ಕಾರವಾರ(ನ.11): ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯನ್ನು ಕೇವಲ ಐದು ತಾಸುಗಳಲ್ಲಿ ಶಿರಸಿಯಿಂದ ಮಂಗಳೂರು(275 ಕಿ.ಮೀ) ಆಸ್ಪತ್ರೆಗೆ ಸಾಗಿಸಲಾಗಿದ್ದು, ಇದಕ್ಕೆ ಕರ್ನಾಟಕ ಆ್ಯಂಬುಲೆನ್ಸ್‌ ಚಾಲಕರ ಸಂಘಟನೆಯ ವ್ಯವಸ್ಥಿತ ಸಹಕಾರವಿತ್ತು.

ಮಧ್ಯಾಹ್ನ ಮೂರು ಗಂಟೆಗೆ ಶಿರಸಿಯಿಂದ ಹೊರಟ ಆ್ಯಂಬುಲೆಸ್ಸ್‌ ರಾಷ್ಟ್ರೀಯ ಹೆದ್ದಾರಿಯ ವಾಹನಗಳ ಸಂದಣಿಯನ್ನು ದಾಟಿಕೊಂಡು ರಾತ್ರಿ 8 ಗಂಟೆಗೆ ಮಂಗಳೂರಿಗೆ ತಲುಪಿತು. ರೋಗಿಯಿದ್ದ ಆ್ಯಂಬುಲೆನ್ಸ್‌ಗೆ ಕರ್ನಾಟಕ ಆ್ಯಂಬುಲೆಸ್ಸ್‌ ಚಾಲಕ ಸಂಘಟನೆಯ ಸದಸ್ಯರು ವಿಶಿಷ್ಟವಾಗಿ ಸಹಕರಿಸಿದ್ದಾರೆ. 

ಹೃದಯ ಚಿಕಿತ್ಸೆ, 40 ದಿನದ ಹಸುಗೂಸಿಗೆ ಮಂಗಳೂರಿಂದ- ಬೆಂಗಳೂರಿಗೆ ಝೀರೋ ಟ್ರಾಫಿಕ್

ಆಯಾ ತಾಲೂಕಿನ ವ್ಯಾಪ್ತಿಯಲ್ಲಿ ಈ ಆ್ಯಂಬುಲೆನ್ಸ್‌ ಹಿಂದೆ ಹಾಗೂ ಮುಂದೆ ಒಂದೊಂದು ಆ್ಯಂಬುಲೆನ್ಸ್‌ ಎಸ್ಕಾರ್ಟ್‌ ನೀಡಿತ್ತು. ಚತುಷ್ಪಥ ಕಾಮಗಾರಿಯ ಐಆರ್‌ಬಿ ಕಂಪೆನಿ ತನ್ನ ಗಡಿ ವರೆಗೆ ಆ್ಯಂಬುಲೆನ್ಸ್‌ಗಳನ್ನು ನೀಡಿತು. ಒಬ್ಬರಿಗೊಬ್ಬರು ಮೊಬೈಲ್‌ನಲ್ಲಿ ಸಂದೇಶ ನೀಡುತ್ತ ಮುಂದಿನ ಊರಿಗೆ ತಲುಪಿಸುತ್ತ ಸಂಘಟನೆಯ ಸದಸ್ಯರು ತಮ್ಮ ಒಗ್ಗಟ್ಟು ಪ್ರದರ್ಶಿಸಿದರು. ದೊಡ್ಡ ದೊಡ್ಡ ಶಹರಗಳಲ್ಲಿ ಪೊಲೀಸರು ಝೀರೋ ಟ್ರಾಫಿಕ್‌ ವ್ಯವಸ್ಥೆ ಮಾಡುತ್ತಿದ್ದರು.