ಬಸವಕಲ್ಯಾಣ: ನೂತನ ಅನುಭವ ಮಂಟಪ ಕಾಂಗ್ರೆಸ್ ಸರ್ಕಾರದ ಕೊಡುಗೆ: ಸಚಿವ ಖಂಡ್ರೆ
ಬಜೆಟ್‌ನಲ್ಲಿ ಹಣವು ಸಹ ಘೋಷಣೆ ಮಾಡಲಾಗಿತ್ತು. ನಂತರ ಬಿಜೆಪಿಯವರು ಅಧಿಕಾರಕ್ಕೆ ಬಂದು ನಾವೇ ಮಾಡಿದ್ದೇವು ಎಂದು ಹೇಳುವುದು ಸರಿಯಲ್ಲ. ನಾವು ಇದಕ್ಕೆ ಬೇಕಾದ ಎಲ್ಲಾ ಸಹಕಾರ ನೀಡಿ, ನೂತನ ಅನುಭವ ಮಂಟಪ ಶೀಘ್ರವೇ ಪೂರ್ತಿಗೊಳಿಸುತ್ತೇವೆ: ಸಚಿವ ಈಶ್ವರ ಖಂಡ್ರೆ
ಬಸವಕಲ್ಯಾಣ(ಆ.18): ಸಿದ್ರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಗೋರು ಚೆನ್ನಬಸಪ್ಪ ನೇತೃತ್ವದಲ್ಲಿ ಅನುಭವ ಮಂಟಪ ಪುನರ ನಿರ್ಮಾಣ ಸಮಿತಿ ರಚಿಸಿ ಅದರ ವರದಿಯನ್ನು ಸ್ವೀಕರಿಸಲಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ನುಡಿದರು.
ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿರುವ ಅಮರಗಣಂಗಳ ಆತ್ಮಚರಿತ್ರೆ ಪ್ರವಚನ ಉದ್ಘಾಟನೆ ಮಾಡಿ ಮಾತನಾಡಿ, ಬಜೆಟ್‌ನಲ್ಲಿ ಹಣವು ಸಹ ಘೋಷಣೆ ಮಾಡಲಾಗಿತ್ತು. ನಂತರ ಬಿಜೆಪಿಯವರು ಅಧಿಕಾರಕ್ಕೆ ಬಂದು ನಾವೇ ಮಾಡಿದ್ದೇವು ಎಂದು ಹೇಳುವುದು ಸರಿಯಲ್ಲ. ನಾವು ಇದಕ್ಕೆ ಬೇಕಾದ ಎಲ್ಲಾ ಸಹಕಾರ ನೀಡಿ, ನೂತನ ಅನುಭವ ಮಂಟಪ ಶೀಘ್ರವೇ ಪೂರ್ತಿಗೊಳಿಸುತ್ತೇವೆ ಎಂದರು.
ಬಸವರಾಜ ಯತ್ನಾಳ್ ಹೇಳಿಕೆ ಅಸಂಬದ್ಧ, ನಾವು ಗಟ್ಟಿಯಾಗಿದ್ದೇವೆ: ಸಚಿವ ಈಶ್ವರ ಖಂಡ್ರೆ
ಜನರು ನಮ್ಮ ಸಂಸ್ಕೃತಿಯನ್ನು ಮರೆತಿದ್ದಾರೆ. ತಂದೆ-ತಾಯಿಯ ಸೇವೆ ಮಾಡಲು ಸಹ ಸಿದ್ಧರಿಲ್ಲ. ಇದನ್ನು ಸರಿದಾರಿಗೆ ತರಲು ಬಸವಾದಿ ಶಿವಶರಣರ ಪ್ರವಚನ ಕೇಳುವುದು ಸಹಕಾರಿ ಎಂದರು.
ಇದೇ ಸಂದರ್ಭದಲ್ಲಿ ಸಚಿವರಾದ ಈಶ್ವರ ಖಂಡ್ರೆ, ರಹೀಮ ಖಾನ್ ಅವರಿಗೆ ಅನುಭವ ಮಂಟಪದಿಂದ ಸನ್ಮಾನಿಸಲಾಯಿತು. ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದೇವರು, ಉಪಾಧ್ಯಕ್ಷ ವೈಜಿನಾಥ ಕಾಮಶೆಟ್ಟಿ, ಕಾರ್ಯದರ್ಶಿ ಡಾ.ಎಸ್.ಬಿ ದುರ್ಗೆ, ಗುರುಬಸವಪಟ್ಟ ದೇವರು, ಶಾಸಕ ಶರಣು ಸಲಗರ, ಹುಮನಾಬಾದ ಶಾಸಕ ಸಿದ್ದು ಪಾಟೀಲ, ವಿಧಾನ ಪರಿಷತ್ ಸದಸ್ಯ ಅರವಿಂದ ಅರಳಿ, ಶಿವರಾಜ ನರಶೆಟ್ಟಿ, ವಿ.ಸಿದ್ಧರಾಮಣ್ಣ ಶರಣರು, ಡಾ.ಗಂಗಾಬಿಕಾ ಪಾಟೀಲ, ಧನರಾಜ ತಾಳಂಪಳ್ಳಿ, ಮುಂತಾದವರು ಉಪಸ್ಥಿತರಿದ್ದರು.