ಸಿಎಂ ಯಡಿಯೂರಪ್ಪಗೆ ಪತ್ರ‌ ಬರೆದ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್| ಬೆಡ್ ವ್ಯವಸ್ಥೆ ಮಾಡಲು ಆಗದ ಸರ್ಕಾರಕ್ಕೆ ಪತ್ರದ ಮುಖೇನ ತಿರುಗೇಟು ನೀಡಿದ ಶಾಸಕಿ| ಬೆಳಗಾವಿಯಲ್ಲಿ ನಿತ್ಯ ಸಾವಿರದ ವರೆಗೆ ಕೊರೋನಾ ಪ್ರಕರಣಗಳು ಪತ್ತೆ| 

ಬೆಳಗಾವಿ(ಮೇ.07): ಜಿಲ್ಲೆಯಲ್ಲಿ ದಿನೇ ದಿನೆ ಕೊರೋನಾ ಕೇಸ್‌ಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ನಗರದ ಸುವರ್ಣ ಸೌಧದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯುವಂತೆ ಜಿಲ್ಲೆಯ ಖಾನಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಅಂಜಲಿ‌ ನಿಂಬಾಳ್ಕರ್ ಪತ್ರ ಬರೆದಿದ್ದಾರೆ.

ಬೆಳಗಾವಿಯಲ್ಲಿ ನಿತ್ಯ ಸಾವಿರದ ವರೆಗೆ ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಅಸ್ಪತ್ರೆಗಳಲ್ಲಿ ಬೆಡ್‌ ಸಿಗದೇ ಸಾಕಷ್ಟು ಜನರು ಸಾವನ್ನಪ್ಪುತ್ತಿದ್ದಾರೆ. ಸುವರ್ಣ ಸೌಧದಲ್ಲಿ ಕಳೆದೆರಡು ವರ್ಷಗಳಿಂದ ಅಧಿವೇಶನ ನಡೆಸದೇ ವ್ಯರ್ಥವಾಗಿ ಕೋಟ್ಯಾಂತರ ರು. ಹಣವನ್ನ ನಿರ್ವಹಣೆಗೆ ಖರ್ಚು ಮಾಡಲಾಗುತ್ತಿದೆ. ಇಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ತೆರೆಯಬೇಕು ಎಂದು ಅಂಜಲಿ‌ ನಿಂಬಾಳ್ಕರ್ ಆಗ್ರಹಿಸಿದ್ದಾರೆ.

"

Scroll to load tweet…

ಕೋವ್ಯಾಕ್ಸಿನ್‌ ಟ್ರಯಲ್‌ ನಡೆಸಿದ್ದ ಬೆಳಗಾವಿ ಆಸ್ಪತ್ರೇಲೂ ಆಕ್ಸಿಜನ್‌ ಇಲ್ಲ!

ಬೆಳಗಾವಿ ಸುವರ್ಣ ಸೌಧ ಇಂತಹ ಸಂದರ್ಭದಲ್ಲಿ ಸದ್ಬಳಕೆ ಮಾಡಿಕೊಳ್ಳಲು ಸೂಕ್ತವಾಗಿದೆ. ಕೂಡಲೇ ಸುವರ್ಣ ಸೌಧದಲ್ಲಿ ವೈದ್ಯಕೀಯ ಸಲಕರಣೆಗಳನ್ನ ಅಳವಡಿಸಿ, ವೈದ್ಯಕೀಯ ಸಿಬ್ಬಂದಿ ನಿಯೋಜಿಸಿ ಕೋವಿಡ್ ಕೇರ್ ಸೆಂಟರ್ ಆಗಿ ಮಾರ್ಪಡಿಸಬೇಕು. ಇದರಿಂದ ಏಕಕಾಲದಲ್ಲಿ ಸಾವಿರಾರು ರೋಗಿಗಳು ಚಿಕಿತ್ಸೆ ಪಡೆಯಬಹುದಾಗಿದೆ. ಇದರಿಂದ ಬೆಳಗಾವಿ ಸೇರಿ ಉತ್ತರ ಕರ್ನಾಟಕದ ಜಿಲ್ಲೆಯ ಜನರಿಗೆ ಅನುಕೂಲ ಆಗುತ್ತದೆ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಕೊವಿಡ್ ನಿರ್ವಹಣೆಯ ಕಾರ್ಯವೈಖರಿ ಬಗ್ಗೆ ವ್ಯಂಗ್ಯ ಮಾಡುವುದರ ಜೊತೆಗೆ ಅಧಿವೇಶನ ಮಾಡದೇ ನಿರ್ಲಕ್ಷ್ಯ ತೋರುತ್ತಿರುವ ರಾಜ್ಯ ಸರ್ಕಾರಕ್ಕೆ ತಿರುಗೇಟು ನೀಡಿ ಡಾ.ಅಂಜಲಿ ನಿಂಬಾಳ್ಕರ್ ಸಿಎಂಗೆ ಪತ್ರ ಬರೆದಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona