ಈ ದಂಪತಿ ಧಾರವಾಡ ತಾಲೂಕಿನ ದೇವರಹುಬ್ಬಳ್ಳಿ ಗ್ರಾಮದವರು ಈಶ್ವರಪ್ಪ ಆರೇರ (82) ಹಾಗೂ ಪಾರವ್ವ ಆರೇರ (73) ಅಂತಾ ಇವರ ಹೆಸರು ನಿನ್ನೆ ರಾತ್ರಿ ಕುಟುಂಬಸ್ಥರೊಂದಿಗೆ ಊಟ ಮಾಡಿದ ಇವರಿಬ್ಬರೂ ಬೆಳಗಾಗುವಷ್ಟರಲ್ಲಿ ಒಬ್ಬರನ್ನೊಬ್ಬರು ಕೈಹಿಡಿದು ಇನ್ನ್ಯಾವತ್ತೂ ಬಾರದ ಲೋಕಕ್ಕೆ ಹೋಗಿಯೇ ಬಿಟ್ಟಿದ್ದಾರೆ.
ವರದಿ: ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ (ಫೆ.17): ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು ಎಂಬ ವರಕವಿ ಡಾ.ದ.ರಾ.ಬೇಂದ್ರೆ ಅವರ ಸಾಲುಗಳು ಎಷ್ಟು ಪ್ರಸ್ತುತ ಅಲ್ಲವೇ? ಸತಿ ಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ ಎಂಬ ಮಾತಿನಂತೆ ಹೇಗೋ ಒಂದಾದ ದಂಪತಿ ಕಷ್ಟದ ಸಮಯದಲ್ಲಿ ಜೀವನ ಸಾಗಿಸಿ ಇದೀಗ ಸಾವಲ್ಲೂ ಒಂದಾಗುವ ಮೂಲಕ ಸಾರ್ಥಕ ದಾಂಪತ್ಯ ಜೀವನಕ್ಕೆ ಪೂರ್ಣ ವಿರಾಮ ಇಟ್ಟಿದ್ದಾರೆ.
ಹೌದು! ಈ ದಂಪತಿ ಧಾರವಾಡ ತಾಲೂಕಿನ ದೇವರಹುಬ್ಬಳ್ಳಿ ಗ್ರಾಮದವರು ಈಶ್ವರಪ್ಪ ಆರೇರ (82) ಹಾಗೂ ಪಾರವ್ವ ಆರೇರ (73) ಅಂತಾ ಇವರ ಹೆಸರು ನಿನ್ನೆ ರಾತ್ರಿ ಕುಟುಂಬಸ್ಥರೊಂದಿಗೆ ಊಟ ಮಾಡಿದ ಇವರಿಬ್ಬರೂ ಬೆಳಗಾಗುವಷ್ಟರಲ್ಲಿ ಒಬ್ಬರನ್ನೊಬ್ಬರು ಕೈಹಿಡಿದು ಇನ್ನ್ಯಾವತ್ತೂ ಬಾರದ ಲೋಕಕ್ಕೆ ಹೋಗಿಯೇ ಬಿಟ್ಟಿದ್ದಾರೆ. ಆ ಮೂಲಕ ಸಾವಲ್ಲೂ ಈ ದಂಪತಿ ಒಂದಾಗಿ ಸಾರ್ಥಕ ಬದುಕು ನಡೆಸಿ ಪರಮಾತ್ಮನಲ್ಲಿ ಲೀನರಾಗಿದ್ದಾರೆ ಭಾನುವಾರ ರಾತ್ರಿ ಕುಟುಂಬಸ್ಥರೊಂದಿಗೆ ಊಟ ಮಾಡಿ ಮಲಗಿಕೊಂಡ ಈಶ್ವರಪ್ಪ ಬೆಳಿಗ್ಗೆ ಏಳಲೇ ಇಲ್ಲ.
ಆತ ಸತ್ತ ಸುದ್ದಿ ತಿಳಿಯುತ್ತಿದ್ದಂತೆ ಆತನ ಪತ್ನಿ ಪಾರವ್ವಳ ಕುಟುಂಬಸ್ಥರು ಪಾರವ್ವಳಿಗೆ ಶಾಸ್ತ್ರದ ಪ್ರಕಾರ ಸೀರೆ ತಂದು ಉಡಿಸಿದ್ದರು. ಅಷ್ಟರಲ್ಲಾಗಲೇ ಪಾರವ್ವಳ ಪ್ರಾಣಪಕ್ಷಿ ಕೂಡ ಪತಿ ಈಶ್ವರಪ್ಪನ ಜೊತೆಗೆ ಹಾರಿ ಹೋಗಿತ್ತು. ಒಂದೇ ದಿನ ಈ ದಂಪತಿ ಇಹಲೋಕ ತ್ಯೆಜಿಸುವ ಮೂಲಕ ಅಚ್ಛರಿ ಮೂಡಿಸಿದ್ದಾರೆ. ನಾಲ್ವರು ಪುತ್ರಿಯರನ್ನು ಹೊಂದಿದ್ದ ಈ ದಂಪತಿ, ಅಪಾರ ಬಂಧು, ಬಳಗವನ್ನು ಅಗಲಿದ್ದಾರೆ ಇಬ್ಬರೂ ಒಂದೇ ದಿನ ಸಾವನ್ನಪ್ಪಿದ ವಿಷಯ ಕೇಳಿ ಇಡೀ ದೇವರಹುಬ್ಬಳ್ಳಿ ಗ್ರಾಮ ಅಚ್ಛರಿಗೆ ಒಳಗಾಗಿತ್ತು.
43 ವರ್ಷವಾದರೂ ಹೆಣ್ಣು ಸಿಗಲಿಲ್ಲ ಎಂಬ ಕೊರಗಿನಲ್ಲಿ ಖಿನ್ನತೆ: ಶೂಟ್ ಮಾಡಿಕೊಂಡು ಸಾವಿಗೆ ಶರಣಾದ ವ್ಯಕ್ತಿ!
ಒಂದೇ ದಿನ ಸಾವನ್ನಪ್ಪಿದ ಗಂಡ ಹೆಂಡತಿ ಇಬ್ಬರನ್ನೂ ಮರಾಠಾ ಸಂಪ್ರದಾಯದ ಮೂಲಕ ಅಂತ್ಯಸಂಸ್ಕಾರ ಮಾಡಲಾಗಿದೆ. ಒಂದೇ ದಿನ ತಂದೆ, ತಾಯಿಯನ್ನು ಕಳೆದುಕೊಂಡಿದ್ದಕ್ಕೆ ಅವರ ಪುತ್ರಿಯರು ಗೋಳಾಡುತ್ತಿದ್ದ ದೃಶ್ಯ ಕರಳು ಹಿಂಡುವಂತಿತ್ತು. ಒಟ್ಟಿನಲ್ಲಿ ವೃದ್ದ ದಂಪತಿಗಳಿಬ್ಬರು ಸಾವಿನಲ್ಲಿ ಒಂದಾಗದ್ದಾರೆ.ಇನ್ನೊಂದಡೆ ಇಡಿ ಗ್ರಾಮಕ್ಕೆ ಗ್ರಾಮವೇ ಈ ಸತಿ ಪತಿ ಸಾವನ್ನ ಕಂಡು ಇಡಿ ಗ್ರಾಮದಲ್ಲಿ ಇವರು ಕೇವಲ ಸಾವನ್ನಪ್ಪಿಲ್ಲ ಸಾವಿನಲ್ಲೂ ಒಂದಾಗಿ ಇಡಿ ಗ್ರಾಮವೆ ಇವರನ್ನ ಎಂದು ಮರೆಯದಂತೆ ಮಾಡಿ ಹೋಗಿದ್ದಾರೆ.
