ಚಿಕ್ಕಮಗಳೂರು: ರಾಜ್ಯದಲ್ಲಿ ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟ ವಿಡಿಯೋ..!

ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳು ಸಭೆ ಸೇರಿ ಅಂಬೇಡ್ಕರ್‌ಗೆ ಅವಮಾನ ಮಾಡಿದವನ ವಿರುದ್ಧ ಆಕ್ರೋಶ

Another controversial video Shared in Social Media at Chikkamagaluru grg

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಆ.25):  ರಾಜ್ಯದಲ್ಲಿ ಮೊಟ್ಟೆ, ಸಾವರ್ಕರ್, ಗಣೇಶೋತ್ಸವ ವಿವಾದ ಜೋರಿರುವಾಗಲೇ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿರುವ ವಿಡಿಯೋ ವಿವಾದಕ್ಕೆ ಗುರಿಯಾಗಿದೆ. ದಲಿತ ಸಂಘಟನೆಗಳು ಬಜರಂಗದಳದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದೆ. ವಿವಾದಕ್ಕೆ ಎಡೆಮಾಡಿಕೊಟ್ಟಿರುವ ವಿಡಿಯೋದಲ್ಲಿ  ಅಂಬೇಡ್ಕರ್ಗೆ ಅವಮಾನ ಮಾಡಲಾಗಿದೆ. 

ಬಜರಂಗಳದಳದ ಸಂಘಟನೆ ವಿರುದ್ಧ ದಲಿತ ಸಂಘಟನೆಗಳ ಕಿಡಿ

ದಲಿತ ಸಂಘಟನೆಗಳ ಹೋರಾಟ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಯಾರೋ ಕಿಡಿಗೇಡಿಗಳು ಮಾಡಿರೋ ಈ ಪಾಪ್ ಸಾಂಗ್ ಕೇಳೋದಕ್ಕೆ ಆಗಲ್ಲ. ಅಷ್ಟು ವಲ್ಗರ್ ಪದಗಳಿಂದ ಅಂಬೇಡ್ಕರ್ಗೆ ಅವಮಾನ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪವರ್ ಆಫ್ ಹಿಂದೂ ಕೆ.ಎ.18 ಎಂಬ ಪೇಜ್ನಲ್ಲಿ ಈ ವಿಡಿಯೋ ಶೇರ್ ಮಾಡಿದ್ದಾರೆ. ಇದು ದಲಿತ ಸಂಘಟನೆಗಳ ಕಣ್ಣನ್ನ ಕೆಂಪಾಗಿಸಿದೆ. ಚಿಕ್ಕಮಗಳೂರು ನಗರದಲ್ಲಿ ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳು ಸಭೆ ಸೇರಿ ಅಂಬೇಡ್ಕರ್ಗೆ ಅವಮಾನ ಮಾಡಿದವನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸಂಘ ಪರಿವಾರ ಅಥವ ಬಲಾಢ್ಯರಿಂದ ಪ್ರೇರೇಪಣೆಗೊಂದು ಅಂಬೇಡ್ಕರ್ ವಿರುದ್ಧ ಈ ರೀತಿ ಮಾಡಿದ್ದಾರೆ. ಭಜರಂಗದಳ ಎಂಬ ಪೋಸ್ಟ್ನಲ್ಲಿ ನೋಡಿದ್ದೇವೆ. ತನಿಖೆ ಬಳಿಕ ಗೊತ್ತಾಗುತ್ತೆ. ಭಜರಂಗದಳದವನೇ ಮಾಡಿದ್ದಾರೆ ಕೂಡಲೇ ಅವನನ್ನ ಬಂಧಿಸಿ ಗಡಿಪಾರು ಮಾಡಬೇಕು. ಇಲ್ಲವಾದರೆ,ಮುಂದಿನ ದಿನಗಳಲ್ಲಿ ಬಿಜೆಪಿ ಇದರ ಪರಿಣಾಮ ಎದುರಿಸುಬೇಕಾಗುತ್ತೇದೆ ಎಂದು ದಲಿತ ಮುಖಂಡ ಚಿದಂಬರ ಎಚ್ಚರಿಸಿದ್ದಾರೆ.  

CHIKKAMAGALURU: ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸದೇ 1ವರ್ಷ!

ಸಂಘಟನೆಗಳಿಂದ ಪೊಲೀಸ್ ಠಾಣೆಗೆ ದೂರು 

ಹಾಸನ ಜಿಲ್ಲೆ ಸಖಲೇಶಪುರದಲ್ಲಿ ನಡೆದ ದಲಿತ ಸಂಘಟನೆಗಳ ಹೋರಾಟಕ್ಕೆ ಅಂಬೇಡ್ಕರ್ ಭಾವಚಿತ್ರ ಹಾಕಿ ಅವಾಚ್ಯ ಶಬ್ಧಗಳಿಂದ ನಿಂಧಿಸಿ ಸಾಂಗ್ ಮಾಡಿದ್ದಾರೆ. ಕೂಡಲೇ ಅವನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಲ್ಲಾ ದಲಿತ ಸಂಘಟನೆಗಳು ಹೋರಾಟಕ್ಕೆ ಇಳಿದಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ 8-10 ಸಾವಿರ ಜನ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ಯೋಜನೆ ರೂಪಿಸಿದ್ದಾರೆ. ಈಗಾಗಲೇ ಎಸ್ಪಿಗೂ ದೂರು ನೀಡಿದ್ದು, ಎಸ್ಪಿ ಕೂಡ 2-3 ದಿನದಲ್ಲಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅವನ ವಿರುದ್ಧ ಸೂಕ್ತ ಕ್ರಮಕೈಗೊಳ್ಳದಿದ್ದರೆ ನಮ್ಮ ಹೋರಾಟದ ರೂಪವನ್ನ ಮತ್ತಷ್ಟು ಬದಲಿಸುವುದಾಗಿ ಸರ್ಕಾರಕ್ಕೆ ಎಚ್ಚರಿಸಿದ್ದಾರೆ. ಅಂಬೇಡ್ಕರ್‌ಗೆ ಈ ರೀತಿ ಮಾಡಿದ್ದೀರಾ..ಅವರು ಈ ದೇಶದ ಪಿತಾಮಹಾ. ಬಜರಂದಳವರು ಭಯೋತ್ಪಾದಕರಿದ್ದಂತೆ, ಈ ಘಟನೆ ಮುಂದಿನ ದಿನಗಳಲ್ಲಿ ಮತ್ತೊಂದು ತಿರುವು ಪಡೆದುಕೊಳ್ಳುತ್ತೆ ಎಂದು ದಲಿತ ಮುಖಂಡ ಹೊನ್ನೇಶ್ ಎಚ್ಚರಿಕೆ ನೀಡಿದ್ದಾರೆ. 

ಒಟ್ಟಾರೆ, ಈ ಕೃತ್ಯವನ್ನ ಯಾರೇ ಮಾಡಿದ್ದರೂ ಅದು ತಪ್ಪು. ಅವರಿಗೆ ಸೂಕ್ತ ಶಿಕ್ಷೆಯಾಗಬೇಕು. ಅಂಬೇಡ್ಕರ್ ರಚಿಸಿದ ಸಂವಿಧಾನ ಮೇಲೆ ಇಂದು ಈ ದೇಶ ನಿಂತಿರೋದು. ನಡೆಯುತ್ತಿರೋದು. ಅದಿಲ್ಲದಿದ್ದರೆ ಜನರ ಬದುಕು ಮತ್ತಷ್ಟು ಘನಘೋರವಾಗಿರುತ್ತಿತ್ತು. ಯಾರಿಗೋ ಯಾರ ಮೇಲೋ ಯಾವ್ದೋ ಕಾರಣಕ್ಕೋ ಮತ್ಯಾವುದೇ ರೀತಿಯ ಕೋಪ ಇರಬಹುದು. ಆದರೆ, ಅಂಬೇಡ್ಕರ್ ಅವರಿಗೆ ಈ ರೀತಿಯ ನಿಂದನೆ ಮಾತ್ರ ಅಕ್ಷಮ್ಯ ಅಪರಾಧ. 
 

Latest Videos
Follow Us:
Download App:
  • android
  • ios