ರಾಮನಗರದಲ್ಲಿ ಟಿಪ್ಪು ಸುಲ್ತಾನ್ ಕಾಲದ ನೆಲಮಾಳಿಗೆ ಪತ್ತೆ!
- ರಾಮನಗರದಲ್ಲೂ ಇದೇ ಟಿಪ್ಪುಗೆ ಸಂಭಂದಿಸಿದ ಕುರುಹುಗಳು
- ಕಟ್ಟಡ ಕಾಮಗಾರಿ ಮಾಡ್ತಿದ್ದ ವೇಳೆ ನಿಗೂಢ ರೀತಿಯಲ್ಲಿ ನೆಲಮಾಳಿಗೆ ಪತ್ತೆ
- ಇದೇ ರೀತಿ ಮಾದರಿ ಹೋಲುವ ನೆಲಮಾಳಿಗೆಗಳು ಶ್ರೀರಂಗಪಟ್ಟಣ ಸೇರಿದಂತೆ ಹಲವೆಡೆ ಇದೆ
ರಾಮನಗರ (ಜು.6): ಆ ಪ್ರದೇಶದಲ್ಲಿ ಹಳೆಯ ಕಟ್ಟಡವನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡಲು ಕಾಮಗಾರಿ ನಡೆಯುತ್ತಿತ್ತು ಈ ವೇಳೆ ಪುರಾತನ ಕಾಲದ ನೆಲಮಾಳಿಗೆಯೊಂದು ಪತ್ತೆಯಾಗಿದ್ದು, ಅದು ಟಿಪ್ಪು ಸುಲ್ತಾನ್ ಕಾಲದ ಮಾದರಿಯನ್ನೇ ಹೋಲುವ ರೀತಿ ಕಾಣ್ತಿದೆ.
ರಾಮನಗರ ಟೌನ್ ನ ರೈಲ್ವೆ ಸ್ಟೇಷನ್ ರಸ್ತೆಯ ಯುಕೋ ಬ್ಯಾಂಕ್ ಪಕ್ಕದಲ್ಲಿ ಕಟ್ಟಡ ಕಾಮಗಾರಿ ಮಾಡ್ತಿದ್ದ ವೇಳೆ ನಿಗೂಢ ರೀತಿಯಲ್ಲಿ ನೆಲಮಾಳಿಗೆಯೊಂದು ಪತ್ತೆಯಾಗಿದ್ದೆ, ಹಳೆಯ ಕಟ್ಟಡವನ್ನು ತೆರವು ಮಾಡುವ ಸಂದರ್ಭದಲ್ಲಿ ಈ ನೆಲಮಾಳಿಗೆ ಪತ್ತೆಯಾಗಿದ್ದು, ಇದು ಟಿಪ್ಪು ಸುಲ್ತಾನ್ ಕಾಲದ ನೆಲಮಾಳಿಗೆ, ಟಿಪ್ಪು ಯುದ್ದ ಮಾಡುವ ಸಂದರ್ಭದಲ್ಲಿ ಈ ರೀತಿ ನೆಲಮಾಳಿಗೆ ಬಳಸುತ್ತಿದ್ದ, ಇದೇ ರೀತಿ ಮಾದರಿ ಹೋಲುವ ನೆಲಮಾಳಿಗೆಗಳು ಶ್ರೀರಂಗಪಟ್ಟಣ ಸೇರಿದಂತೆ ಹಲವು ಕಡೆ ಇದ್ದು,ಈ ಹಿಂದೆ ಶಸ್ತ್ರಾಸ್ತ್ರಗಳನ್ನು ಇಡಲು ಹಾಗೂ ಜೈಲಿನ ರೀತಿ ಈ ನೆಲಮಾಳಿಗೆಗಳನ್ನು ಬಳಸಲಾಗಿತ್ತು.
Asianet Suvarna Big 3 Impact; ಮಂಡ್ಯದ ಸ್ಲಂ ನಿವಾಸಿಗಳಿಗೆ ಸಿಕ್ತು ಮನೆ
ಜಿಲ್ಲಾಡಳಿತ ಇದನ್ನು ಪರಿಶೀಲಿಸಿ ಪುರಾತತ್ವ ಇಲಾಖೆಗೆ ಒಳಪಡಿಸಬೇಕು, ಒಂದು ವೇಳೆ ಇದು ಟಿಪ್ಪು ಸುಲ್ತಾನ್ ಕಾಲದ್ದೇ ಆದಲ್ಲಿ ಅದನ್ನು ಸಂರಕ್ಷಿಸಬೇಕು. ಅಂದಹಾಗೆ, ಈ ರೀತಿ ಒಂದು ನೆಲಮಾಳಿಗೆ ಪತ್ತೆಯಾಗಿರುವುದರ ಬಗ್ಗೆ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ದಾಖಲಾತಿಗಳನ್ನು ಪರೀಶಿಲನೆ ಮಾಡಿದ್ದಾರೆ. ಅಲ್ಲಿನ ಸ್ಥಳೀಯರು ಕೂಡ ಇದು ಟಿಪ್ಪು ಸುಲ್ತಾನ್ ಕಾಲದ ನೆಲಮಾಳಿಗೆ ಅಂತಾ ಹೇಳ್ತಾ ಇದ್ದಾರೆ.
Textbook Row; ಸರ್ಕಾರದ ವಿರುದ್ಧ ನಾರಾಯಣ ಗುರು ವಿಚಾರ ವೇದಿಕೆ ಪ್ರತಿಭಟನೆ
ಈ ಬಗ್ಗೆ ಜಿಲ್ಲಾಡಳಿತ ಕೂಡ ಕ್ರಮ ವಹಿಸುತ್ತದೆ. ಈ ಬ ಪುರಾತತ್ವ ಇಲಾಖೆಗೆ ನಾವು ಪತ್ರ ಬರೆಯುತ್ತೇವೆ. ಪುರಾತತ್ವ ಇಲಾಖೆ ಪರಿಶೀಲನೆ ಮಾಡಿದ ನಂತರ ಅದು ಟಿಪ್ಪು ಸುಲ್ತಾನ್ ಕಾಲದ ನೆಲಮಾಳಿಗೆ ಎಂದು ಖಚಿತವಾದ ಮೇಲೆ ಅದನ್ನು ಸಂರಕ್ಷಿಸಲಾಗುವುದು. ಒಟ್ಟಾರೆ ಈ ನೆಲಮಾಳಿಗೆ ಪತ್ತೆಯಾದ ನಂತರ ಸಾಕಷ್ಟು ಅನುಮಾನಗಳು ಹುಟ್ಟಿದ್ದು ಪುರಾತತ್ವ ಇಲಾಖೆಯ ಅಧಿಕಾರಿಗಳು ಪರಿಶಿಲೀಸಿದ ನಂತರವಷ್ಟೇ ಸತ್ಯಾ ಸತ್ಯತೆ ಹೊರಬೀಳಲಿದೆ.
ಹಲವಾರು ವರ್ಷಗಳಿಂದ ಕೆಸರಿನಿಂದ ಮುಚ್ಚಿದ್ದರೂ ಇದರ ಗೋಡೆಗಳು ಹಾಳಾಗಿಲ್ಲ. 'ಇದು ತುಂಬಾ ಹಳೆಯ ಕಟ್ಟಡ. ಹಿಂದೆ ಬೇರೆಯವರಿಂದ ಖರೀದಿಸಿದ್ದೆವು. ಆದರೆ, ಈಗ ಅಂಗಡಿ ನಿರ್ಮಿಸಲು ಬುನಾದಿ ತೆಗೆಯುವಾಗ ಸಣ್ಣಗೆ ಬೆಂಕಿ ಕಾಣಿಸಿಕೊಂಡಿದೆ. ಆಗ ಅದು ಬೆಳಕಿಗೆ ಬಂತು. ಅದರಲ್ಲಿ ನಮಗೆ ಏನೂ ಸಿಕ್ಕಿಲ್ಲ ಎಂದು ಮಾಲೀಕರು ಹೇಳಿದ್ದಾರೆ.
1930 ರ ಸುಮಾರಿಗೆ ಇಲ್ಲಿ ಪುರಸಭೆಯ ನೀರಿನ ಟ್ಯಾಂಕ್ ನಿರ್ಮಿಸಲಾಯಿತು ಎಂದು ಕೆಲವರು ನಮಗೆ ಹೇಳಿದರು. ನಂತರ 1960 ರಲ್ಲಿ ಅಬ್ದುಲ್ ಅಜೀಂ ಅವರು ಪುರಸಭೆಯ ಹರಾಜಿನಲ್ಲಿ ಭೂಮಿಯನ್ನು ತೆಗೆದುಕೊಂಡು ನಂತರ ಅವರ ಸಂಬಂಧಿಕರಿಗೆ ಉಡುಗೊರೆ ಪತ್ರವನ್ನು ನೀಡಲಾಯಿತು. 2009ರಲ್ಲಿ ಈ ಜಮೀನು ಖರೀದಿಸಿದ್ದೇವೆ ಎಂದು ಮಾಲೀಕ ನವಾಜ್ ಅಹಮದ್ ಹೇಳಿದ್ದಾರೆ.