ಅನಾಮಲಿ ಸ್ಕ್ಯಾನಿಂಗ್ ಮಾಡಿಸಿ ಮೆದುಳು ವಾತ ಸಮಸ್ಯೆ ತಡೆಗಟ್ಟಲು ಸಹಕಾರಿ

ಗರ್ಭವಸ್ಥೆಯಲ್ಲಿ ಅನಾಮಲಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವುದರಿಂದ ಮೆದುಳು ವಾತ ಸಮಸ್ಯೆ ತಡೆಗಟ್ಟಲು ಸಹಾಕಾರಿಯಾಗಲಿದೆ ಎಂದು ಸಂತಾನೋತ್ಪತ್ತಿ ಮಕ್ಕಳ ಆರೋಗ್ಯಾಧಿಕಾರಿ ಡಾ.ಎಂ.ಎಸ್. ಜಯಂತ್ ಹೇಳಿದರು

Anomaly scanning is helpful in preventing brain  problem snr

  ಸರಗೂರು :  ಗರ್ಭವಸ್ಥೆಯಲ್ಲಿ ಅನಾಮಲಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವುದರಿಂದ ಮೆದುಳು ವಾತ ಸಮಸ್ಯೆ ತಡೆಗಟ್ಟಲು ಸಹಾಕಾರಿಯಾಗಲಿದೆ ಎಂದು ಸಂತಾನೋತ್ಪತ್ತಿ ಮಕ್ಕಳ ಆರೋಗ್ಯಾಧಿಕಾರಿ ಡಾ.ಎಂ.ಎಸ್. ಜಯಂತ್ ಹೇಳಿದರು,

ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್, ವಿಶೇಷಚೇತನರಿಗಾಗಿ ಸಮಗ್ರ ಆರೈಕೆ, ಬೆಂಬಲ ಮತ್ತು ಚಿಕಿತ್ಸೆ ಯೋಜನೆಯ ವತಿಯಿಂದ ಸಮುದಾಯದ ಸಹಭಾಗಿತ್ವದೊಂದಿಗೆ ವಿಶ್ವ ಸೆರೆಬ್ರಲ್ ಪಾಲ್ಸಿ ದಿನಾಚರಣೆಯನ್ನು ಸರಗೂರಿನ ವಿವೇಕಾನಂದ ಸ್ಮಾರಕ ಆಸ್ಪತ್ರೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶೇಷ ಮಕ್ಕಳು ಮತ್ತು ಪೋಷಕರಿಗೆ ಗರ್ಭ ವಸ್ಥೆಯಲ್ಲಿ ಅನಾಮಲಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವುದರಿಂದ ಮೆದುಳುವಾತ ಸಮಸ್ಯೆಗೆ ಮೊದಲೆ ಚಿಕಿತ್ಸೆಯನ್ನು ಪಡೆದುಕೊಳ್ಳಲು ಸಹಾಯ ವಾಗುತ್ತದೆ. ಮೆದುಳುವಾತ ಇರುವ ಮಕ್ಕಳಿಗೆ ಮನೆಯ ಆಧಾರಿತ ತೆರಪಿ ತರಬೇತಿಯನ್ನು ಪಡೆದು ಆರೈಕೆ ಮಾಡುವುದರಿಂದ ಅರೋಗ್ಯವಂತ ಜೀವನ ಮಾಡಲು ಸಹಾಯ ವಾಗುತ್ತದೆ ಎಂದರು.

ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಸಿಇಒ ಎಸ್. ಸವಿತಾ ಮಾತನಾಡಿ, ಸೆರೆಬ್ರಲ್ ಪಾಲ್ಸಿ ಇರುವ ಮಕ್ಕಳ ಪಾಲನೆ ಪೋಷಣೆ ಮಾಡುವುದರ ಜೊತೆಗೆ ಪೋಷಕರು ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬೇಕೆಂದರು.

ವಿವಿದ್ಯೋದ್ದೇಶ ಪುನರ್ವಸತಿ ಕಾರ್ಯಕರ್ತ ಮಹದೇವಯ್ಯ ಮಾತನಾಡಿದರು.

ಸಂಸ್ಥೆಯಿಂದ 16 ವ್ಹೀಲ್ ಚೇರ್ಗಳು ಮತ್ತು ಕಲಿಕಾ ಕಿಟ್ಗಳನ್ನು ವಿಶೇಷ ಚೇತನರಿಗೆ ವೇದಿಕೆಯಲ್ಲಿದ್ದ ಗಣ್ಯರಿಂದ ವಿತರಿಸಲಾಯಿತು, ಮೈಸೂರಿನ ವಿಸ್ಡಮ್ ವಿಶೇಷ ಶಾಲೆಯ ವಿಶೇಷಚೇತನ ಮಕ್ಕಳಿಂದ ದೇಶಭಕ್ತಿ ಕುರಿತ ನೃತ್ಯವನ್ನು ಮಾಡಿ ರಂಜಿಸಿದರು.

ತಾಲೂಕು ಅರೋಗ್ಯಾಧಿಕಾರಿಗಳಾದ ಡಾ. ರವಿಕುಮಾರ್ ಟಿ, ವಿವೇಕಾನಂದ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಡಾ.ಜಿ.ಎಸ್. ಕುಮಾರ್, ವ್ಯವಸ್ಥಾಪಕಿ ಸುಷ್ಮಶ್ರೀ, ಡಾ. ಅಭಿಷೇಕ್, ಸಂತೋಷ, ದೀಪಶ್ರೀ, ಬಂಗಾರಶೆಟ್ಟಿ, ವೆಂಕಟಸ್ವಾಮಿ, ನಾಗೇಶ, ನಿಂಗರಾಜು, ಗೋಪಾಲಕೃಷ್ಣ, ಮಮತ, ಪೂರ್ಣಿಮ, ಸಮುದಾಯದ ವಿಶೇಷಮಕ್ಕಳ ಫೋಷಕರಾದ ಸೌಮ್ಯ ವಿದ್ಯಾ, ಕುಸುಮ ಹಾಗೂ ಸಿಬ್ಬಂದಿ, ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಇದ್ದರು.

ಲಿಂಗ ಪತ್ತೆ ಕಾರ್ಯ ತಪ್ಪು

ಉಡುಪಿ(ಆ.31): ಗರ್ಭ ಪೂರ್ವ ಹಾಗೂ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಮಾಡುವುದು ಕಾನೂನಿನ ಅಡಿಯಲ್ಲಿ ಅಪರಾಧ. ಇತ್ತೀಚಿನ ದಿನಗಳಲ್ಲಿ ಹೆಣ್ಣು ಹಾಗೂ ಗಂಡು ಮಕ್ಕಳ ಲಿಂಗಾನುಪಾತ ವ್ಯತ್ಯಾಸ ಉಂಟಾಗಿ ಸಮಾಜದಲ್ಲಿ ಗಂಭೀರ ಪರಿಣಾಮ ಉಂಟಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೇಳಿದರು.

ಅವರು ಇಂದು(ಗುರುವಾರ) ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಕ್ಷಮ ಪ್ರಾಧಿಕಾರ ಪಿ.ಸಿ. & ಪಿ.ಎನ್.ಡಿ.ಟಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ, ಜಿಲ್ಲಾ ಪಿ.ಸಿ & ಪಿ.ಎನ್.ಡಿ.ಟಿ ನೋಂದಾಯಿತ ಸಂಸ್ಥೆಗಳ ಮಾಲೀಕರು ಹಾಗೂ ವೈದ್ಯರಿಗೆ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆ ಕುರಿತು ನಡೆದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ  ಮಾತನಾಡಿದರು.

ಇವತ್ತು ಕಾಣಲಿರೋ ಮೂನ್ ಸೂಪರ್ರೋ ಸೂಪರ್: ಚಂದ್ರನ ನೋಡೋದು ಮಿಸ್‌ ಮಾಡ್ಲೇಬೇಡಿ..!

ಇತ್ತೀಚಿನ ದಿನಗಳಲ್ಲಿ ಹೆಣ್ಣು ಭ್ರೂಣಹತ್ಯೆಯಿಂದಾಗಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಇದರಿಂದ ಸಾಮಾಜಿಕವಾಗಿ ಅಸಮತೋಲನ ಉಂಟಾಗುತ್ತಿದೆ. ಹೆಣ್ಣು ಮಕ್ಕಳು ಹೊರೆ ಎಂದು ಭಾವಿಸದೇ, ಹೆಣ್ಣು ಮತ್ತು ಗಂಡು ಮಕ್ಕಳನ್ನು ಸಮಾನವಾಗಿ ಕಾಣಬೇಕು. ಇದರಿಂದ ಲಿಂಗಾನುಪಾತದಲ್ಲಿ ಬದಲಾವಣೆ ತರಲು ಸಾಧ್ಯ ಎಂದರು.

Latest Videos
Follow Us:
Download App:
  • android
  • ios