Asianet Suvarna News Asianet Suvarna News

Mangaluru: ಚಲಿಸುತ್ತಿದ್ದ ಆಟೋದಲ್ಲಿ ನಿಗೂಢ ಸ್ಫೋಟ, ಇಬ್ಬರಿಗೆ ಗಾಯ

ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ನಿಗೂಢ ರೀತಿಯಲ್ಲಿ ಸ್ಪೋಟ ಸಂಭವಿಸಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ಮಂಗಳೂರು ನಗರದ ನಾಗುರಿ ಎಂಬಲ್ಲಿ ನಡೆದಿದೆ.

An explosion in auto rickshaw  in Mangaluru gow
Author
First Published Nov 19, 2022, 8:08 PM IST

ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಮಂಗಳೂರು (ನ.19): ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ನಿಗೂಢ ರೀತಿಯಲ್ಲಿ ಸ್ಪೋಟ ಸಂಭವಿಸಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ಮಂಗಳೂರು ನಗರದ ನಾಗುರಿ ಎಂಬಲ್ಲಿ ನಡೆದಿದೆ. ಆಟೋದ ಒಳಗೆ ಕುಕ್ಕರ್ ಪತ್ತೆಯಾಗಿದ್ದು, ಅಟೋದಲ್ಲಿದ್ದ ಪ್ರಯಾಣಿಕ ಹಾಗೂ ಡ್ರೈವರ್ ಗೆ ಗಾಯಗಳಾಗಿವೆ. ಸ್ಥಳಕ್ಕೆ ಆಗಮಿಸಿದ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ನಿಗೂಢ ಸ್ಪೋಟವಾದ ಆಟೋದಲ್ಲಿ ಪರಿಶೀಲನೆ ನಡೆಸಿದೆ‌. ಜೊತೆಗೆ ಬಾಂಬ್ ನಿಷ್ಕ್ರಿಯ ದಳವೂ ಆಗಮಿಸಿ ತನಿಖೆ ಆರಂಭಿಸಿದೆ. ಆಟೋದಲ್ಲಿ ಪತ್ತೆಯಾಗಿರೋ ಕುಕ್ಕರ್ ಹಾಗೂ ಇತರೆ ವಸ್ತುಗಳ ಪರಿಶೀಲನೆ ನಡೆಸಿ ಸಮಗ್ರ ಮಾಹಿತಿ ಕಲೆ ಹಾಕಲಾಗಿದೆ. 

ಮೋದಿ ಉದ್ಘಾಟಿಸಿದ್ದ ಹಳಿ ಸ್ಫೋಟಿಸಿ ದುಷ್ಕೃತ್ಯಕ್ಕೆ ವಿಫಲ ಯತ್ನ

ಸ್ಪೋಟದ ಬಗ್ಗೆ ಗೊತ್ತಿಲ್ಲ, ಬೆಂಕಿ ಹತ್ತಿಕೊಂಡ ಬಗ್ಗೆ ಮಾಹಿತಿ; ಕಮಿಷನರ್ ಶಶಿಕುಮಾರ್
ಬ್ಲಾಸ್ಟ್ ಪ್ರಕರಣ ಸಂಬಂಧ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಹೇಳಿಕೆ ನೀಡಿದ್ದಾರೆ. ಕಂಕನಾಡಿ ಪೊಲೀಸ್ ಠಾಣೆಯ ಬಳಿ ಈ ಘಟನೆ ನಡೆದಿದೆ. ಪ್ರಾರಂಭದಲ್ಲಿ ಅಟೋದಲ್ಲಿ ಬೆಂಕಿ‌ ಕಾಣಿಸಿಕೊಂಡಿದೆ. ನಾಗುರಿ ಎಂಬಲ್ಲಿಂದ ಪಂಪ್ ವೆಲ್ ಕಡೆ ಅಟೋ ಸಾಗುತಿತ್ತು. ನಾಗುರಿಯಿಂದ ಹತ್ತಿದ ಪ್ರಯಾಣಿಕನ ಕೈಯಲ್ಲಿದ್ದ ಪ್ಲ್ಯಾಸ್ಟಿಕ್ ಬ್ಯಾಗ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬ್ಯಾಗ್ ಹಿಡಿದುಕೊಂಡ ವ್ಯಕ್ತಿಗೂ ಬೆಂಕಿ ತಗುಲಿದೆ. ಬೆಂಕಿ ತಗುಲಿದ ಸಂದರ್ಭ ಅಟೋ ಒಳಭಾಗ ಸುಟ್ಟು ಹೋಗಿದೆ. ಪ್ರಥಮ ಚಿಕಿತ್ಸೆ ಮಾಡಲಾಗುತ್ತಿದೆ.‌ ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ. ಬೆಂಕಿ‌ ಕಾಣಿಸಿಕೊಂಡಿದೆ ಎಂದು ಅಟೋ ಚಾಲಕ ಹೇಳುತ್ತಿದ್ದಾನೆ.‌ ಸಮಗ್ರವಾದ ವಿಚಾರಣೆ ನಡೆಸಲಾಗುತ್ತದೆ. ಬ್ಲಾಸ್ಟ್ ಆದ ಬಗ್ಗೆ ಪ್ರತ್ಯಕ್ಷ ಸಾಕ್ಷಿಗಳು ಏನು ಹೇಳಿಲ್ಲ ಎಂದಿದ್ದಾರೆ.

Threat Letter to Rahul Gandhi: ಬಾಂಬ್‌ ಸ್ಪೋಟಿಸಿ ಹತ್ಯೆ, ರಾಹುಲ್‌ ಗಾಂಧಿಗೆ ಬೆದರಿಕೆ ಪತ್ರ!

ಕಲ್ಲು ಗಣಿಗಾರಿಕೆ ವಿರೋಧಿಸಿ 23ರಂದು ಪ್ರತಿಭಟನೆ
ರಾಣಿಬೆನ್ನೂರು: ತಾಲೂಕಿನ ಕುಪ್ಪೇಲೂರ ಹೋಬಳಿ ವ್ಯಾಪ್ತಿಯ ಸಣ್ಣ ಸಂಗಾಪುರ ಗ್ರಾಮದ ರಿ.ಸ.ನಂ. 17ರಲ್ಲಿ ನಡೆಸಲಾಗುತ್ತಿರುವ ಕಲ್ಲು ಗಣಿಗಾರಿಕೆಯಲ್ಲಿ ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ಅವೈಜ್ಞಾನಿಕ ಬೋರ್‌ ಬ್ಲಾಸ್ಟ್‌ ಪದ್ಧತಿಯನ್ನು ಅನುಸರಿಸುತ್ತಿರುವುದನ್ನು ಖಂಡಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ರೈತರು ಮತ್ತು ಗ್ರಾಮಸ್ಥರಿಂದ ನ. 23ರಂದು ಬೆಳಗ್ಗೆ 11ರಿಂದ ನಿರಂತರ ಶಾಂತಿಯುತ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಪ್ರಕಾಶ ಬಾರ್ಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow Us:
Download App:
  • android
  • ios