ಬಡಗಣಿ ನದಿಯಲ್ಲಿ ಜಲಚರ ಸಾವು ನಿಗೂಢ!
- ಬಡಗಣಿ ನದಿಯಲ್ಲಿ ಜಲಚರ ಸಾವು ನಿಗೂಢ!
- ಕಳವಳ ವ್ಯಕ್ತಪಡಿಸಿದ ಸ್ಥಳೀಯರು
ಹೊನ್ನಾವರ (ನ.27) : ತಾಲೂಕಿನ ಕರ್ಕಿ ಬಡಗಣಿ ನದಿಯಲ್ಲಿ ಜಲಚರಗಳು ನಿಗೂಢ ರೀತಿಯಲ್ಲಿ ಸಾವನ್ನಪ್ಪುತ್ತಿದ್ದು, ಸ್ಥಳೀಯರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಇಲ್ಲಿನ ನದಿಯ ಮೀನುಗಳು ಆಗಾಗ ನದಿ ನೀರಿನ ಭರತ ಮತ್ತು ಇಳಿತದ ಜೊತೆಯಲ್ಲಿ ಸತ್ತು ತೇಲಿ ಹೋಗುವುದು ನದಿಯ ದಡದ ಕೆಲ ನಿವಾಸಿಗಳ ಗಮನಕ್ಕೆ ಬಂದಿದೆ. ಇಲ್ಲಿನ ನದಿಯ ಮೀನುಗಳು ಹಾಗೂ ಏಡಿ ಹೆಚ್ಚಾಗಿ ಸಾವನ್ನಪ್ಪುತ್ತಿವೆ ಎನ್ನಲಾಗಿದೆ.
ಇತ್ತೀಚೆಗೆ ನದಿಯ ನೀರು ಹೆಚ್ಚು ವಿಷಪೂರಿತ ಆಗಿದೆಯೇ ಎಂಬ ಅನುಮಾನ ನದಿ ತಟದ ನಿವಾಸಿಗಳನ್ನು ಕಾಡುತ್ತಿದೆ. ಕರ್ಕಿ ಗ್ರಾಪಂ ವ್ಯಾಪ್ತಿಯಲ್ಲಿನ ಕೆಲ ಹೊಟೇಲ…, ಮೀನು ಮಾರ್ಕೆಟ್, ಸಮೀಪದ ಕೆಲ ನಿವಾಸಿಗಳ ಮನೆಯ ತ್ಯಾಜ್ಯದ ನೀರು ಈ ನದಿಗೆ ಹರಿಯಬಿಡಲಾಗುತ್ತಿದೆ ಎನ್ನುವುದು ಸ್ಥಳೀಯ ಕೆಲವರ ಆರೋಪವಾಗಿದೆ.
ಈ ಕುರಿತು ರವಿ ಮುಕ್ರಿ ಎನ್ನುವವರು ಪತ್ರಿಕೆಯೊಂದಿಗೆ ಮಾತನಾಡಿ, ತ್ಯಾಜದ ನೀರಿನಿಂದ ಕುಡಿಯುವ ನೀರಿನ ಬಾವಿಗೆ ತೊಂದರೆ ಆಗುತ್ತಿದೆ. ಇದರಿಂದ ಹೊರ ಸೂಸುವ ವಾಸನೆಯಿಂದ ಮನೆಯಲ್ಲಿ ಊಟ, ತಿಂಡಿ ಸೇವಿಸಲು ಮನಸಾಗುತ್ತಿಲ್ಲ. ಈ ಬಗ್ಗೆ ಶೀಘ್ರವಾಗಿ ಕ್ರಮ ಜರುಗಿಸಿ ಎಂದು ಸಂಬಂಧಿಸಿದವರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ನಾನು ಕೂಡ ಈ ಬಗ್ಗೆ ಪ್ರತ್ಯೇಕವಾಗಿ ಹಲವು ಬಾರಿ ತ್ಯಾಜ್ಯದ ನೀರು ನದಿಗೆ ಬಿಡುವುದನ್ನು ನಿಲ್ಲಿಸುವಂತೆ ಕರ್ಕಿ ಗ್ರಾಪಂಗೆ ಮನವಿ ಮಾಡಿಕೊಂಡಿದ್ದೇನೆ. ಸೂಕ್ತ ಸ್ಪಂದನೆ ಇಲ್ಲ ಎಂದರು.
ಟ್ಯಾಂಕರ್ ಪಲ್ಟಿಯಾಗಿ ಸೋರಿದ್ದ ರಾಸಾಯನಿಕ; ಜಲಚರಗಳು ಸಾವು!