ಕೊಪ್ಪಳದಲ್ಲಿ ಖುಲ್ಲಂ ಖುಲ್ಲಾ ಅಂದರ್ ಬಾಹರ್: ಕಣ್ಮುಚ್ಚಿ ಕುಳಿತ ಪೊಲೀಸ್
ಕನಕಗಿರಿಯ ಬಿರ್ಲಾ ರೆಸಾರ್ಟ್‌ನಲ್ಲಿ ನಡೆಯುತ್ತಿರುವ ಅಂದರ್ ಬಾಹರ್| ಮಹಿಳೆಯರೂ ಆಟದಲ್ಲಿ ಭಾಗಿಯಾಗುತ್ತಾರೆ| ಅಂದರ್ ಬಾಹರ್ ಆಡಲು 3000 ಫೀ ನಿಗದಿ| 3000 ಫೀ ಕೊಟ್ರೆ ಮಾತ್ರ ಒಳಗಡೆ ಅವಕಾಶ| ಅಂದರ್ ಬಾಹರ್‌ನಿಂದ ದಿನಕ್ಕೆ ಬರೋಬ್ಬರಿ ಎರಡರಿಂದ ಮೂರು ಕೋಟಿ ರು. ಕಲೆಕ್ಷನ್|
ಕೊಪ್ಪಳ(ಡಿ.08): ಜಿಲ್ಲೆಯ ಕನಕಗಿರಿಯಲ್ಲಿ ಒಪನ್ ಆಗಿ ಅಂದರ್ ಬಾಹರ್ ನಡೆಯುತ್ತಿದೆ. ಪಟ್ಟಣದ ಬಿರ್ಲಾ ರೆಸಾರ್ಟ್‌ನಲ್ಲಿ ಖುಲ್ಲಂ ಖುಲ್ಲಾ ಅಂದರ್ ಬಾಹರ್ ನಡೆಯುತ್ತಿದ್ದರೂ ಯಾವ ಅಧಿಕಾರಿಗಳು ಇವರ ಕ್ರಮ ಕೈಗೊಂಡಿಲ್ಲ.
"
ಹೌದು, ಪಟ್ಟಣದ ಬಿರ್ಲಾ ರೆಸಾರ್ಟ್‌ನಲ್ಲಿ ನಡೆಯುತ್ತಿರುವ ಅಂದರ್ ಬಾಹರ್‌ನಲ್ಲಿ ಮಹಿಳೆಯರೂ ಆಟದಲ್ಲಿ ಭಾಗಿಯಾಗುತ್ತಾರೆ. ಇಲ್ಲಿ ಅಂದರ್ ಬಾಹರ್ ಆಡಲು 3000 ಫೀ ನಿಗದಿ ಮಾಡಲಾಗಿದೆ. 3000 ಫೀ ಕೊಟ್ರೆ ಮಾತ್ರ ಒಳಗಡೆ ಅವಕಾಶ ನೀಡಲಾಗುತ್ತಿದೆ. ಅಂದರ್ ಬಾಹರ್‌ನಿಂದ ದಿನಕ್ಕೆ ಬರೋಬ್ಬರಿ ಎರಡರಿಂದ ಮೂರು ಕೋಟಿ ರು. ಕಲೆಕ್ಷನ್ ಆಗುತ್ತಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಶಾಸಕರ ಬೆಂಬಲಿಗರಿಂದಲೇ ಅಂದರ್ ಬಾಹರ್ ಆಟ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ. ರೆಸಾರ್ಟ್ ಹೆಸರಲ್ಲಿ ಎಕ್ಕ ರಾಜಾ ರಾಣಿ ಆಟ ಭರ್ಜರಿಯಾಗಿ ನಡೆಯುತ್ತಿದೆ. ಪ್ರತಿದಿನ ಅಂದರ್ ಬಾಹರ್ ಆಟ ನಡೆಯುತ್ತಿದ್ದರೂ ಪೊಲೀಸ್ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತ್ತಿದ್ದಾರೆ. ಅಂದರ್ ಬಾಹರ್ ಆಟ ಆಡಲು ದೂರದ ಬೆಂಗಳೂರು, ಹುಬ್ಬಳ್ಳಿ,ಗದಗ ನಿಂದ ಜುಜುಕೋರರು ಬರುತ್ತಿದ್ದಾರೆ.