ಬಾನೆಟ್ ಮೇಲೆ ವ್ಯಕ್ತಿಯಿದ್ರೂ ಮೂರು ಕಿ.ಮೀ. ಕಾರು ಚಾಲನೆ: ಬೆಂಗಳೂರಲ್ಲಿ ಮತ್ತೊಂದು ಭಯಾನಕ ಘಟನೆ...!
ಬೈಕ್ ಸವಾರನೊಬ್ಬ 70 ವರ್ಷದ ವೃದ್ಧನ್ನ ದರದರನೇ ಎಳೆದಕೊಂಡು ಹೋಗಿದ್ದ ಘಟನೆ ಮಾಸುವ ಮುನ್ನ ಮತ್ತೊಂದು ಹಿಟ್ ಅಂಡ್ ರನ್ ಕೇಸ್ ಉಲ್ಲಾಳ ಮುಖ್ಯ ರಸ್ತೆಯಲ್ಲಿ ನಡೆದಿದೆ. ಕಾರಿನ ಬಾನೆಟ್ ಮೇಲೆ ಯುವಕ ಕುಳಿತಿದ್ದರೂ ಮಹಿಳೆಯ ಮೃಗಿಯ ವರ್ತನೆ ತೋರಿದ್ದು ವಿಡಿಯೋ ಸಖತ್ ವೈರಲ್ ಆಗಿದೆ.
ಕಿರಣ್.ಕೆ.ಎನ್, ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು(ಜ.21): ಬೆಂಗಳೂರಿನಲ್ಲಿ ಬೈಕ್ ಸವಾರ ವೃದ್ಧನನ್ನ ದರದರನೇ ಎಳೆದುಕೊಂಡು ಹೋಗಿದ್ದ ಘಟನೆ ಮಾಸುವ ಮುನ್ನ ಮತ್ತೊಂದು ಅಮಾನವಿಯ ಘಟನೆ ನಡೆದಿದೆ. ರಾಜಧಾನಿಯಲ್ಲಿ ನಡೆದಿರೋ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಹಿಟ್ ಅಂಡ್ ರನ್ ಕೇಸ್ ವರದಿಯಾಗಿದೆ. ಬೈಕ್ ಸವಾರನೊಬ್ಬ 70 ವರ್ಷದ ವೃದ್ಧನ್ನ ದರದರನೇ ಎಳೆದಕೊಂಡು ಹೋಗಿದ್ದ ಘಟನೆ ಮಾಸುವ ಮುನ್ನ ಮತ್ತೊಂದು ಹಿಟ್ ಅಂಡ್ ರನ್ ಕೇಸ್ ಉಲ್ಲಾಳ ಮುಖ್ಯ ರಸ್ತೆಯಲ್ಲಿ ನಡೆದಿದೆ. ಕಾರಿನ ಬಾನೆಟ್ ಮೇಲೆ ಯುವಕ ಕುಳಿತಿದ್ದರೂ ಮಹಿಳೆಯ ಮೃಗಿಯ ವರ್ತನೆ ತೋರಿದ್ದು ವಿಡಿಯೋ ಸಖತ್ ವೈರಲ್ ಆಗಿದೆ.
ಉಲ್ಲಾಳ ಮುಖ್ಯ ರಸ್ತೆಯಲ್ಲಿ ಟಾಟಾ ನೆಕ್ಸಾನ್ ಕಾರು ಪ್ರಿಯಾಂಕ ಅನ್ನೋ ಮಹಿಳೆ ಡ್ರೈವ್ ಮಾಡಿಕೊಂಡು ಹೋಗುತ್ತಿರುತ್ತಾರೆ. ರ್ಯಾಶ್ ಡ್ರೈವಿಂಗ್ ಮಾಡಿಕೊಂಡು ಹೋಗುತ್ತಿದ್ದನ್ನ ದರ್ಶನ್ ಎಂಬ ಯುವಕ ಪ್ರಶ್ನೇ ಮಾಡಿದ್ದಾನೆ. ಮಹಿಳೆ ಬೆರಳು ತೋರಿಸಿ ದರ್ಪ ತೊರಿದ್ದಾಳೆ. ಮಹಿಳೆ ಯಾವಾಗ ದರ್ಪ ತೋರಿ ಮುಂದೆ ಕಾರು ಮೂವ್ ಮಾಡಲು ಮುಂದಾದಾಗ ದರ್ಶನ್ ಹಾಗೂ ಅವರ ತಂಡ ಕಾರನ್ ಚೇಸ್ ಮಾಡಿದ್ದಾರೆ. ತಡೆದು ಗಲಾಟೆ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಪೊಲೀಸ್ರಿಗೆ ಮಾಹಿತಿ ಹೋಗಿ ಪೊಲೀಸ್ರು ಸ್ಥಳಕ್ಕೆ ಬಂದಿದ್ದಾರೆ. ಇಬ್ಬರಿಗೂ ಪೊಲೀಸ್ ಠಾಣೆಗೆ ಬರುವಂತೆ ಸೂಚಿಸಿ ಹೊರಟಿದ್ದಾರೆ.
ಕಾಮಗಾರಿ ನಡೆಸಿ ಎರಡು ದಿನಕ್ಕೆ ಕುಸಿದ ರಸ್ತೆ: ಬಿಬಿಎಂಪಿ ವಿರುದ್ಧ ಸ್ಥಳೀಯರ ಆಕ್ರೋಶ
ಆದರೆ, ಮಹಿಳೆ ಪೊಲೀಸ್ ಠಾಣೆಗೆ ಹೋಗಲು ಮಹಿಳೆ ಕಾರು ತಿರುಗಿಸಿದ್ದಾಳೆ. ಈ ವೇಳೆ ಮಹಿಳೆ ತಪ್ಪಿಸಿಕೊಳ್ಳಬಹುದು ಎಂದು ಭಾವಿಸಿ ಪ್ರಿಯಾಂಕ ಕಾರಿನ ಮೇಲೆ ಹತ್ತಿ ಕೂತಿದ್ದಾನೆ. ಈ ವೇಳೆ ಪ್ರಿಯಾಂಕ ಮೂರು ಕಿಲೋಮೀಟರ್ ದೂರ ಕಾರು ಎರ್ಯಾ ಬಿರ್ರಿ ಒಡಿಸಿದ್ದಾಳೆ. ಮಹಿಳೆ ಯಾವಾಗ ಕಾರು ನಿಲ್ಲಿಸಲಿಲ್ವೋ ಆಗ ದರ್ಶನ್ ಸ್ಥಳೀಯರನ್ನ ಕರೆದು ಕಾರು ಅಡ್ಡಗಟ್ಟಿದ್ದಾರೆ. ಕಾರು ಅಡ್ಡಗಟ್ಟಿ ಕಾರು ಸಂಪೂರ್ಣವಾಗಿ ಜಕ್ಕಂ ಮಾಡಿದ್ದಾರೆ.ಕೂಡಲೇ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ಕೊಟ್ಟಿದ್ದಾರೆ.ಪೊಲೀಸರು ಸ್ಥಳಕ್ಕೆ ಬಂದು ಎರಡು ಕಡೆಯವರನ್ನ ಕರೆದುಕೊಂಡು ಹೋಗಿದ್ದಾರೆ. ಸದ್ಯ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಇಬ್ಬರು ಕೌಂಟರ್ ಕೇಸ್ ದಾಖಲಿಸಿದ್ದು ಎರಡು ಎಫ್ ಐ ಆರ್ ದಾಖಲಾಗಿದೆ. ದರ್ಶನ್ ಕೊಟ್ಟ ದೂರಿನ ಆಧಾರದ ಮೇಲೆ ಮಹಿಳೆ ಪ್ರೀಯಾಂಕ ವಿರುದ್ಧ ಕೊಲೆಯತ್ನ, ಪ್ರಕರಣ ದಾಖಲಾಗಿದೆ. ಮಹಿಳೆ ಕೊಟ್ಟ ದೂರಿನ ಆಧಾರದ ಮೇಲೆ ದರ್ಶನ್, ವಿನಯ್, ಯಶವಂತ್ , ಸೇರಿದಂತೆ ನಾಲ್ವರ ವಿರುದ್ಧ 354 ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧನ ಮಾಡಲಾಗಿದೆ.
ಸದ್ಯ ಘಟನೆ ಸಂಬಂದ ಎರಡು ಕಡೆಯಿಂದ ಒಟ್ಟು 5 ಮಂದಿಯನ್ನ ಬಂಧನ ಮಾಡಲಾಗಿದೆ. ಕೇವಲ ನಿಂತು ಮಾತನಾಡಿ ಬಗೆಹರಿಸಿಕೊಳ್ಳಬೇಕಾದ ಘಟನೆ ಇಷ್ಟು ದೊಡ್ಡ ಹೈಡ್ರಾಮ ಆಗಿದ್ದು ವಿಪರ್ಯಾಸವೇ ಸರಿ.....