ಹುಬ್ಬಳ್ಳಿ: ಸಿಲಿಂಡರ್‌ ಸೋರಿಕೆ, ಮತ್ತಿಬ್ಬರು ಅಯ್ಯಪ್ಪ ಮಾಲಾಧಾರಿಗಳ ಸಾವು

ಉಣಕಲ್‌ ಹತ್ತಿರದ ಸಾಯಿನಗರದಲ್ಲಿ ಸೋಮವಾರ ಬೆಳಗಿನ ಜಾವ ಸಿಲಿಂಡರ್ ಸೋರಿಕೆಯಾಗಿ ನಡೆದ ಅಗ್ನಿ ಅವಘಡದಲ್ಲಿ 9 ಮಂದಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗಾಯಗೊಂಡಿದ್ದರು. ಎಲ್ಲ ಗಾಯಾಳುಗಳಿಗೆ ಇಲ್ಲಿನ ಕೆಎಂಸಿ ಆರ್‌ಐನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇದೀಗ ಒಟ್ಟು ನಾಲ್ವರು ಮಾಲಾಧಾರಿಗಳು ಮೃತಪಟ್ಟಿದ್ದಾರೆ.

Another Two Ayyappa Swamy Devotees Dies on Cylinder Blast Case in Hubballi grg

ಹುಬ್ಬಳ್ಳಿ(ಡಿ.28):  ಸಿಲಿಂಡರ್ ಸೋರಿಕೆಯಿಂದ ನಡೆದ ಅಗ್ನಿ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡು ಇಲ್ಲಿನ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಶುಕ್ರವಾರ ಮತ್ತಿಬ್ಬರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ನಾಲ್ಕಕ್ಕೇರಿದೆ. ಇನ್ನುಳಿದ ಐವರಿಗೆ ಚಿಕಿತ್ಸೆ ಮುಂದುವರಿದಿದೆ.

ಉಣಕಲ್‌ ಹತ್ತಿರದ ಸಾಯಿನಗರದಲ್ಲಿ ಸೋಮವಾರ ಬೆಳಗಿನ ಜಾವ ಸಿಲಿಂಡರ್ ಸೋರಿಕೆಯಾಗಿ ನಡೆದ ಅಗ್ನಿ ಅವಘಡದಲ್ಲಿ 9 ಮಂದಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗಾಯಗೊಂಡಿದ್ದರು. ಎಲ್ಲ ಗಾಯಾಳುಗಳಿಗೆ ಇಲ್ಲಿನ ಕೆಎಂಸಿ ಆರ್‌ಐನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇದೀಗ ಒಟ್ಟು ನಾಲ್ವರು ಮಾಲಾಧಾರಿಗಳು ಮೃತಪಟ್ಟಿದ್ದಾರೆ.

ಸರ್ಕಾರಿ ಹಣದಲ್ಲಿ ಕಾಂಗ್ರೆಸ್ ಅಧಿವೇಶನ: ಯಾರದೋ ದುಡ್ಡು, ಯಲ್ಲಮ್ಮನ ಜಾತ್ರೆ ಎಂದ ಪ್ರಹ್ಲಾದ ಜೋಶಿ

ಶುಕ್ರವಾರ ಬೆಳಗ್ಗೆ ರಾಜು ಮೂಗೇರಿ (21) ಹಾಗೂ ಸಂಜೆ ಲಿಂಗರಾಜ ಬೀರನೂರ (19) ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಗುರುವಾರ ಇಬ್ಬರು ಮೃತರಾಗಿದ್ದರು. ಈ ಘಟನೆಯಲ್ಲಿ ಗಾಯಗೊಂಡಿದ್ದ ಇನ್ನುಳಿದ ಐವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ವಿನಾಯಕ ಎಂಬ ಬಾಲಕ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಆತನನ್ನು ಬೇರೆ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ. ಸಂಪೂರ್ಣವಾಗಿ ಗುಣಮುಖನಾಗುವ ವಿಶ್ವಾಸ ಹೊಂದಿರುವುದಾಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆಯ ಎದುರು ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌, ಶಾಸಕ ಮಹೇಶ ಟೆಂಗಿನಕಾಯಿ, ಜಿಲ್ಲಾಧಿಕಾರಿ ದಿವ್ಯಪ್ರಭು ಸೇರಿದಂತೆ ಹಲವರು ಆಗಮಿಸಿ ಮೃತರ ಕುಟುಂಬದರಿಗೆ ಸಾಂತ್ವನ ಹೇಳಿದರು.

ಮಾಹಿತಿ ಪಡೆದ ಸಚಿವ 

ಈ ಘಟನೆಯ ಕುರಿತಂತೆ ಶುಕ್ರವಾರ ಬೆಳಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ್‌ ‍ಕೆಎಂಸಿಆರ್‌ಐನ ನಿರ್ದೇಶಕ ಡಾ. ಎಸ್‌.ಎಫ್‌. ಕಮ್ಮಾರ ಅವರನ್ನು ಇಲ್ಲಿನ ವಿಮಾನ ನಿಲ್ದಾಣಕ್ಕೆ ಕರೆಸಿ ಗಾಯಾಳುಗಳಿಗೆ ನೀಡುತ್ತಿರುವ ಚಿಕಿತ್ಸಾ ಕ್ರಮಗಳ ಕುರಿತು ಮಾಹಿತಿ ಪಡೆದರು. ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದರೆ ಬೇರಡೆಯಿಂದ ನುರಿತ ತಜ್ಞ ವೈದ್ಯರನ್ನು ಕರೆಯಿಸಿ ಚಿಕಿತ್ಸೆ ನೀಡುವಂತೆ ಸಲಹೆ ನೀಡಿದರು.

ಈ ವೇಳೆ ಕಿಮ್ಸ್ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ಮಾತನಾಡಿ, ಎಲ್ಲ ಗಾಯಾಳುಗಳನ್ನು ಚಿಕಿತ್ಸೆ ನೀಡಿ ಬದುಕುಳಿಸಲು ಸಾಕಷ್ಟು ಶ್ರಮಿಸಿದ್ದೆವು. ಆದರೆ, ಅದು ಸಾಧ್ಯ ಆಗಲಿಲ್ಲ. ಇನ್ನುಳಿದವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ನಮ್ಮ ಪ್ರಯತ್ನಕ್ಕೆ ದೇವರು ಫಲ ನೀಡಬಹುದು ಎಂಬ ವಿಶ್ವಾಸವಿದೆ ಎಂದರು.

ಅವಘಡದಿಂದ ಅರ್ಧದಲ್ಲೇ ಮುಗಿದ ಅಯ್ಯಪ್ಪ ವ್ರತ

ಅಜೀಜಅಹ್ಮದ ಬಳಗಾನೂರ 

ಹುಬ್ಬಳ್ಳಿ: ಅಂದುಕೊಂಡಂತೆ ಎಲ್ಲವೂ ಸರಿಯಾಗಿ ನಡೆದಿದ್ದರೆ ನಿನ್ನೆ ನಗರದಲ್ಲಿ 101 ಕುಂಭಗಳ ಮೆರವಣಿಗೆ, ಅಯ್ಯಪ್ಪಸ್ವಾಮಿ ಭಾವಚಿತ್ರ ಹೊತ್ತ ಜೋಡೆತ್ತುಗಳ ಅದ್ದೂರಿ ಮೆರವಣಿಗೆ, ಡಿ. 29ರಂದು ಬೆಳಗ್ಗೆ ಮಹಾಪೂಜೆ, ಎರಡು ದಿನ ನಿರಂತರ ಅನ್ನಪ್ರಸಾದ, ಜ. 8ರಂದು ಇರುಮುಡಿ ಕಟ್ಟುವ ಕಾರ್ಯ ನಡೆಯಬೇಕಿತ್ತು. ಆದರೆ, ಆ ಬೆಂಕಿ ಅವಗಢ ಅರ್ಧದಲ್ಲೆ ಅಯ್ಯಪ್ಪನ ವೃತ ಮುಕ್ತಾಯಗೊಳ್ಳುವಂತೆ ಮಾಡಿದೆ! ಅದುವೇ, ಕಳೆದ ಭಾನುವಾರ ರಾತ್ರಿ ಅಯ್ಯಪ್ಪಸ್ವಾಮಿ ಪೂಜೆ ಮಾಡಿ ಸನ್ನಿಧಾನದಲ್ಲಿ ನಿದ್ರೆಗೆ ಜಾರಿದ ಅಯ್ಯಪ್ಪ ಮಾಲಾಧಾರಿಗಳು ಮಧ್ಯರಾತ್ರಿ ಸಿಲಿಂಡರ್ ಗ್ಯಾಸ್ ಸೋರಿಕೆಯಾದ ಪರಿಣಾಮ ಸನ್ನಿಧಾನದಲ್ಲಿದ್ದ 9 ಜನರು ಗಾಯಗೊಂಡು ಆಸ್ಪತ್ರೆ ಸೇರಿದ್ದರು. 

ಇವರಲ್ಲಿ ಈಗಾಗಲೇ ನಾಲ್ವರು ಮೃತಪಟ್ಟಿದ್ದು, ಇನ್ನೂ ನಾಲ್ವರು ಜೀವನ್ಮರಣದ ಹೋರಾಟದಲ್ಲಿ ದಿನಗಳೆಯುತ್ತಿದ್ದಾರೆ. ಉಣಕಲ್ಲ ಗ್ರಾಮದ ಸಾಯಿನಗರದ ಅಚ್ಚವ್ವನ ಕಾಲನಿಯಲ್ಲಿ ಕಳೆದ 20 ವರ್ಷಗಳಿಂದ ಅಯ್ಯಪ್ಪ ಮಾಲಾಧಾರಿಗಳು ತಿಂಗಳುಗಳ ಕಾಲ ವ್ರತ ಆಚರಿಸಿ ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. 21ನೇ ವರ್ಷದ ಶಬರಿಮಲೆ ಯಾತ್ರೆಗೆ ಬೇಕಾದ ಎಲ್ಲ ಸಿದ್ದತೆಗಳನ್ನೂ ಮಾಡಿಕೊಂಡಿದ್ದರು. 

ಹುಬ್ಬಳ್ಳಿ- ರಾಮೇಶ್ವರಂ ಸಾಪ್ತಾಹಿಕ ವಿಶೇಷ ರೈಲು ಸೇವೆ ವಿಸ್ತರಣೆ

ಸಕಲ ಸಿದ್ಧತೆಯಾಗಿತ್ತು: 

ಉಣಕಲ್ಲಿನಲ್ಲಿ ಸಂಕಣ್ಣವರ ಓಣಿಯಲ್ಲಿ 12 ಜನರನ್ನು ಹೊಂದಿರುವ ಸನ್ನಿಧಾನವಿದ್ದರೆ, ಅಚ್ಚವ್ವನ ಕಾಲನಿಯಲ್ಲಿ 14 ಅಯ್ಯಪ್ಪ ಮಾಲಾಧಾರಿಗಳನ್ನು ಹೊಂದಿದ ಸನ್ನಿಧಾನವಿತ್ತು. ಇರುಮುಡಿ ಹೊತ್ತು ಶಬರಿಮಲೆ ಯಾತ್ರೆ ಮಾಡಬೇಕಾಗಿದ್ದ ಅಯ್ಯಪ್ಪ ಮಾಲಾಧಾರಿಗಳು ಈ ದುರ್ಘಟನೆಯಿಂದ ಮಸಣದ ಯಾತ್ರೆ ಮಾಡುತ್ತಿದ್ದಾರೆ. ಇನ್ನು ಇವರೊಂದಿಗೆ ಮಾಲೆ ಹಾಕಿದ್ದ ಐವರು ಮಾಲಾಧಾರಿಗಳು ಈ ಘಟನೆಯಿಂದಾಗಿ ಮನನೊಂದು ತಮ್ಮ ಮಾಲೆಗಳನ್ನು ತ್ಯಜಿಸಿದ್ದಾರೆ.

ಕಳೆದ 20 ವರ್ಷಗಳಿಂದ ಇಲ್ಲಿ ಅಯ್ಯಪ್ಪನ ಸನ್ನಿಧಾನ ನಿರ್ಮಿಸಲಾಗಿದೆ. ನೂರಾರು ಜನರು ಮಾಲೆ ಹಾಕಿದ್ದಾರೆ. ಈ ರೀತಿ ಒಮ್ಮೆಯೂ ನಡೆದಿರಲಿಲ್ಲ ಎಂದು ಉಣಕಲ್ಲನ ಗಜಾನನ ಗುರುಸ್ವಾಮಿ ತಿಳಿಸಿದ್ದಾರೆ. 

ನಾನು ಎಲ್ಲಿಯೇ ಹೋಗಲಿ ಎಲ್ಲ ಅಯ್ಯಪ್ಪ ಮಾಲಾಧಾರಿಗಳಿಗೆ ಅಗತ್ಯ ಜಾಗೃತಿ ವಹಿಸುವಂತೆ ಮನವಿ ಮಾಡಿಕೊಳ್ಳುತ್ತೇನೆ. ಈ ಘಟನೆ ಭಕ್ತರಲ್ಲಿ ತುಂಬಾ ನೋವು ತಂದಿದೆ ಎಂದು ಆನಂದ ಗುರುಸ್ವಾಮಿ ಹೇಳಿದ್ದಾರೆ. 

Latest Videos
Follow Us:
Download App:
  • android
  • ios