ಹುಬ್ಬಳ್ಳಿ(ಫೆ.16): ವಾಣಿಜ್ಯ ನಗರಿ ಹುಬ್ಬಳ್ಳಿ ನಗರದ ಮಾಂಸಾಹಾರ ಪ್ರಿಯರಿಗೆ ಪಶು ಸಂಗೋಪನಾ ಇಲಾಖೆ ಸಂತಸದ ಸುದ್ದಿಯೊಂದನ್ನ ನೀಡಿದೆ. ಹೌದು, ನಗರದ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಚಾರಿ ಮಾರಾಟ ಮಳಿಗೆಯೊಂದನ್ನ ಪರಿಚಯಿಸಿದೆ. 

ಈ ಮೊಬೈಲ್ ಸಂಚಾರಿ ಮಾರಾಟ ಮಳಿಗೆಯಲ್ಲಿ ರುಚಿಕರವಾದ ಮಾಂಸಾಹಾರ ಖಾದ್ಯಗಳನ್ನ ಮಾಡಿಕೊಡಲಾಗುತ್ತದೆ. ಮೊಬೈಲ್ ಸಂಚಾರಿ ಮಾರಾಟ ಮಳಿಗೆಯಿಂದ ಮಾಂಸಾಹಾರ ಪ್ರಿಯರಿಗೆ ಎಲ್ಲಿಲ್ಲದ ಖುಷಿಯಾಗಿದೆ. ಸಂಚಾರಿ ಮಾರಾಟ ಮಳಿಗೆ ನಗರದಾದ್ಯಂತ ಸುತ್ತಾಡಲಿದೆ. ಇದರಿಂದ ನೀವು ಇದ್ದಲಿಗೆ ಈ ವಾಹನ ಬರಲಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಸಂಚಾರಿ ಮಾರಾಟ ಮಳಿಗೆಯಲ್ಲಿ ಆರೋಗ್ಯಕರ ಹಾಗೂ ಶುಚಿಯಾದ ಮಾಂಸದ ಖಾದ್ಯಗಳನ್ನ ಪೂರೈಸಲಾಗುವುದು ಎಂದು ಪಶು ಸಂಗೋಪನಾ ಇಲಾಖೆ ಹೇಳಿಕೊಂಡಿದೆ. ಈ ನೂತನ ಯೋಜನೆಯಿಂದ ಜಿಲ್ಲೆಯಲ್ಲಿ ಉದ್ಯೋಗ ಹೆಚ್ಚಿಸುವ ನಿರೀಕ್ಷೆಯಲ್ಲಿದೆ ಪಶು ಸಂಗೋಪನಾ ಇಲಾಖೆ.