ಮಡಿಕೇರಿ(ಜ.19): ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡುವ ಬಗ್ಗೆ ಸಂಸದ ಹರಿಪ್ರಸಾದ್ ಮಡಿಕೇರಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಸ್ವಲ್ಪ ದಿನದ ನಂತರ ರಾಜ್ಯದಿಂದ ಅಮಿತ್ ಶಾ ಅವರನ್ನು ಗಡಿಪಾರು ಮಾಡಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ರಾಜ್ಯಕ್ಕೆ ಅಮಿತ್‌ ಶಾ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಸಂಸದ ಹರಿಪ್ರಸಾದ್‌, ಅಮಿತ್‌ ಶಾ ಅವರನ್ನು ಗುಜರಾತ್‌ನಿಂದ ಸುಪ್ರೀಂಕೋರ್ಟ್‌ ಗಡಿಪಾರು ಮಾಡಿತ್ತು. ಸ್ವಲ್ಪ ದಿನದ ನಂತರ ರಾಜ್ಯದಿಂದಲೂ ಗಡಿಪಾರು ಮಾಡಬೇಕಾಗುತ್ತದೆ ಎಂದಿದ್ದಾರೆ.

ಹುಬ್ಬಳ್ಳಿಯಲ್ಲಿ 'ಗೋ ಬ್ಯಾಕ್ ಅಮಿತ್ ಶಾ' ಕೂಗು; SDPI ಕಾರ್ಯಕರ್ತರ ಬಂಧನ

ಚುನಾವಣೆಯಲ್ಲಿ ಬಿಜೆಪಿಗೆ ಸರ್ಕಾರ ರಚನೆ ಮಾಡಲಾಗಿಲ್ಲ. ಶಾಸಕರ ಖರೀದಿ ಮಾಡಿ ಸರ್ಕಾರ ರಚನೆ ಮಾಡಿದರು. ಯಡಿಯೂರಪ್ಪ ಅವರ ಕಾಲ ಎಷ್ಟುದಿನ ಎನ್ನುವುದನ್ನು ಈಶ್ವರಪ್ಪ ಹೇಳುತ್ತಾರೆ. ಇನ್ನು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಅನುಮಾನ ಎಂದು ಅವರು ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಗೋಬ್ಯಾಕ್ ಅಮಿತ್‌ ಶಾ ಕೂಗು ಕೇಳಿ ಬಂದಿತ್ತು. ಎಸ್‌ಡಿಪಿಐ ಕಾರ್ಯಕರ್ತರು ಅಮಿತ್‌ ಶಾ ಅಬರ ಭೇಟಿಯನ್ನು ವಿರೋಧಿಸಿದ್ದರು. ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.