ರಾಯಚೂರು(ನ.28): ಮಂತ್ರಾಲಯದ ಮಠದ ಆಸ್ತಿ ಮಾರಾಟಕ್ಕೆ ಆಂಧ್ರಪ್ರದೇಶ ಸರ್ಕಾರ ಪ್ರಕಟಣೆಯೊಂದನ್ನ ಹೊರಡಿಸಿದೆ. ಶ್ರೀ ರಾಘವೇಂದ್ರ ಸ್ವಾಮಿ ಮಠದ ಇನಾಮು ಭೂಮಿ ಮಾರಾಟ ಮಾರಾಟಕ್ಕಾಗಿ ಪತ್ರಿಕೆಯೊಂದರಲ್ಲಿ ಆಂಧ್ರ ಸರ್ಕಾರ ಪ್ರಕಟಣೆ ಹೊರಡಿಸಿದೆ. 

ಆಂಧ್ರಪ್ರದೇಶದ ಸರ್ಕಾರದ ಕ್ರಮಕ್ಕೆ ಹಿಂದೂಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಶ್ರೀಮಠದ ಒಟ್ಟು 208 ಎಕರೆ ಭೂಮಿ ಮಾರಾಟ ಮಾಡಲು ಆಂಧ್ರ ಸರ್ಕಾರ ನಿರ್ಧರಿಸಿದೆ. 

ಮಂತ್ರಾಲಯ: ಪುಷ್ಕರ ಮಹೋತ್ಸವಕ್ಕೆ ಚಾಲನೆ ನೀಡಿದ ಸುಬುಧೇಂದ್ರ ತೀರ್ಥರು

ವಡ್ಡೆಪಲ್ಲೆ, ಮಲದಕಲ್, ಧರೂರು ಮಂಡಲ ವ್ಯಾಪ್ತಿಯಲ್ಲಿ ಮಂತ್ರಾಲಯ ಮಠಕ್ಕೆ ಸಂಬಂಧಿಸಿದ ಭೂಮಿ ಇದೆ. ಈ ಭೂಮಿ ಒತ್ತುವರಿಯಾಗಿದೆ ಎಂಬ ಕಾರಣಕ್ಕೆ ಮಾರಾಟ ಮಾಡಲು ಮಠವೇ ಆಂಧ್ರ ಪ್ರದೇಶದ ಸರ್ಕಾರಕ್ಕೆ ಪತ್ರ ಬರೆದಿತ್ತು. ಭೂಮಿ ಮಾರಾಟದಿಂದ ಬಂದ ಹಣವನ್ನು ಕಾರ್ಪೋರೇಟ್ ಫಂಡ್ ಉಳಿಸಿಕೊಳ್ಳಲು ಶ್ರೀಸಮಠ ತೀರ್ಮಾನಿಸಿತ್ತು.