Asianet Suvarna News Asianet Suvarna News

Coronavirus: ಬೆಂಗ್ಳೂರು ಅಪಾರ್ಟ್‌ಮೆಂಟ್‌ಗಳಿಗೆ ಮಾರ್ಗಸೂಚಿ, ಕೇಸ್ ಕಂಡುಬಂದ್ರೆ ಕಂಟೈನ್ಮೆಂಟ್ ಝೋನ್!

* ಬೆಂಗಳೂರು ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಕೊರೋನಾ ನಿಯಮ
* ಮಾರ್ಗಸೂಚಿ ಬಿಡುಗಡೆ ಮಾಡಿದ ಬಿಬಿಎಂಪಿ
*  ಕೊರೋನಾ ಕೇಸ್ ಕಂಡುಬಂದರೆ ಅಪಾರ್ಟ್ ಮೆಂಟ್ ನ್ನು  ಏಳು ದಿನಗಳ ಕಾಲ ಕಂಟೇನ್ಮೆಂಟ್ ಝೋನ್ 

Apartment complexes with over 3 cases to be containment zones BBMP COVID guidelines Bengalurun mah
Author
Bengaluru, First Published Jan 13, 2022, 8:43 PM IST

ಬೆಂಗಳೂರು(ಜ.  13)  ಬೆಂಗಳೂರು (Bengaluru)  ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಬಿಬಿಎಂಪಿ (BBMP) ಕೊರೋನಾ ಗೈಡ್ ಲೈನ್ ಬಿಡುಗಡೆ ಮಾಡಿದೆ.  ಸಾಕಷ್ಟು ಸೂಚನೆಗಳನ್ನು ನೀಡಿದ್ದು ಕೊರೋನಾ ದೃಢಪಟ್ಟರೆ ಅಪಾರ್ಟ್ ಮೆಂಟ್ ಕಂಟೇನ್ಮೆಂಟ್ ಝೋನ್  ಎಂದು ಘೊಷಣೆ ಮಾಡಲಾಗುವುದು ಎಂದು ತಿಳಿಸಿದೆ. ಕೊರೋನಾ ಕೇಸ್ ಕಂಡುಬಂದರೆ ಅಪಾರ್ಟ್ ಮೆಂಟ್ ನ್ನು  ಏಳು ದಿನಗಳ ಕಾಲ ಕಂಟೈನ್ಮೆಂಟ್ ಝೋನ್ ಎಂದು ಪರಿಗಣಿಸಲಾಗುವುದು ಎಂದು ತಿಳಿಸಿದ್ದು ಮಾರ್ಗಸೂಚಿ ಬಿಡುಗಡೆ ಮಾಡಿದೆ.

ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಸೂಚನೆಯನ್ನು ಆಧಾರವಾಗಿ ಇಟ್ಟುಕೊಂಡು ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಕಳೆದ ಹತ್ತು ದಿನಗಳಿಂದ ಕೊರೋನಾ ಪ್ರಕರಣಗಳಲ್ಲಿ ಆಗುತ್ತಿರುವ ಏರಿಕೆ ಆತಂಕ ತಂದಿದೆ. ಕರ್ನಾಟಕ ವಿಪತ್ತು ನಿರ್ವಹಣಾ ಕಾಯಿದೆ ಅನ್ವಯ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಪ್ರಮುಖ ಸೂಚನೆಗಳು
* ಅಪಾರ್ಟ್ ಮೆಂಟ್ ಪ್ರವೇಶ ಮಾಡುವ ನಿವಾಸಿಗಳು, ಹೌಸ್ ಕೀಪಿಂಗ್ ಸಿಬ್ಬಂದಿ,  ವಿಸಿಟರ್ ಗಳ ಟೆಂಪರೇಚರ್ ತಪಾಸಣೆ ಕಡ್ಡಾಯ.  ಎಂಟ್ರಿಯಲ್ಲಿ ಸಾನಿಟೈಸರ್ ಮತ್ತು ಹ್ಯಾಂಡ್ ವಾಶ್ ಲಭ್ಯ ಇರಬೇಕು.

* ಜನರು ಹೆಚ್ಚಾಗಿ ಬಳಸುವ ಪ್ಲೋರ್, ಮೆಟ್ಟಿಲುಗಳನ್ನು ಸೋಡಿಯಂ ಹೈಪೋಕ್ಲೋರೈಟ್, ಬ್ಲೀಚಿಂಗ್ ಪೌಡರ್ ಬಳಸಿ ಕ್ಲೀನ್ ಮಾಡಬೇಕು.  ಶುಚಿತ್ವ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು.

* ಜಾಗಿಂಗ್ ಮಾಡುವ ಜಾಗ, ಪಾರ್ಕ್ ಸೇರಿದಂತೆ ಸಾಮಾನ್ಯ ಸ್ಥಳಗಳಲ್ಲಿ ತಿರುಗಾಡುವವರು ಮಾಸ್ಕ್, ಸಾನಿಟೈಸೇಶನ್ ಸೇರಿದಂತೆ ಕೊರೋನಾ ನಿಯಮ ಪಾಲನೆ ಮಾಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಇಂಥ ಜಾಗಗಳನ್ನು ಮೀಟಿಂಗ್ ಪ್ಲೇಸ್ ಗಳನ್ನಾಗಿ ಬದಲಾಯಿಸಿಕೊಳ್ಳಬಾರದು.

* ಸೋಶಿಯಲ್ ಮೀಡಿಯಾದ ಕಾಮ್ ಗ್ರೂಪ್ ಗಳನ್ನು ಮಾಡಿಕೊಂಡು ಲಸಿಕೆ ದಾಖಲಾತಿ ಹೆಚ್ಚಳ, ಶುಚಿತ್ವದ ಬಗ್ಗೆ ಆಗಾಗ್ಗೆ ಎಚ್ಚರಿಕೆ ನೀಡುತ್ತಿರುವ ಕೆಲಸ ಮಾಡಬೇಕು.  ಬಿಬಿಎಂಪಿ ಕಾಲಕಾಲಕ್ಕೆ ಬಿಡುಗಡೆ ಮಾಡುವ ಸೂಚನೆಗಳನ್ನು ಪ್ರತಿಯೊಬ್ಬರಿಗೂ ತಿಳಿಸಬೇಕು.

* ಸರ್ಕಾರ ಈಗಾಗಲೇ  ಹೇಳಿರುವಂತೆ ಜಿಮ್, ಕ್ರೀಡಾ ಚಟುವಟಿಕೆ  ಮತ್ತು ಸ್ವಿಮಿಂಗ್ ಪೂಲ್ ಗೆ ಅವಕಾಶ ಇಲ್ಲ. ಮಕ್ಕಳಿಗೂ ಮಾಸ್ಕ್ ಕಡ್ಡಾಯ. ಪೋಷಕರು ಮಕ್ಕಳಿಗೆ ಕೊರೋನಾ ಆತಂಕದ ಎಚ್ಚರಿಕೆ ನೀಡಬೇಕಿದ್ದು ನಿಯಮಗಳನ್ನು ಪಾಲಿಸುವಲ್ಲಿ ನೆರವಾಗಬೇಕು. 

* ಗ್ಯಾದರಿಂಗ್, ಇವೆಂಟ್ ಗಳನ್ನು ನಡೆಸಲು ಅವಕಾಶ ಇಲ್ಲ.   ಒಂದು ವೇಳೆ ಅಂಥ ತುರ್ತು ಎದುರಾದರೆ 50  ಜನರನ್ನು ಮೀರುವಂತೆ ಇಲ್ಲ. ಕಸದ ಕಟ್ಟುನಿಟ್ಟಿನ ನಿರ್ವಹಣೆ ಜವಾಬ್ದಾರಿಯುತವಾಗಿರಬೇಕು. ಪ್ರತ್ಯೇಕವಾಗಿ ಕಸ ನಿರ್ವಹಣೆ ಮಾಡಬೇಕು.

* ಆರೋಗ್ಯ ಕಾರ್ಯಕರ್ತರೊಂದಿಗೆ ಕಾಲಕಾಲಕ್ಕೆ ಸಹಕಾರ ನೀಡಬೇಕು. ಲಸಿಕೆ, ಸಮೀಕ್ಷೆ ಸೇರಿದಂತೆ ಎಲ್ಲ ವಿವರಗಳನ್ನು ನೀಡಬೇಕು.

* ಒಂದು ವೇಳೆ ಕೊರೋನಾ ಪಾಸಿಟಿವ್ ಕಂಡುಬಂದಲ್ಲಿ ತಕ್ಷಣ ಮಾಹಿತಿ ನೀಡುವುದರೊಂದಿಗೆ ತುರ್ತು ಕ್ರಮಗಳಿಗೆ ಅನುವು ಮಾಡಿಕೊಡಬೇಕು

* ಮೂರು ಅಥವಾ ಅದಕ್ಕಿಂತ ಹೆಚ್ಚಿನ ಕೇಸು ಕಂಡುಬಂದಲ್ಲಿ ನೂರು ಮೀಟರ್ ನಿಷೇಧಾಜ್ಞೆ ಜಾರಿಯಾಗುತ್ತದೆ.  ಸರ್ಕಾರದ ನಿರ್ದೇಶನದ ಅನ್ವಯ ಸಂಪೂರ್ಣ ಅಪಾರ್ಟ್ ಮೆಂಟ್ ನ್ನು ಝೋನ್ ಆಗಿ ಪರಿವರ್ತನೆ ಮಾಡಲಾಗುವುದು.

* ಒಂದು ಕೇಸ್ ಕಂಡುಬಂದರೆ  ಇಂಡಿವಿಸುವಲ್ ಹೌಸ್, ಮೂರು ಕೇಸ್ ಕಂಡುಬಂದರೆ ಇಡೀ ಫ್ಲೋರ್,  ಅಪಾರ್ಟ್ ಮೆಂಟ್ ನಲ್ಲಿ ಹತ್ತು ಕೇಸ್ ಕಂಡುಬಂದರೆ ಇಡೀ ಟವರ್, ಐವತ್ತಕ್ಕಿಂತ ಅಧಿಕ ಕೇಸ್ ಕಂಡುಬಂದರೆ ಇಡೀ ಅಪಾರ್ಟ್ ಮೆಂಟ್ ಆವರಣವನ್ನು ಝೋನ್ ಆಗಿ ಪರಿವರ್ತನೆ ಮಾಡಲಾಗುತ್ತದೆ.

* ಕಂಟೈನ್ಮೆಂಟ್ ಎಂದು ಘೋಷಣೆಯಾದರೆ ಏರಿಯಾದ ಎಲ್ಲ ನಿವಾಸಿಗಳು ಟೆಸ್ಟಿಂಗ್ ಗೆ ಒಳಗಾಗಬೇಕು.  ಪ್ರಾಥಮಿಕ ಸಂಪರ್ಕಿತರ ಮಾಹಿತಿ ನೀಡಬೇಕು. ಮತ್ತೆ ಯಾರಲ್ಲಾದರೂ ಲಕ್ಷಣ ಕಂಡುಬಂದರೆ ಕೂಡಲೇ ತಿಳಿಸತಕ್ಕದ್ದು. 

* ಪ್ರಾಥಮಿಕ ಮತ್ತು ದ್ವತೀಯ ಸಂಪರ್ಕಿತರು ಪರೀಕ್ಷೆಗೆ ಒಳಗಾಗುವುದು ಉತ್ತಮ.   ವರದಿ ಬರುವವರೆಗೆ ಇವರೆಲ್ಲರೂ ಕ್ವಾರಂಟೈನ್ ನಲ್ಲಿ ಇರಬೇಕು.

* ಅಪಾರ್ಟ್ ಮೆಂಟ್ ನಿವಾಸಿಗಳ ಸಂಘದ ಜವಾಬ್ದಾರಿ ಇಲ್ಲಿ ಮುಖ್ಯವಾಗುತ್ತದೆ.  ಮಾಹಿತಿ ಕಲೆಹಾಕಿ ಯಾರೂ ಕ್ವಾರಂಟೈನ್ ಗೆ ಹೋಗಬೇಕು ಎಂಬ ಸಲಹೆ ನೀಡಬಹುದು.  ಬಿಬಿಎಂಪಿಗೂ ಮಾಹಿತಿ ನೀಡಬಹುದು.

* ಇದೇ ಅವಕಾಶ ಬಳಸಿಕೊಂಡು ಯಾರ ಮೇಲಯೂ ಕಿರುಕುಳ ಮಾಡುವಂತೆ ಇಲ್ಲ. ಒಂದು ವೇಳೆ ಯಾವುದಾದರೂ ಕುಟುಂಬಕ್ಕೆ ಕೊರೋನಾ ತಗುಲಿದರೆ ಅಕ್ಕಪಕ್ಕದವರು ಧೈರ್ಯ ಹೇಳುವ ಕೆಲಸ ಮಾಡಬೇಕು.

* ಹೊರ ದೇಶದಿಂದ ಬಂದವರು ನೆಗೆಟಿವ್ ವರದಿ ತಂದಿದ್ದರೂ, ಗೋವಾ, ಕೇರಳ, ಮಾಹಾರಾಷ್ಟ್ರದಿಂದ ಆಗಮಿಸಿದ್ದರೆ ಮತ್ತೊಮ್ಮೆ ಟೆಸ್ಟ್ ಗೆ ಒಳಗಾಗುವುದು ಒಳಿತು.

* ಕೊರೋನಾದ ಬಗ್ಗೆ ಪಾಲಕರು ಮಕ್ಕಳಿಗೆ ಸಾಕಷ್ಟು ತಿಳಿವಳಿಕೆ ನೀಡಬೇಕು.  ಅರವತ್ತು ವರ್ಷ ಮೇಲ್ಪಟ್ಟವರು, ಗರ್ಭಿಣಿ, ನರ್ಸಿಂಗ್ ಕೆಲಸದಲ್ಲಿ ಇರುವವರು, ವಿವಿಧ ರೋಗದ ಇತಿಹಾಸ ಉಳ್ಳವರು, ಕ್ಯಾನ್ಸರ್, ಡಯಾಬಿಟಿಸ್, ಹೈಪರ್ ಟೆನ್ಸ ಶನ್, ರೋಗ ನಿರೋಧಕ ಶಕ್ತಿ ಕಡಿಮೆ ಇರುವವುರು,  ಮತ್ತಷ್ಟು ಎಚ್ಚರಿಕೆ ತೆಗೆದುಕೊಳ್ಳಬೇಕಿದ್ದು ಯಾವುದೆ ಲಕ್ಷಣ ಕಂಡುಬಂದಲ್ಲಿ ತಕ್ಷಣ ಬಿಬಿಎಂಪಿಗೆ ತಿಳಿಸಬೇಕು.

* ಸಾಕುಪ್ರಾಣಿ ಹೊಂದಿರುವವರು ವಾಕಿಂಗ್ ಮತ್ತಿತರ ಕಡೆ ಕರೆದುಕೊಂಡು  ಗೋಗುವಾಗ ಕೊರೋನಾ ನಿಯಮಾವಳಿ ಪಾಲನೆ ಮಾಡಬೇಕು.

* ವ್ಯಾಪಾರ ವಹಿವಾಟಿಗೂ ನಿಯಂತ್ರಣ ಹೇರಿಕೊಳ್ಳಬೇಕು.  ಮೇನ್ ಗೇಟ್ ನಲ್ಲಿಯೇ ಪ್ರಾಥಮಿಕ ಚೆಕ್ ಅಪ್ ಆಗಬೇಕು. ಎರಡು ಡೋಸ್ ಆದ ವಿಸಿಟರ್ ಗಳ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಿದರೆ ಉತ್ತಮ.

* ಎಲ್ಲ ನಿವಾಸಿಗಳು, ಎಲ್ಲ ಸಿಬ್ಬಂದಿ ಎರಡು ಡೋಸ್ ಪಡೆದುಕೊಂಡರೆ ಒಳಿತು.   ಕ್ವಾರಂಟೈನ್ ಆಗುವ ಅಗತ್ಯವಿದ್ದರೆ ಅವರಿಗೆ ಅಪಾರ್ಟ್ ಮೆಂಟ್ ನಿವಾಸಿಗಳ ಸಂಘ ನೆರವು ನೀಡಬೇಕು .

 


 

Follow Us:
Download App:
  • android
  • ios