ಮೈಸೂರು (ಸೆ.20): ತಾಯಿಯ ಆಸೆ ಪೂರೈಸಲು ತನ್ನ ಬಜಾಜ್‌ ಚೇತಕ್‌ ಸ್ಕೂಟರಿನಲ್ಲಿ ದೇಶ ಪರ್ಯಟನೆ ನಡೆಸಿದ ಮೈಸೂರಿನ ಬೋಗಾದಿ ನಿವಾಸಿ ಕೃಷ್ಣಕುಮಾರ್‌ ಅವರಿಗೆ ಮಹೀಂದ್ರ ಕಂಪನಿಯು ಕಾರನ್ನು ಉಡುಗೊರೆಯಾಗಿ ನೀಡಿದೆ.

ತಾವಾಯಿತು, ತಮ್ಮ ಜೀವನವಾಯಿತು ಎಂದು ವಯಸ್ಸಿಗೆ ಬಂದ ಮೇಲೆ ತಂದೆ, ತಾಯಿಯಿಂದ ದೂರವಾಗುವ ಮಕ್ಕಳಿರುವ ಈ ಕಾಲಘಟ್ಟದಲ್ಲಿ ತಾಯಿಯ ಇಂಗಿತದಂತೆ ಸ್ಕೂಟರ್‌ನಲ್ಲಿ ದೇಶದ ನಾನಾ ಭಾಗಗಳಿಗೆ ಕರೆದೊಯ್ದು ದೇವರ ದರ್ಶನ ಮಾಡಿಸಿ ಆಧುನಿಕ ಶ್ರವಣಕುಮಾರ ಎನಿಸಿಕೊಂಡಿರುವ ಕೃಷ್ಣಕುಮಾರ್‌ ನಾಲ್ಕು ದಿನದ ಹಿಂದೆಯಷ್ಟೇ ಮೈಸೂರಿಗೆ ಆಗಮಿಸಿದ್ದರು. 

105 ಕಿ.ಮೀ ಸೈಕಲ್‌ನಲ್ಲಿ ತೆರಳಿ ಪರೀಕ್ಷೆ ಬರೆದ ವಿದ್ಯಾರ್ಥಿಗೆ ಆನಂದ್ ಮಹೀಂದ್ರ ಭರ್ಜರಿ ಗಿಫ್ಟ್! .

ಈ ವಿಷಯ ತಿಳಿದ ಮಹೇಂದ್ರ ಕಂಪನಿಯು ತನ್ನ ಕಡೆಯಿಂದ ಕೆಯುವಿ 100 ಕಾರನ್ನು ಉಡುಗೊರೆಯಾಗಿ ನೀಡಿದೆ. ಕಂಪನಿಯ ಮಾಲೀಕ ಆನಂದ್‌ ಮಹೇಂದ್ರ ಈ ಮುಂಚೆಯೇ ಹೇಳಿದಂತೆ ಯಾತ್ರೆ ಮುಗಿಸಿ ಹಿಂದಿರುಗಿದ ಕೃಷ್ಣಕುಮಾರ್‌ ಅವರಿಗೆ ಕಾರು ನೀಡಿದ್ದಾರೆ.