Asianet Suvarna News Asianet Suvarna News

ಬಿಸಿಲ ತಾಪದಿಂದ ನಳ್ಳಿ ಉದುರುವಿಕೆ: ಅಡಕೆ ಬೆಳೆಗಾರರು ಕಂಗಾಲು!

ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಅಡಕೆ ಹರಳು (ನಳ್ಳಿ, ಎಳೆಯ ಅಡಕೆ) ಉದುರುವಿಕೆಯಿಂದ ಅಡಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಅವಳಿ ತಾಲೂಕು ಭೌಗೋಳಿಕವಾಗಿ 107586 ಹೆಕ್ಟೇರ್ ವಿಸ್ತೀರ್ಣ ಹೊಂದಿದೆ.

arecanut problem temperature increase in udupi due to summer gvd
Author
First Published May 15, 2024, 11:45 PM IST

ರಾಂ ಅಜೆಕಾರು

ಕಾರ್ಕಳ (ಮೇ.15): ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಅಡಕೆ ಹರಳು (ನಳ್ಳಿ, ಎಳೆಯ ಅಡಕೆ) ಉದುರುವಿಕೆಯಿಂದ ಅಡಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಅವಳಿ ತಾಲೂಕು ಭೌಗೋಳಿಕವಾಗಿ 107586 ಹೆಕ್ಟೇರ್ ವಿಸ್ತೀರ್ಣ ಹೊಂದಿದೆ. ಅವುಗಳಲ್ಲಿ ‌32800 ಹೆಕ್ಟೇರ್ ಅರಣ್ಯ ಭೂಮಿಯಿದ್ದು, 28227 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಯಿದೆ. 19677 ಹೆಕ್ಟೇರ್ ತೋಟಗಾರಿಕಾ ಬೆಳೆಯಿದೆ.

ಅದರಲ್ಲಿ 8860 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆ , 6600 ಹೆಕ್ಟೇರ್ ವಿಸ್ತೀರ್ಣ ತೆಂಗುಬೆಳೆ‌, ಗೇರು 777 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಿದೆ‌, 2000 ಹೆಕ್ಟೇರ್ ಪ್ರದೇಶಕ ರಬ್ಬರ್ ಬೆಳೆಬೆಳೆಯಲಾಗಿದೆ. ಆದರೆ ತೋಟಗಾರಿಕಾ ಬೆಳೆಗಳ ಪೈಕಿ ಅಡಕೆ ಬೆಳೆಯು ಹೆಚ್ಚಿದ್ದು , ಅಡಕೆ ಬೆಳೆದ ರೈತರು ಹರಳು ಉದುರುವಿಕೆಯಿಂದ ಕಂಗಾಲಾಗಿಸಿದೆ. ಅದರಿಂದಾಗಿ ಈ ವಾರ್ಷಿಕ ಫಸಲಿನಲ್ಲಿ ಆದಾಯ ಕುಂಠಿತವಾಗುವಂತೆ ಮಾಡಿದೆ

ಬಹಿರಂಗ ಸವಾಲಿಗೆ ಸೂಕ್ತ ಪ್ರತ್ಯುತ್ತರ ನೀಡಿ: ಸಂಸದ ಬಿ.ವೈ.ರಾಘವೇಂದ್ರ

ಹರಳು ಉದುರಲು ಕಾರಣಗಳೇನು: ಕರಾವಳಿ ಪ್ರದೇಶಗಳಲ್ಲಿ ಅಡಕೆ ಬೆಳೆ ಹೆಚ್ಚಿದ್ದು ಈ ಬಾರಿ ಬರ ಹಾಗೂ ಬಿಸಿಲಿನ ತಾಪಮಾನದಲ್ಲಿ ಏರುಪೇರಾದ ಕಾರಣ ಅಂತರ್ಜಲ ಕುಸಿತಗೊಂಡಿದೆ. ಇದರಿಂದಾಗಿ ಕೆಲವೆಡೆಗಳಲ್ಲಿ ಅಡಕೆ ಮರಗಳಿಗೆ ನೀರಿಲ್ಲದೆ ಸಮಸ್ಯೆ ಉಂಟಾಗಿದೆ. ಕೆಲವೆಡೆಗಳಲ್ಲಿ ಅತ್ಯಧಿಕ ನೀರು ಉಣಿಸಿ ಸಮಸ್ಯೆ ಉಂಟಾಗಿದೆ. ಇದು ಹರಳು ಉದುರಲು ಕಾರಣವಾಗಿದೆ.

ನಿರ್ವಹಣೆ ಹೇಗೆ: ಹರಳು ಉದುರುವಿಕೆ ಕ್ರಮಗಳಲ್ಲಿ ನೀರು ನಿರ್ವಹಣೆಯು ಮುಖ್ಯವಾಗಿದೆ. ಕರಾವಳಿ ಪ್ರದೇಶಗಳ ಮಣ್ಣಿನಲ್ಲಿ ಆಮ್ಲೀಯ ಅಂಶಗಳು ಹೆಚ್ಚಿರುವುದರಿಂದ ಸುಣ್ಣ ಹಾಕುವುದು ಅವಶ್ಯಕವಾಗಿದೆ. ರಾಸಾಯನಿಕ ಗೊಬ್ಬರ, ಹಾಗೂ ಸಾವಯವ ಗೊಬ್ಬರಗಳನ್ನು ಪ್ರಮಾಣ ಬದ್ದವಾಗಿ ನೀಡಬೇಕು. ಪೊಟ್ಯಾಷ್ ಅಂಶ ನೀಡಿದರೆ ಮುಂದಿನ ಫಸಲಿನಲ್ಲಿ ಹೆಚ್ಚಳವಾಗಲಿದೆ. ಬಸಿ ಕಾಲುವೆಗಳ ನಿರ್ಮಾಣ, ಪೋಷಕಾಂಶಗಳ ನೀಡುವಿಕೆ ಹರಳು ಉದುರುವಿಕೆ ಕಡಿಮೆ ಮಾಡಬಹುದು.

ಸಮಗ್ರ ಕೃಷಿ ಗೆ ಒತ್ತು ನೀಡಿ: ಕರಾವಳಿ ಪ್ರದೇಶಗಳಲ್ಲಿ ಅಡಕೆ ಬೆಳೆಯೊಂದಿಗೆ ಅಂತರ್ಬೆಳೆಯಾಗಿ ಜಾಯಿಕಾಯಿ, ಬಾಳೆ ಕೊಕ್ಕೊ, ಕಾಳು ಮೆಣಸು, ವೀಳ್ಯದೆಲೆ ಬೆಳೆಗಳನ್ನು ಬಳಸಿ ಸಮಗ್ರ ಕೃಷಿಗೆ ಆದ್ಯತೆ ನೀಡಿದಲ್ಲಿ, ಒಂದು ಬೆಳೆಗೆ ನಷ್ಟ ಉಂಟಾದರೆ ಉಳಿದ ಕೃಷಿಯಲ್ಲಿ ಆದಾಯ ತಂದುಕೊಡಬಲ್ಲವು .

ಭಾರೀ ಬಿಸಿಲು: ವೀಕೆಂಡ್‌ನಲ್ಲೂ ವಿಶ್ವವಿಖ್ಯಾತ ಹಂಪಿಯತ್ತ ಸುಳಿಯದ ಪ್ರವಾಸಿಗರು!

ಹರಳು ಉದುರುವಿಕೆಗೆ ನೀರು ನಿರ್ವಹಣೆ ಮುಖ್ಯವಾಗಿದೆ. ರಾಸಾಯನಿಕ ಗೊಬ್ಬರ ಹಾಗೂ ಸಾವಯವ ಗೊಬ್ಬರಗಳು ಪ್ರಮಾಣ ಬದ್ಧವಾಗಿ ನೀಡಬೇಕು. ಬಸಿಕಾಲುವೆಗಳು ಮುಖ್ಯ. ಸಮಗ್ರ ಕೃಷಿ ಗೆ ಒತ್ತು ನೀಡಿದರೆ ಆದಾಯವನ್ನು ಸರಿದೂಗಿಸಲು ಸಾಧ್ಯ.
-ಶ್ರೀನಿವಾಸ ವಿವಿ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ.

Follow Us:
Download App:
  • android
  • ios