ಹೊಸಪೇಟೆ(ಫೆ.27): ಮಡಿವಾಳ ಸಮುದಾಯವನ್ನು ಎಸ್ಸಿ ಮೀಸಲಾತಿಯಲ್ಲಿ ಸೇರಿಸಲು ಅಧಿವೇಶನದಲ್ಲಿ ಗಮನ ಸೆಳೆಯುವೆ ಎಂದು ಸಚಿವ ಆನಂದ್‌ ಸಿಂಗ್‌ ಹೇಳಿದ್ದಾರೆ. 

ಅಖಿಲ ಭಾರತ ಮಡಿವಾಳ ಮಹಸಭಾದಿಂದ ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಮಡಿವಾಳ ಮಾಚಿದೇವರ ಜಯಂತಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಡಿವಾಳ ಸಮಾಜದಿಂದ ಬಟ್ಟೆ ತೊಳೆಯಲು ಎರಡು ಎಕರೆ ಜಮೀನು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇನೆ. ಸಮಾಜದಲ್ಲಿ ನಾನಾ ರೀತಿಯಲ್ಲಿ ಹಿಂದುಳಿದ ಮಡಿವಾಳ ಸಮಾಜವನ್ನು ಪ.ಜಾತಿಗೆ ಸೇರಿಸಲು ಅಧಿವೇವೇಶನದಲ್ಲಿ ಧ್ವನಿಯಾಗುತ್ತೇನೆ ಎಂದು ಆಶ್ವಾಸನೆ ನೀಡಿದರು.

ಬಿಜೆಪಿ ನಾಯಕರು ಬಡವರ ರಕ್ತಹೀರುವ ಜಿಗಣಿ-ಜಿರಲೆಗಳು: ಉಗ್ರಪ್ಪ

ಅಖಿಲ ಭಾರತ ಮಡಿವಾಳ ಮಹಸಭಾ ರಾಷ್ಟ್ರೀಯ ಅಧ್ಯಕ್ಷ ಎಂ. ಜಯರಪ್ಪ ಮಾತನಾಡಿ, ಆರ್ಥಿಕ, ಶಿಕ್ಷಣಿಕ, ರಾಜಕೀಯವಾಗಿ ಬೆಳೆಯಲು ಪ.ಜಾತಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು. ಚಿತ್ರದುರ್ಗದ ಮಾಚಿದೇವ ಮಾಹಸಂಸ್ಥಾನ ಮಠದ ಡಾ. ಬಸವಮಾಚಿದೇವ ಸ್ವಾಮಿ ಸಾನಿಧ್ಯ ವಹಿಸಿದರು.

ಮಾಚಿದೇವಾ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಅರುಣ್‌ಕುಮಾರ್‌, ಹೊಸಪೇಟೆ ತಾಲೂಕು ಅಧ್ಯಕ್ಷ ಎ. ರಾಜಕುಮಾರ್‌, ಮುಂಖಡರಾದ ಭರತ್‌ಕುಮಾರ್‌, ಎ. ಪಂಪಣ್ಣ, ಶ್ರೀನಿವಾಸ್‌, ಚನ್ನಪ್ಪ, ಗಣೇಶ್‌, ರೇವಣಸಿದ್ದಪ್ಪ ಮತ್ತಿತರರಿದ್ದರು.