ಬೆಂಗಳೂರು [ಫೆ.29] : ಪಾಕಿಸ್ತಾನ ಜಿಂದಾಬಾದ್‌’ ಎಂದು ಘೋಷಣೆ ಕೂಗಿ ಬಂಧನಕ್ಕೆ ಒಳಗಾಗಿರುವ ಅಮೂಲ್ಯ ಲಿಯೋನಾ ವಿಚಾರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.

ಶುಕ್ರವಾರ ಖುದ್ದು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಸೌಮೇಂದು ಮುಖರ್ಜಿ ಅವರೇ ಅಮೂಲ್ಯಳನ್ನು ಐದು ತಾಸು ಬಸವೇಶ್ವರ ನಗರ ಠಾಣೆಯಲ್ಲಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪಶ್ಚಿಮ ವಿಭಾಗದ ಡಿಸಿಪಿ ರಮೇಶ್‌ ಬಾನೂತ್‌ ಇದ್ದರು.

ಕೊಬ್ಬೇನೂ ಕರಗಿಲ್ಲ.. ಪೊಲೀಸರಿಗೆ ಪ್ರಶ್ನೆ ಮಾಡ್ತಿದ್ದಾಳೆ ಕ್ರಿಮಿ ಅಮೂಲ್ಯಾ!...

ಸಂಜೆ ಐದು ಗಂಟೆಯಿಂದ ರಾತ್ರಿ ಒಂಭತ್ತು ಗಂಟೆವರೆಗೆ ಆರೋಪಿಯನ್ನು ಹಿರಿಯ ಅಧಿಕಾರಿಗಳ ತಂಡ ವಿಚಾರಣೆ ನಡೆಸಿದೆ. ಈ ವೇಳೆ ಆರೋಪಿ, ತನಗೆ ಪ್ರಚೋದನಾಕಾರಿ ಭಾಷಣಕ್ಕೆ ಸಹಾಯ ಮಾಡಿದ ಎಲ್ಲ ವ್ಯಕ್ತಿಗಳ ಹೆಸರು ಮತ್ತು ಸಂಘಟನೆಯ ಹೆಸರನ್ನು ಬಾಯಿಬಿಟ್ಟಿದ್ದಾಳೆ ಎಂದು ಪೊಲೀಸರು ಹೇಳಿದರು.

ಆರೋಪಿ ಪೊಲೀಸ್‌ ಕಸ್ಟಡಿ ಅವಧಿ ಶನಿವಾರ ಮುಕ್ತಾಯಗೊಳ್ಳಲಿದ್ದು, ಆಕೆಯಿಂದ ಇನ್ನಷ್ಟುಮಾಹಿತಿ ಪಡೆಯಬೇಕಿರುವುದರಿಂದ ಸೋಮವಾರದವರೆಗೆ ವಶಕ್ಕೆ ಪಡೆಯಲು ತನಿಖಾ ತಂಡ ಚಿಂತಿಸಿದೆ ಎಂದು ಹೇಳಲಾಗಿದೆ.