ಕಳೆದ ಎರಡು ತಿಂಗಳ‌ ಹಿಂದಷ್ಟೇ ಬಾದನಹಟ್ಟಿ ಗ್ರಾಮದ ಎರಡು ಮಕ್ಕಳು ನಾಯಿ ದಾಳಿಗೆ ಬಲಿಯಾಗಿದ್ದವು. ಆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಮಗು ನಾಯಿ ದಾಳಿಗೆ ಬಲಿ. 

ಬಳ್ಳಾರಿ(ಫೆ.26): ಹುಚ್ಚು ನಾಯಿ ಕಡಿತಕ್ಕೆ ಬಳ್ಳಾರಿಯಲ್ಲಿ ಮತ್ತೊಂದು ಮಗು ಬಲಿಯಾಗಿದೆ. ಕಳೆದ ಎರಡು ತಿಂಗಳ‌ ಹಿಂದಷ್ಟೇ ಬಾದನಹಟ್ಟಿ ಗ್ರಾಮದ ಎರಡು ಮಕ್ಕಳು ನಾಯಿ ದಾಳಿಗೆ ಬಲಿಯಾಗಿದ್ದವು. ಆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಮಗು ನಾಯಿ ದಾಳಿಗೆ ಬಲಿಯಾಗಿದೆ. 

ನಾಲ್ಕು ವರ್ಷದ ತಯಿಬಾ, ಹುಚ್ಚು ನಾಯಿ ಕಡಿತಕ್ಕೆ ಬಲಿಯಾದ ನತದೃಷ್ಟ ಮಗುವಾಗಿದೆ. ಬಳ್ಳಾರಿ ನಗರದ 31 ನೇ ವಾರ್ಡ್‌ನ ನಿವಾಸಿ ಕಿಶೋರ್ ಎಂಬುವರ ಮಗುವೇ ಹುಚ್ಚು ನಾಯಿ ಕಡಿತಕ್ಕೆ ಬಲಿಯಾಗಿದೆ. 

WILD ANIMAL ATTACK: ಕಾಡುಪ್ರಾಣಿಗಳ ದಾಳಿ: ಮೆಕ್ಕೆಜೋಳ ಬೆಳೆ ನಾಶ

ಫೆಬ್ರವರಿ 7 ರಂದು ವಟ್ಟಪ್ಪಗೆರೆ ಪ್ರದೇಶದ 30 ಜನರ ಮೇಲೆ ಹುಚ್ಚು ನಾಯಿ ದಾಳಿ ಮಾಡಿತ್ತು. ಅಂದು ಬಳ್ಳಾರಿಯ ವಿಮ್ಸ್‌ನಲ್ಲಿ ಚಿಕಿತ್ಸೆ ಪಡೆದು, ಬಳಿಕ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ತೆರಳಿದ್ದ ಮಗು ನಿನ್ನೆ(ಶನಿವಾರ) ಮೃತಪಟ್ಟಿದೆ. 
ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ. ನಿನ್ನೆ ಸಂಜೆ ಬಳ್ಳಾರಿಯಲ್ಲಿ ಮಗುವಿನ ಅಂತ್ಯಕ್ರಿಯೆ ನೆರವೇರಿದೆ. ಬಳ್ಳಾರಿಯಲ್ಲಿ ಪದೇ ಪದೇ ಹುಚ್ಚು ನಾಯಿ ದಾಳಿ ಆಗುತ್ತಿದ್ದರೂ ಮಹಾನಗರ ಪಾಲಿಕೆಯ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ.