ಗದಗ: ಕೊರೋನಾಗೆ ಮತ್ತೊಂದು ಬಲಿ, ಲಕ್ಕುಂಡಿ ಗ್ರಾಮ ಸಂಪೂರ್ಣ ಸ್ತಬ್ಧ
ಮನೆ ಬಿಟ್ಟು ಹೊರ ಬರಲು ಭಯ ಪಡುತ್ತಿರುವ ಗ್ರಾಮಸ್ಥರು| ಕೊರೋನಾದಿಂದ ವ್ಯಕ್ತಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ 14 ದಿನ ಗ್ರಾಮದಲ್ಲಿ ಅಂಗಡಿ ಮುಗ್ಗಟ್ಟು ತೆರೆಯದಂತೆ, ಮನೆಬಿಟ್ಟು ಹೊರ ಬಾರದಂತೆ ಡಂಗುರ ಸಾರಿದ ಗ್ರಾಮ ಪಂಚಾಯತ್|
ಗದಗ(ಜೂ.04): ಮಾರಕ ಕೊರೋನಾದಿಂದ 44 ವರ್ಷದ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಹಿನ್ನಲೆಯಲ್ಲಿ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮ ಸಂಪೂರ್ಣ ಸ್ತಬ್ಧವಾಗಿದೆ. ಕೊರೋನಾದಿಂದ ಮೃತಪಟ್ಟ ವ್ಯಕ್ತಿ ಗ್ರಾಮದಲ್ಲಿ ಹಲವರಿಗೆ ಮದುವೆ ಮಾಡಿಸಿದ್ದನು ಎಂದು ತಿಳಿದು ಬಂದಿದೆ.
ಈತನ ಸಾವಿನ ಸುದ್ದಿ ಕೇಳಿದ ಗ್ರಾಮಸ್ಥರು ಮನೆ ಬಿಟ್ಟು ಹೊರ ಬರಲು ಕೂಡ ಭಯ ಪಡುತ್ತಿದ್ದಾರೆ. ಕೊರೋನಾದಿಂದ ವ್ಯಕ್ತಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ 14 ದಿನ ಗ್ರಾಮದಲ್ಲಿ ಅಂಗಡಿ ಮುಗ್ಗಟ್ಟು ತೆರೆಯದಂತೆ, ಮನೆಬಿಟ್ಟು ಹೊರ ಬಾರದಂತೆ ಗ್ರಾಮ ಪಂಚಾಯತ್ ಡಂಗುರ ಸಾರಿದೆ.
ಕೊರೋನಾ ತಂದ ಸಂಕಷ್ಟ: ಕುಟುಂಬ ನಿರ್ವಹಣೆಗೆ ಕೂಲಿ ಕೆಲಸಕ್ಕೆ ಮುಂದಾದ ಎಂಜಿನಿಯರ್..!
ಹೀಗಾಗಿ ಗ್ರಾಮದಲ್ಲಿ ಹೋಟೆಲ್, ಕಿರಾಣಿ, ಬಟ್ಟೆ ಅಂಗಡಿಗಳು ಸೇರಿ ಎಲ್ಲವೂ ಬಂದ್ ಆಗಿವೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಗ್ರಾಮದಲ್ಲಿ ಬೀಡು ಬಿಟ್ಟಿದ್ದಾರೆ. ವ್ಯಕ್ತಿ ವಾಸಗಿದ್ದ ರಸ್ತೆಗಳನ್ನ ಜನರು ಸ್ವಯಂಪ್ರೇರಿತರಾಗಿ ಬಂದ್ ಮಾಡಿದ್ದಾರೆ.