ಅಡಕೆಯಲ್ಲಿದ್ಯಾ ಕ್ಯಾನ್ಸರ್ ಗುಣಪಡಿಸುವ ಔಷಧೀಯ ಗುಣ ?
ಈಗಾಗಲೇ ಅಡಕೆಯಲ್ಲಿ ಸಾಕಷ್ಟು ಔಷಧೀಯ ಗುಣಗಳ ಬಗ್ಗೆ ಸಂಧೋನೆ ನಡೆದಿದ್ದು ಇನ್ನೂ ಕೂಡ ಅನೇಕ ರೀತಿಯ ಸಂಶೋಧನೆಗಳು ಮುಂದುವರಿದಿದೆ.
ಮಂಗಳೂರು (ಸೆ.25): ಅಡಕೆಯು ಹಾನಿಕಾರಕವೆಂಬ ವಾದ ತೀರ ಅವೈಜ್ಞಾನಿಕವಾಗಿದ್ದು, ಇದು ಅಡಕೆ ಮಾರುಕಟ್ಟೆಯನ್ನು ಅಸ್ಥಿರಗೊಳಿಸುವ ಹುನ್ನಾರವಾಗಿದೆ. ಪ್ರಸ್ತುತ, ರಾಜ್ಯದ ಕೆಲವು ಪ್ರತಿಷ್ಠಿತ ಆಯುರ್ವೇದಿಕ್ ಪ್ರಯೋಗಾಲಯಗಳಲ್ಲಿ ಅಡಕೆಯ ಔಷಧೀಯ ಗುಣಗಳ ಬಗ್ಗೆ ಕ್ಯಾಂಪ್ಕೊ ಸಹಕಾರದೊಂದಿಗೆ ಸಂಶೋಧನೆಗಳು ನಡೆಯುತ್ತಿದ್ದು, ಅಡಕೆ ಕೃಷಿಕರು ಯಾವುದೇ ಕಾರಣಕ್ಕೂ ಚಿಂತಿತರಾಗುವ ಅಗತ್ಯವಿಲ್ಲ ಎಂದು ಕ್ಯಾಂಪ್ಕೊ ತಿಳಿಸಿದೆ.
ವಿಶ್ವದ ಇತಿಹಾಸದಲ್ಲಿ ಅಡಕೆಯ ಬಳಕೆ ಇಂದು ನಿನ್ನೆಯದಲ್ಲ. ಅನಾದಿಕಾಲದಿಂದಲೂ ದೇಶ-ವಿದೇಶಗಳಲ್ಲಿ ಅಡಕೆಯನ್ನು ಬೇರೆ ಬೇರೆ ರೂಪದಲ್ಲಿ ಸೇವಿಸುತ್ತಾರೆ. ಇತಿಹಾಸದ ಪ್ರಕಾರ ಕ್ರಿಸ್ತಪೂರ್ವ ಕಾಲದಿಂದಲೇ ಜನರು ಅಡಕೆ ಜಗಿಯುತ್ತಿದ್ದ ಬಗ್ಗೆ ಪುರಾವೆಗಳಿವೆ. ಇದು ಭಾರತೀಯ ಪುರಾಣಗಳಲ್ಲೂ ವೇದ್ಯವಾಗಿದೆ.
ಮಲೆನಾಡು ಅಡಕೆ ಬೆಳೆಗಾರರಿಗೆ ಆತಂಕ : ಪರಿಹಾರವೂ ಇಲ್ಲಿದೆ ...
ಅಡಕೆಯು ಹಾನಿಕಾರಕವಲ್ಲ. ಅದರಲ್ಲಿ ಕ್ಯಾನ್ಸರ್ ಗುಣಪಡಿಸುವ ಔಷಧೀಯ ತತ್ವಗಳಿವೆ ಎಂಬ ಬಗ್ಗೆ ಸಂಶೋಧನೆಗಳು ನಡೆದೇ ಇವೆ. ಪ್ರತಿ ಸಂಶೋಧನೆಯಲ್ಲೂ ಇದು ಆರೋಗ್ಯಕ್ಕೆ ಪೂರಕವೆಂದೇ ಸಾಬೀತಾಗಿದೆ. ಕೇವಲ ಅಡಕೆಯನ್ನು ವೀಳ್ಯದೆಲೆಯೊಂದಿಗೆ ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಯಾವುದೇ ಸಾಧ್ಯತೆಯಿಲ್ಲ ಎಂಬುದಾಗಿ ಸಂಶೋಧಕರು ಪ್ರತಿಪಾದಿಸಿದ್ದಾರೆ.
ಅಡಕೆಯು ಅನಘ್ರ್ಯ ಔಷಧೀಯ ಗುಣಗಳನ್ನು ಹೊಂದಿದ್ದು, ಮನುಷ್ಯನ ಮತ್ತು ಪ್ರಾಣಿಗಳ ಹಲವಾರು ಕಾಯಿಲೆಗಳಿಗೆ ಉತ್ತಮ ಔಷಧವನ್ನಾಗಿ ಬಳಸಬಹುದಾಗಿದೆ. 1974ರಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ನ ವಿಜ್ಞಾನಿಗಳು ಅಡಕೆ ಕ್ಯಾನ್ಸರ್ ಗುಣಪಡಿಸುವ ಶಕ್ತಿ ಹೊಂದಿದೆ ಎಂದು ತಿಳಿಸಿದ್ದಾರೆ. 2016ರಲ್ಲಿ ಅಮೆರಿಕದ ಎಮೆರಿ ವಿವಿಯಲ್ಲಿ ನಡೆಸಿದ ಸಂಶೋಧನೆಯಲ್ಲೂ ಇದು ಸಾಬೀತಾಗಿದೆ.
ಅಲ್ಲದೆ ಅಡಕೆಗೆ ಸಕ್ಕರೆ ಕಾಯಿಲೆ, ಕೊಬ್ಬು ಮತ್ತು ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಿವಾರಿಸುವ ಶಕ್ತಿಯಿದ್ದು, ಅಲ್ಜೈಮರ್, ಮರೆಗುಳಿತನ ಗುಣಪಡಿಸುವ ಸಾಮರ್ಥ್ಯ ಹೊಂದಿದೆ ಎಂದು ಹಲವಾರು ಸಂಶೋಧನೆಗಳಿಂದ ದೃಢಪಟ್ಟಿದೆ. ಪ್ರಾಣಿಗಳಲ್ಲಿನ ಹೊಟ್ಟೆಹುಳದ ನಾಶ, ಚರ್ಮರೋಗ ನಿವಾರಣೆ, ಗಾಯಗಳನ್ನು ಗುಣಪಡಿಸಲು ಅಡಕೆಉಪಯುಕ್ತ ಔಷಧಿಯಾಗಿದ್ದು, ವಿಷಜಂತುಗಳ ಕಡಿತದಿಂದ ಆಗುವ ಅಪಾಯಗಳನ್ನು ತಡೆಗಟ್ಟುವ ವಿಷಹಾರಿಯಾಗಿಯೂ ಬಳಸಬಹುದು ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ. ಈ ವಿಚಾರವನ್ನು ಬಹಳ ಮೊದಲೇ ಚೀನಾದಲ್ಲಿ ಸಂಶೋಧನೆ ಮಾಡಲಾಗಿದ್ದು, ಚೀನಾದ ‘ಮೆಟೀರಿಯ ಮೆಡಿಕಾ’ ಔಷಧೀಯ ಪುಸ್ತಕದಲ್ಲಿ ಈ ಎಲ್ಲ ವಿಚಾರಗಳನ್ನು ಉಲ್ಲೇಖಿಸಲಾಗಿದೆ ಎಂದು ಕ್ಯಾಂಪ್ಕೊ ಪ್ರಕಟಣೆ ತಿಳಿಸಿದೆ.