'ತಲಕಾವೇರಿ ಪೂಜೆ ಹಕ್ಕನ್ನು ಬ್ರಾಹ್ಮಣರಿಂದ ನಮಗೆ ಕೊಡಿಸಿ'
ತಲಕಾವೇರಿ ಪೂಜೆಯ ಹಕ್ಕನ್ನು ನಮಗೆ ನೀಡಬೇಕು. ಬ್ರಾಹ್ಮಣರು ಇತ್ತೀಚೆಗೆ ಪೂಜೆ ಮಾಡುತ್ತಿದ್ದು, ಆದರೆ ಇದುನಮ್ಮ ಹಕ್ಕಾಗಿದ್ದು,ನಮಗೆ ಬಿಟ್ಟುಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಕೊಡಗು (ಆ.22): ತಲಕಾವೇರಿಯಲ್ಲಿ ಪೂಜೆ ಮಾಡಲು ನಮಗೆ ಅವಕಾಶ ನೀಡಿ ಎಂದು ಕೊಡಗಿನ ಮೂಲ ನಿವಾಸಿಗಳಾದ ಅಮ್ಮ ಕೊಡವ ಜನಾಂಗದಿಂದ ಬೇಡಿಕೆ ಸಲ್ಲಿಸಲಾಗಿದೆ.
ಅಖಿಲ ಅಮ್ಮಕೊಡವ ಸಮಾಜದಿಂದ ನಮ್ಮಹಕ್ಕನ್ನು ನಮಗೆ ಕೊಡಿ ಎಂದು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
80 ವರ್ಷಕ್ಕೆ ಮೊದಲು ಅಮ್ಮ ಕೊಡವರು ಕಾವೇರಿಗೆ ಪೂಜೆ ಸಲ್ಲಿಸುತ್ತಿದ್ದರು. ಬದಲಾದ ಕಾಲದಲ್ಲಿ ಬ್ರಾಹ್ಮಣ ಅರ್ಚಕರು ಎಂಟ್ರಿ ಕೊಟ್ಟರು. ಈಗ ಆ ಹಕ್ಕನ್ನು ನಮಗೆ ಕೊಡಿ ಎಂದು ಜಿಲ್ಲಾಧಿಕಾರಿ ಮೂಲಕಮನವಿ ಸಲ್ಲಿಸಲಾಗಿದೆ.
ತಲಕಾವೇರಿಯಲ್ಲಿ ಭೂಕುಸಿತ : ಸೇತುವೆಗೆ ಹಾನಿ...
ಸಸ್ಯಹಾರಿಯಾಗಿರುವ ಅಮ್ಮ ಕೊಡವರು ಕಾವೇರಿ ಹಾಗೂ ಇಗ್ಗುತ್ತಪ್ಪ ದೇವಾಲಯದಲ್ಲಿ ಪೂಜೆ ಮಾಡುತ್ತಿದ್ದರು. ಕೊಡವ ಜನಾಂಗದಲ್ಲಿ ಪುರೋಹಿತರಂತಿರುವ ಅಮ್ಮ ಕೊಡವರಿಗೆ ಇದೀಗ ಪೂಜೆ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ಕೊಡಗು : ಮುನ್ನೆಚ್ಚರಿಕೆಯಿಂದ ತಪ್ಪಿತು ಭಾರೀ ಹಾನಿ...
ಬ್ರಾಹ್ಮಣ ಅರ್ಚಕರಿಂದ ದಶಕದ ಹಿಂದೆ ಪೂಜೆ ಆರಂಭವಾಗಿದ್ದು, ಇದೀಗ ತಲಕಾವೇರಿಯಲ್ಲಿ ದೋಷಗಳು ಕಾಣುತ್ತಿವೆ. ನಮ್ಮನ್ನು ಸಂಪೂರ್ಣ ಕಡೆಗಣನೆ ಮಾಡಲಾಗಿದೆ. ಸಮಿತಿಯಲ್ಲಿಯೂ ನಮಗೆ ಸ್ಥಾನವಿಲ್ಲ. ಆದ್ದರಿಂದ ನಮ್ಮ ಹಕ್ಕನ್ನು ನಮಗೆ ಬಿಟ್ಟು ಕೊಡಿ ಎಂದು ಅಮ್ಮ ಕೊಡವ ಸಂಘದ ಗೌರವಾಧ್ಯಕ್ಷ ಬಿ.ಎನ್. ಪ್ರಥ್ಯು ಹೇಳಿದ್ದಾರೆ.