್ರದ ಮಾಜಿ ನಿರ್ದೇಶಕನಾಗಿದ್ದ. ಪಿಎಸ್‌ಐ ಅಭ್ಯರ್ಥಿಗಳಿಂದ ಲಕ್ಷಗಟ್ಟಲೇ ಹಣ ಪಡೆದು ಹುದ್ದೆ ಡೀಲ್‌ ಮಾಡಿದ್ದಾನೆ ಎಂಬ ಶಂಕೆಯ ಹಿನ್ನೆಲೆಯಲ್ಲಿ 6 ದಿನಗಳ ಹಿಂದೆ ಜಮಖಂಡಿಗೆ ಬಂದಿದ್ದ ಸಿಐಡಿ ತಂಡ ಶ್ರೀಕಾಂತನ ಕುರಿತಾಗಿ ಮಹತ್ವದ ದಾಖಲೆಗಳನ್ನು ಸಂಗ್ರ​ಹಿ​ಸಿತ್ತು ಎಂದು ಮೂಲ​ಗಳು ತಿಳಿ​ಸಿ​ವೆ.

ನಾಟಕ ಮಾಡಿದ್ದಿದ್ರೆ ನಾನು ಸಿಎಂ, ಚರಂತಿಮಠ ಮಂತ್ರಿ ಆಗಿರ್ತಿದ್ವಿ: ಯತ್ನಾ​ಳ

ವಿವಾಹದ ಸಂಭ್ರಮದಲ್ಲಿದ್ದ ಶ್ರೀಕಾಂತ್‌ ರಬಕವಿ-ಬನಹಟ್ಟಿ ತಾಲೂಕಿನ ಯರಗಟ್ಟಿಗ್ರಾಮದ ಯಲ್ಲಮ್ಮ ದೇಗುಲಕ್ಕೆ ಬಂದಾಗ ದೇವಸ್ಥಾನದಲ್ಲೇ ಪೊಲೀಸರು ವಶಕ್ಕೆ ಪಡೆದರು. ನಂತ​ರ ಬನಹಟ್ಟಿ ಠಾಣೆಯಲ್ಲಿ ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ವಿಚಾ​ರ​ಣೆ​ಗಾಗಿ ಆತನನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎಂದು ಮೂಲ​ಗಳು ಖಚಿ​ತ​ಪ​ಡಿ​ಸಿ​ವೆ.

ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಎಂಬ ವಿಸಿಟಿಂಗ್‌ ಕಾರ್ಡ್‌ ಕೂಡ ಆತ​ನಿಂದ ಪತ್ತೆಯಾಗಿದೆ ಎನ್ನ​ಲಾ​ಗಿದೆ. ಮಾತ್ರ​ವಲ್ಲ, ಈತ ಪ್ರಭಾವಿ ರಾಜಕೀಯ ವ್ಯಕ್ತಿಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದ ಎಂಬ ಮಾಹಿ​ತಿಯೂ ಲಭ್ಯ​ವಾ​ಗಿದೆ. ಈ ಬಗ್ಗೆ ಬನಹಟ್ಟಿ ಸಿಪಿಐ ಜಿ.ಕರುಣೇಶಗೌಡ ಮಾತ​ನಾ​ಡಿ, ಸಿಐಡಿ ಪೊಲೀಸರು ಶ್ರೀಕಾಂತ ಎಂಬಾತನನ್ನು ತನಿಖೆಗೆ ಬನಹಟ್ಟಿಠಾಣೆಗೆ ಕರೆತಂದಿದ್ದು ನಂತರದ ಬೆಳವಣಿಗೆಗಳ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂಂದಿ​ದ್ದಾ​ರೆ.
 

Follow Us:
Download App:
  • android
  • ios