ಪಾಳುಬಿದ್ದ ನೆಲದಲ್ಲೀಗ ತೂಗುತ್ತಿವೆ ಬಾಳೆ ಗೊನೆ : ಮಡಿಕೇರಿ ಆಕಾಶವಾಣಿ ಕೇಂದ್ರ ಕಾರ್ಯನಿರ್ವಾಹಕರ ಪರಿಸರ ಪ್ರೀತಿ!

ಖಾಲಿ ಸ್ಥಳಲ್ಲಿ ಬೆಳೆದು ನಿಂತಿದ್ದ, ಅನಗತ್ಯ ಗಿಡಗಳನ್ನು ಸ್ವತಃ ಕಡಿದು, ಭೂಮಿ ಹದ ಮಾಡಿ ಸುಂದರ ತೋಟ ಮಾಡಿದ್ದಾರೆ. ಬೆಳಿಗ್ಗೆ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗುವ ಬದಲು ಕರ್ತವ್ಯದ ಸಮಯಕ್ಕಿಂತ ಒಂದೆರಡು ಗಂಟೆಗಳ ಕಾಲ ಮೊದಲೇ ಹಾಜರಾಗಿ ಕೈತೋಟದ ಕೆಲಸ ಮಾಡುತ್ತಾರೆ ಪರಿಸರ ಪ್ರೇಮಿ ಮಡಿಕೇರಿ ಆಕಾಶವಾಣಿ ಕೇಂದ್ರದ ಕಾರ್ಯನಿರ್ವಾಹಕ ಡಾ.ವಿಜಯ ಅಂಗಡಿ. ಇವರ ಪರಿಸರ ಕಾಳಜಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ

An environmentalist who planted a banana plantation on waste land  Madikeri Radio Station rav

ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಏ.11) : ಇಂದಿನ ಕಾಲದಲ್ಲಿ ಸರ್ಕಾರಿ ಉದ್ಯೋಗ ದೊರೆತರೆ ಸಾಕು ಆ ಹುದ್ದೆಯನ್ನು ನಿಭಾಯಿಸಿದರೆ ಮುಗಿಯಿತು. ಇನ್ನೊಂದಷ್ಟು ಜನರು ಆಗಲ್ಲ ಬಿಡಿ. ಅವರು ಇರುವ ಉದ್ಯೋಗವನ್ನು ಸರಿಯಾಗಿ ನಿಭಾಯಿಸದವರು ಇದ್ದಾರೆ. ಆದರೆ ಕೇಂದ್ರ ಸರ್ಕಾರದ ಆಕಾಶವಾಣಿಯ ಕಾರ್ಯಕ್ರಮ ನಿರೂಪಕರಾಗಿ ಉದ್ಯೋಗ ಮಾಡುತ್ತಿದ್ದಾರೆ. ಇವರು ತಮ್ಮ ಹುದ್ದೆಯನ್ನು ಎಷ್ಟು ಶ್ರದ್ಧೆಯಿಂದ ಮಾಡ್ತೋರೋ ಅದರ ಎರಡು ಪಟ್ಟು ಶ್ರದ್ಧೆ, ಖುಷಿಯಿಂದ ಆಕಾಶವಾಣಿ ಆವರಣದಲ್ಲಿ ಹತ್ತಾರು ಬಗೆಯ ಔಷಧಿ ಗಿಡಗಳು, ಹಣ್ಣು ತರಕಾರಿಗಳ ಗಿಡಗಳನ್ನು ಬೆಳೆಯುತ್ತಿದ್ದಾರೆ. 

ಹೌದು ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಆಕಾಶವಾಣಿ(Madikeri akashavani) ಕೇಂದ್ರದ ಕಾರ್ಯಕ್ರಮ ನಿರ್ವಾಹಕರಾಗಿರುವ ಡಾ. ವಿಜಯ ಅಂಗಡಿ(Dr Vijaya angadi) ಇಂತಹ ವಿಶೇಷವಾದ ಪರಿಸರ ಕಾಳಜಿ ಹೊಂದಿರುವವರು. ಮಡಿಕೇರಿ ನಗರ ಬೆಟ್ಟ, ಗುಡ್ಡಗಳ ಮೇಲೆ, ತಪ್ಪಲುಗಳಲ್ಲಿ ಹರಡಿಕೊಂಡಿದೆ. ಹೀಗೆ ಹರಡಿಕೊಂಡಿರುವ ಮಡಿಕೇರಿ ನಗರ(Madikeri city)ದಲ್ಲಿ ಬೆಟ್ಟದ ಮೇಲೆ ಮಡಿಕೇರಿ ಆಕಾಶವಾಣಿ ಮೂರು ಎಕರೆಯಷ್ಟು ಪ್ರದೇಶದಲ್ಲಿ ಇದೆ. ಈಗಲೂ ಆಕಾಶವಾಣಿ ಕೇಂದ್ರದ ಆವರಣದಲ್ಲಿ ಎರಡು ಎಕರೆಯಷ್ಟು ಭೂಮಿ ಇದೆ. ಆ ಭೂಮಿ ನಾಲ್ಕು ವರ್ಷಗಳ ಹಿಂದಿನವರೆಗೆ ಪಾಳುಬಿದ್ದ ಭೂಮಿಯಾಗಿತ್ತು. ಆದರೆ 2018 ರಲ್ಲಿ ಮಡಿಕೇರಿ ಆಕಾಶವಾಣಿ ಕೇಂದ್ರಕ್ಕೆ ಕಾರ್ಯಕ್ರಮ ನಿರ್ವಾಹಕರಾಗಿ ಬಂದ ವಿಜಯ್ ಅಂಗಡಿ ಅವರು ಈಗ ಅದರ ಸ್ಥಿತಿಯನ್ನೇ ಬದಲಾಯಿಸಿದ್ದಾರೆ.

 

Mann Ki Baat: 2500 ಮರ ಪೋಷಿಸುತ್ತಿರುವ ಪರಿಸರ ಪ್ರೇಮಿ ಸುರೇಶ್

 ಖಾಲಿ ಸ್ಥಳಲ್ಲಿ ಬೆಳೆದು ನಿಂತಿದ್ದ, ಅನಗತ್ಯ ಗಿಡಗಳನ್ನು ಸ್ವತಃ ಕಡಿದು, ಭೂಮಿ ಹದ ಮಾಡಿ ಸುಂದರ ತೋಟ ಮಾಡಿದ್ದಾರೆ. ಬೆಳಿಗ್ಗೆ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗುವ ಬದಲು ಕರ್ತವ್ಯದ ಸಮಯಕ್ಕಿಂತ ಒಂದೆರಡು ಗಂಟೆಗಳ ಕಾಲ ಮೊದಲೇ ಹಾಜರಾಗಿ ಕೈತೋಟದ ಕೆಲಸ ಮಾಡುತ್ತಾರೆ. ಸಂಜೆ ಕರ್ತವ್ಯ ಮುಗಿದ ಬಳಿಕವೂ ಮನೆಗೆ ತೆರಳುವ ಬದಲು ಕೈತೋಟದಲ್ಲಿ ಕನಿಷ್ಠ ರಾತ್ರಿ ಒಂಭತ್ತರಿಂದ 10 ಗಂಟೆಯವರೆಗೂ ಕೆಲಸ ಮಾಡುತ್ತಾರೆ. ಇವರ ಈ ಪರಿಸರ ಪ್ರೀತಿಯ ಕೆಲಸಕ್ಕೆ ಅವರ ಸಹೋದ್ಯೋಗಿಗಳು ಮತ್ತು ಸಿಬ್ಬಂದಿ ಕೂಡ ತಮಗೆ ಸಾಧ್ಯವಾದಷ್ಟು ಕೈಜೋಡಿಸುತ್ತಾರೆ. 
ಇಂದು ಇವರ ಪರಿಶ್ರಮದಿಂದಾಗಿ ಇಂದು ಆಕಾಶವಾಣಿ ಕೇಂದ್ರದ ಸುತ್ತ ಇರುವ ಪರಿಸರದಲ್ಲಿ ಬಾಳೆ ಗೊನೆ ತೂಗುತ್ತಿದ್ದರೆ, ಮಾವು ಚಿಗುರಿ ನಿಂತಿವೆ. ಔಷಧಿ ಸಸ್ಯಗಳಾದ ಚಕ್ರಮುನಿ, ಹಸಿರು ಟೀ ಹುಲ್ಲು, ಕಸ್ತೂರಿ ಅರಿಶಿನ ಸೇರಿದಂತೆ ಇನ್ನೂ ಹತ್ತಾರು ಗಿಡಗಳು ನಳನಳಿಸುತ್ತಿವೆ. ಜೊತೆಗೆ ಅನಾನಸ್ ಗಿಡಗಳು ಈಗಾಗಲೇ ಹಣ್ಣು ಬಿಟ್ಟಿದ್ದರೆ, ಅಂಜೂರು ಹಣ್ಣು ಬಿಡುವ ಹಂತಕ್ಕೆ ಬೆಳೆದಿವೆ. ಇನ್ನು ತರಕಾರಿಗಳನ್ನು ಬೆಳೆದಿದ್ದು ಆಗಲ, ಬೀನ್ಸ್, ಮರಗೆಣಸು, ಸಿಹಿಗೆಣಸು ಸೇರಿದಂತೆ ಹತ್ತಾರು ರೀತಿಯ ತರಕಾರಿ ಗಿಡಗಳನ್ನು ಬೆಳೆದಿದ್ದಾರೆ. 

 

ಪರಿಸರ ಪ್ರೇಮಿ ’ಕೇರ್ ಮೋರ್ ’ ಸಂಸ್ಥೆ ಯಿಂದ ಶಾಲಾ ಮಕ್ಕಳಿಗಾಗಿ ಹೊಸ ಕ್ಯಾಂಪೇನ್

ಕೆಲವು ಗಿಡಗಳಿಗೆ ಹಣಕೊಟ್ಟು ಖರೀದಿ ಮಾಡಬೇಕಾಗಿರುವುದರಿಂದ ವರ್ಷದಲ್ಲಿ 30 ರಿಂದ 35 ಸಾವಿರ ರೂಪಾಯಿಯನ್ನು ಈ ಕೈತೋಟಕ್ಕಾಗಿ ವ್ಯಯಿಸುತ್ತಾರೆ. ಇವರ ಈ ಕೆಲಸಕ್ಕೆ ಸಿಬ್ಬಂದಿ ಮತ್ತು ಸಾರ್ವಜನಿಕರಿಂದ ತುಂಬ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ. ಅವರ ಕೆಲಸಗಳಿಂದ ನಾವು ಸಾಕಷ್ಟು ಪ್ರೇರಣೆಗೊಂಡಿದ್ದು, ಅವರು ಹೇಳುವ ವೈಜ್ಯಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ನಮ್ಮ ಮನೆಗಳಲ್ಲೂ ಉತ್ತಮ ಕೃಷಿ ಮಾಡುತ್ತಿದ್ದೇವೆ ಎನ್ನುತ್ತಾರೆ ಆಕಾಶವಾಗಿಯ ಸಹೋದ್ಯೋಗಿ ಸಿದ್ದೋಜಿ ರಾವ್. ಒಟ್ಟಿನಲ್ಲಿ ವಿಜಯ್ ಅಂಗಡಿಯವರ ವಿಶೇಷವಾದ ಕೃಷಿ ಪ್ರೀತಿ ಗಿಡಗಂಟಿಗಳ ಆಗವಾಗಿದ್ದ ಆಕಾಶವಾಣಿ ಕೇಂದ್ರದ ಸುತ್ತ ಇದ್ದ ಖಾಲಿಜಾಗ ಈಗ ಹಸಿರು ಕೈತೋಟದಿಂದ ನಳನಳಿಸುತ್ತಿದೆ.

Latest Videos
Follow Us:
Download App:
  • android
  • ios