Asianet Suvarna News Asianet Suvarna News

ಕೊಪ್ಪಳ ತಾಲೂಕಿನ ಶಿವಪುರವೇ ಆಂಜನೇಯ ತಾಯಿ ಜನ್ಮಸ್ಥಳ!

  • ಕೊಪ್ಪಳ ತಾಲೂಕಿನ ಶಿವಪುರವೇ ಆಂಜನೇಯ ತಾಯಿ ಜನ್ಮಸ್ಥಳ!
  • ಅಂಜನಾದ್ರಿ ಬೆಟ್ಟವೇ ಹನುಮನ ಜನ್ಮಸ್ಥಳ ಎಂಬುದಕ್ಕೆ ದೊರೆಯಿತು ಮಹತ್ವದ ಸಾಕ್ಷಿ
Anjaneys mothers birthplace is Shivapura in Koppal taluk rav
Author
First Published Oct 31, 2022, 12:05 PM IST

ಎಸ್‌. ನಾರಾಯಣ್‌

ಮುನಿರಾಬಾದ್‌ (ಅ.31) : ಕೊಪ್ಪಳ ತಾಲೂಕಿನ ಮುನಿರಾಬಾದ್‌ ಸಮೀಪದ ಶಿವಪುರ ಗ್ರಾಮದಲ್ಲಿ ಆಂಜನೇಯನ ತಾಯಿ ಅಂಜನಾದೇವಿ ದೇವಸ್ಥಾನವಿದ್ದು, ಇದು ವಿಶ್ವದ ಏಕೈಕ ಅಂಜನಾದೇವಿ ದೇವಾಲಯ ಎಂದು ಹೇಳಲಾಗಿದೆ.

ಆಂಜನೇಯ ಜನ್ಮಸ್ಥಳ ವಿವಾದ, ಆಂಧ್ರ ಆಯ್ತು ಈಗ ಮಹಾರಾಷ್ಟ್ರ ಕಿರಿಕ್

ಇದರಿಂದ ಆಂಜನೇಯ ಜನ್ಮಸ್ಥಳ ಗಂಗಾವತಿ ತಾಲೂಕಿನ ಅಂಜನಾದ್ರಿಯೇ ಎಂಬುದಕ್ಕೆ ಮತ್ತೊಂದು ಪುರಾವೆ ದೊರಕಿದಂತಾಗಿದೆ. ಆಂಜನೇಯ ತಾಯಿ ಅಂಜನಾದೇವಿಯ ಜನ್ಮಸ್ಥಳದ ಬಗ್ಗೆ ಇತಿಹಾಸಕಾರರೇ ಸ್ಪಷ್ಟನೆ ನೀಡಿದ್ದಾರೆ. ಸ್ಕಂದ ಪುರಾಣದಲ್ಲಿನ ಉಲ್ಲೇಖಗಳ ಸಮೇತ ವಿವರಿಸಿದ್ದಾರೆ.

ಇತಿಹಾಸಕಾರರು ಹೇಳುವುದೇನು?:

5 ಸಾವಿರ ವರ್ಷಗಳ ಹಿಂದೆ ಗೌತಮ ಮಹರ್ಷಿಗಳು ಕೊಪ್ಪಳ ತಾಲೂಕಿನ ಶಿವಪುರ ಗ್ರಾಮದಲ್ಲಿ ವಾಸವಾಗಿದ್ದರು. ಅಂಜನಾದೇವಿಯು ಅವರ ಪುತ್ರಿ. ಶಿವಪುರ ಗ್ರಾಮದಲ್ಲಿಯೇ ಅಂಜನಾದೇವಿ ಜನಿಸಿದರು. ಅಲ್ಲದೇ ಗ್ರಾಮಕ್ಕೆ 5000 ವರ್ಷಗಳ ಇತಿಹಾಸವಿದೆ. ತ್ರೇತಾಯುಗದಲ್ಲಿ ಆಂಜನೇಯ ಜನಿಸಿದ್ದಾರೆ. ಅಂಜನಾದ್ರಿ ಬೆಟ್ಟವೇ ಆಂಜನೇಯ ಸ್ವಾಮಿಯ ಜನ್ಮಸ್ಥಳ ಎಂಬುದಕ್ಕೆ ಸಂದೇಹವೇ ಇಲ್ಲ ಎನ್ನುತ್ತಾರೆ ಇತಿಹಾಸ ತಜ್ಞ ಪೊ›. ಶರಣಪ್ಪ ಕೋಲ್ಕಾರ.

ಅಂಜನಮ್ಮನ ದೇಗುಲ:

ಶಿವಪುರ ಗ್ರಾಮವು ಮುನಿರಾಬಾದ್‌ನಿಂದ ಉತ್ತರಕ್ಕೆ 8 ಕಿಮೀ ದೂರದಲ್ಲಿದೆ. ಗ್ರಾಮಸ್ಥರು ಅಂಜನಾದೇವಿಯನ್ನು ಅಂಜನಮ್ಮ ಎಂದು ಕರೆಯುತ್ತಾರೆ. ಮಾತಾ ಅಂಜನಮ್ಮನವರ ದೇವಸ್ಥಾನವು ಸಾವಿರಾರು ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ದೇವಸ್ಥಾನವನ್ನು ಗ್ರಾಮದ ಹೊರವಲಯದಲ್ಲಿರುವ ಕೆರೆಯ ಆವರಣದಲ್ಲಿ ನಿರ್ಮಿಸಲಾಗಿತ್ತು. ಕಾಲಕ್ರಮೇಣ ಗ್ರಾಮವು ಬೆಳೆದಂತೆ ದೇವಸ್ಥಾನವು ಗ್ರಾಮದ ಹೃದಯಭಾಗಕ್ಕೆ ಬಂದಿದೆ. ಪ್ರತಿವರ್ಷ ಶ್ರಾವಣ ಮಾಸದ ಕಡೆ ಶನಿವಾರ ದಿನದಂದು ಅಂಜನಮ್ಮ ದೇವಿಯ ಉತ್ಸವ ಮೂರ್ತಿಯನ್ನು ಶಿವಪುರ ಗ್ರಾಮದ ಹಿರಿಯರು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು 20 ಕಿಮೀ ದೂರವಿರುವ ಅಂಜನಾದ್ರಿ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಾರೆ. ಅಲ್ಲಿ ಅಮ್ಮನವರ ಉತ್ಸವ ಮೂರ್ತಿಯನ್ನು ಪೂಜಿಸಿ ರಾತ್ರಿ ಅಂಜನಾದ್ರಿ ಸ್ವಾಮಿಯ ದೇವಸ್ಥಾನದಲ್ಲಿ ವಾಸ್ತವ್ಯ ಮಾಡುತ್ತಾರೆ. ಬೆಳಗ್ಗೆ ಎದ್ದು ಅಮ್ಮನವರ ಉತ್ಸವ ಮೂರ್ತಿಯನ್ನು ಪಂಪಾ ಸರೋವರಕ್ಕೆ ಪಲ್ಲಕ್ಕಿಯಲ್ಲಿ ತೆಗೆದುಕೊಂಡು ಹೋಗಿ ಪಂಪಾ ಸರೋವರದಲ್ಲಿ ಅಂಜನಮ್ಮನ ಉತ್ಸವ ಮೂರ್ತಿಯನ್ನು ಪವಿತ್ರ ಸ್ನಾನ ಮಾಡಿಸುತ್ತಾರೆ. ಮರಳಿ ಶಿವಪುರ ಗ್ರಾಮಕ್ಕೆ ಬರುವ ವಾಡಿಕೆ ಇದೆ. ಈ ಸಂಪ್ರದಾಯವು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ ಎನ್ನುತ್ತಾರೆ ಗ್ರಾಮಸ್ಥ, ಪತ್ರಕರ್ತ ಭರಮಣ್ಣ ಹೇಳಿದರು.

ಆಂಜನೇಯ ಜನ್ಮಸ್ಥಳ ಗೊಂದಲ ಎಬ್ಬಿಸುವುದು ಸರಿಯಲ್ಲ: ಮೋದಿ

ಹಂಪಿಯ ಸ್ಮಾರಕಕ್ಕೆ 500 ವರ್ಷಗಳ ಇತಿಹಾಸವಿದೆ. ಹಿರೇಬೆಣಕಲ್‌ ಸ್ಮಾರಕಕ್ಕೆ 3000 ವರ್ಷಗಳ ಇತಿಹಾಸವಿದೆ. ಅದೇ ರೀತಿ ಶಿವಪುರದಲ್ಲಿರುವ ಅಂಜನಾದೇವಿ ದೇವಸ್ಥಾನಕ್ಕೆ 5000 ವರ್ಷಗಳ ಇತಿಹಾಸವಿರುವುದಕ್ಕೆ ಸ್ಕಂದ ಪುರಾಣದಲ್ಲಿ ಉಲ್ಲೇಖವಿದೆ.

ಪ್ರೊ. ಶರಣಪ್ಪ ಕೋಲ್ಕಾರ, ಇತಿಹಾಸ ತಜ್ಞ

.ಆಂಜನೇಯನನ್ನು ಹೆತ್ತ ಮಾತೆ ಅಂಜನಾದೇವಿ ಶಿವಪುರದವರು ಎಂದು ತಿಳಿಯಲು ತುಂಬಾ ಹೆಮ್ಮೆಯಾಗುತ್ತದೆ. ಆಂಜನೇಯನ ಸ್ವಾಮಿಭಕ್ತಿ, ಸ್ವಾಮಿನಿಷ್ಠೆ, ಶ್ರದ್ಧೆ ಹಾಗೂ ತಪಸ್ಸು ಇಂದಿನ ಯುವಕರಿಗೆ ಪ್ರೇರಣೆಯಾಗಿದೆ. ಅಂಜನಾ ಮಾತೆಯ ಜನ್ಮಸ್ಥಳವಾದ ಶಿವಪುರ ಗ್ರಾಮವನ್ನು ಅಭಿವೃದ್ಧಿಪಡಿಸಲಾಗುವುದು.

ಕರಡಿ ಸಂಗಣ್ಣ, ಸಂಸದ

ಅಂಜನಮ್ಮ ದೇವಸ್ಥಾನವು ತುಂಬಾ ಪುರಾತನವಾದದ್ದು. ಈಗ ಗ್ರಾಮಸ್ಥರು ಹಾಗೂ ಸಾರ್ವಜನಿಕರ ಮತ್ತು ಜನಪ್ರತಿನಿಧಿಗಳ ಸಹಕಾರದೊಂದಿಗೆ .1 ಕೋಟಿ ವೆಚ್ಚದಲ್ಲಿ ಅಂಜನಮ್ಮನ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆದಿದೆ. ದೇವಸ್ಥಾನವನ್ನು ಸಂಪೂರ್ಣವಾಗಿ ಕಲ್ಲಿನಿಂದಲೇ ನಿರ್ಮಿಸಲಾಗುತ್ತಿದೆ.

ಶೇಷಗೌಡರು, ಅಂಜನಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ

Follow Us:
Download App:
  • android
  • ios