ವಿಜ​ಯ​ಪುರ(ಫೆ.28): ಜಿಲ್ಲೆಯ ಚಡ​ಚಣ ತಾಲೂಕಿನ ಲೋಣಿ (ಬಿ.ಕೆ.) ಗ್ರಾಮದ ಶ್ರೀ ಸಿದ್ಧೇಶ್ವ​ರ ದೇವರ ಜಾತ್ರೆಗೆ ಆಗಮಿಸುವ ಜನರಿಗೆ ಸ್ವಾಗತ ಕೋರಿ ಹಂತಕ ಧರ್ಮರಾಜ ಚಡಚಣ ಹಾಗೂ ಅವರ ಅಭಿಮಾನಿಗಳನ್ನೊಳಗೊಂಡ ಬ್ಯಾನರ್‌ಗೆ ಧರ್ಮರಾಜ ಅಭಿಮಾನಿಗಳು ಭಾನು​ವಾರ ಕ್ಷೀರಾ​ಭಿ​ಷೇಕ ಮಾಡಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್‌ ಆಗಿವೆ.

ಇದೇ ಗ್ರಾಮದಲ್ಲಿ ಹಲವು ವರ್ಷಗಳ ಹಿಂದೆ ಚಡಚಣ ಕುಟುಂಬದ ವಿರೋಧಿ ಬಣದಲ್ಲಿರುವ ಪುತ್ರಪ್ಪ ಸಾಹುಕಾರ ಭೈರಗೊಂಡ ಅವರ ಮೇಲೆ ಗುಂಡಿನ ಸುರಿಮಳೆಗೈದು ಪರಾರಿಯಾಗಿದ್ದ. ನಂತರ ಜೈಲು ಪಾಲಾಗಿ ಜಾಮೀನಿನ ಮೇಲೆ ಹೊರಬಂದ ಧರ್ಮರಾಜ, ತಾಲೂಕಿನ ಕೊಂಕಣಗಾಂವ ಗ್ರಾಮದ ಹೊರವಲಯದಲ್ಲಿ ಠಿಕಾಣಿ ಹೂಡಿದ್ದ. 

ಭೀಮಾತೀರದ ಹತ್ಯೆಗೆ ಬಿಗ್ ಟ್ವಿಸ್ಟ್ !

ನಂತರ ಈತನ ಅಡ್ಡಾ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಧರ್ಮರಾಜ ಮತ್ತು ಪೊಲೀ​ಸರ ಮಧ್ಯೆ ನಡೆದ ಗುಂಡಿಗೆ ಕಾಳಗದಲ್ಲಿ ಧರ್ಮರಾಜ ಹತನಾದ. ಧರ್ಮರಾಜ ಚಡಚಣನನ್ನು ಅಭಿಮಾನಿಗಳು ದೇವರು ಎಂದು ಭಾವಿಸಿ ಅವನ ಬ್ಯಾನರ್‌ಗೆ ಕ್ಷೀರಾ​ಭಿ​ಷೇಕ ಮಾಡಿರುವ ಫೋಟೋ ಈಗ ಎಲ್ಲೆಡೆ ವೈರಲ್‌ ಆಗಿದೆ.