Asianet Suvarna News Asianet Suvarna News

ಕೇರಳ-ಕರ್ನಾಟಕ ನಿತ್ಯ ಪ್ರಯಾಣಿಕರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯವಲ್ಲ?

 ಕೇರಳ ಗಡಿಯಲ್ಲಿ ಇರುವವರು ಮಂಗಳೂರನ್ನೇ ಬಹಳಷ್ಟು ಆಶ್ರಯಿಸಿದ್ದಾರೆ. ನಿತ್ಯ ಬಂದು ಹೋಗೋರಿಗೆ ಅನಾನುಕೂಲತೆ ಆಗಬಾರದು ಎಂದು ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.

Arogya sethu App Tracks  Kerala Karnataka Daily Passengers  Says Ashwath Narayan snr
Author
Bengaluru, First Published Feb 24, 2021, 4:39 PM IST

ಬೆಂಗಳೂರು (ಫೆ.24):  'ಕೇರಳದಿಂದ ಪ್ರತಿನಿತ್ಯ ಬರೋರು ನೆಗೆಟಿವ್ ಸರ್ಟಿಫಿಕೇಟ್ ತರೋದು ಸಮಸ್ಯೆಯಾಗುತ್ತೆ'   ಕೇರಳ ಗಡಿಯಲ್ಲಿ ಇರುವವರು ಮಂಗಳೂರನ್ನೇ ಬಹಳಷ್ಟು ಆಶ್ರಯಿಸಿದ್ದಾರೆ. ನಿತ್ಯ ಬಂದು ಹೋಗೋರಿಗೆ ಅನಾನುಕೂಲತೆ ಆಗಬಾರದು ಎಂದು ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಹೇಳಿದರು.

ಮಂಗಳೂರಿನಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಕೇರಳ ಗಡಿಯಲ್ಲಿ ಇರುವವರು ಮಂಗಳೂರನ್ನೇ ಬಹಳಷ್ಟು ಆಶ್ರಯಿಸಿದ್ದಾರೆ.  ನಿತ್ಯ ಅವರಿಗೆ ಕೇವಲ ಸ್ಕ್ರೀನಿಂಗ್ ಆಗಬೇಕು, ಪರೀಕ್ಷೆ ಆಗಬಾರದು.  ಆರೋಗ್ಯ ಸೇತು ಆಪ್ ಹಾಕಿಸಿ ಟ್ರಾಕಿಂಗ್ ಮತ್ತು ಮಾನಿಟರ್ ಮಾಡಬೇಕು. ನಿತ್ಯ ಶಾಲಾ-ಕಾಲೇಜು, ಉದ್ಯೋಗಿಗಳಿಗೆ ಅನಾನುಕೂಲತೆ ಆಗಬಾರದು ಎಂದು ಅಶ್ವತ್ಥ್ ನಾರಾಯಣ್ ಹೇಳಿದರು. 

ಕೊರೋನಾ ಹೆಚ್ಚಳ: 5 ರಾಜ್ಯಗಳಲ್ಲಿ ಹೈ ಅಲರ್ಟ್, ಗಡಿಗಳಲ್ಲಿ ಟೆಸ್ಟ್ ಕಡ್ಡಾಯ

ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ‌ಮತ್ತು ಆರೋಗ್ಯ ಸಚಿವ ಸುಧಾಕರ್ ಗೆ ತಿಳಿಸುತ್ತೇನೆ.  ಇಲ್ಲೇ ಬಂದು ಇರೋರು, ವಾಸ ಮಾಡೋರಿಗೆ‌ ನೆಗೆಟಿವ್ ರಿಪೋರ್ಟ್ ಬೇಕು.  ಅಂಥವರಿಗೆ ನೆಗೆಟಿವ್ ವರದಿ ಕಡ್ಡಾಯ ಇರಬೇಕು.  ಆದ್ರೆ ಪ್ರತಿನಿತ್ಯ ಬಂದು ಹೋಗೋರು ಎಷ್ಟು ಸಲ ಅಂತ ನೆಗೆಟಿವ್ ‌ರಿಪೋರ್ಟ್ ತರಲಾಗುತ್ತದೆ ಎಂದು ಅಶ್ವತ್ಥ್ ನಾರಾಯಣ್  ಕೇಳಿದರು.

ನಿತ್ಯ ಸರ್ಟಿಫಿಕೇಟ್ ತರುವುದು ಕಷ್ಟವಾಗುತ್ತದೆ.  ಹೀಗಾಗಿ ಆರೋಗ್ಯ ಸೇತು ಆಪ್ ಮೂಲಕ ಅವರನ್ನ ಟ್ಯ್ಯಾಕ್ ಮಾಡಬೇಕಿದೆ ಎಂದು ಅಶ್ವತ್ಥ್ ನಾರಾಯಣ್ ಹೇಳಿದರು. 

Follow Us:
Download App:
  • android
  • ios